ಕೆಎನ್ಎನ್ ಸಿನಿಮಾ ಡೆಸ್ಕ್: ನಟ ಡಾಲಿ ಧನಂಜಯ್ ಹಾಗೂ ಧನ್ಯತ ಮದುವೆ ಫಿಕ್ಸ್ ಆಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿರುವಂತ ಇಬ್ಬರೂ ತಮ್ಮ ಮದುವೆಗೆ ಆಮಂತ್ರಣ ನೀಡಿದ್ದಾರೆ. ಈ ಬೆನ್ನಲ್ಲೇ ಅವರ ಆಮಂತ್ರಣ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರಕ್ಕೆ ನೆಟ್ಟಿಗರು ಮಾತ್ರ ಸೂಪರ್ ಎಂದಿದ್ದಾರೆ.
ದಿನಾಂಕ 15-02-2025ರಂದು ಆರತಕ್ಷತೆ, ದಿನಾಂಕ 16-02-2025ರಂದು ಮುಹೂರ್ತದೊಂದಿಗೆ ನಟ ಡಾಲಿ ಧನಂಜಯ ಹಾಗೂ ಧನ್ಯತ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಆಮಂತ್ರಣ ಪತ್ರ ಮಾತ್ರ ಎಲ್ಲರನ್ನು ಗಮನ ಸೆಳೆಯುತ್ತಿದೆ. ಕೈಬರಹದ ಕನ್ನಡದ ಜೊತೆಗೆ ಇಂಗ್ಲೀಷ್ ಬಳಸಿ ಆಮಂತ್ರಣ ಪತ್ರಿಕೆಯನ್ನು ಮಾಡಿಸಲಾಗಿದೆ.
ಈ ಹಿಂದಿನ ಇನ್ ಲೇಂಡ್ ಲೆಟರ್ ಮಾದರಿಯಲ್ಲಿ ಇರುವಂತ ಆಮಂತ್ರಣ ಪತ್ರಿಕೆಯಲ್ಲಿ ಆಕ್ಟರ್, ಡಾಕ್ಟರ್ ಮದುವೆಗೆ ಬಂದು ಆಶೀರ್ವದಿಸಿ ಎಂಬುದರಿಂದ ಆರಂಭಗೊಳ್ಳುತ್ತಿದೆ. ಜೊತೆಗೆ ಸುಸ್ವಾಗತವನ್ನು ಕೋರಲಾಗಿದೆ.
ಆಮಂತ್ರಣ ಪತ್ರ ಎಂಬುದಾಗಿ ಪತ್ರದ ಎಡ ತುದಿಯಲ್ಲಿದ್ದು, ಒಳಗಿನ ಪುಟ ತೆರೆದು ನೋಡಿದರೇ ನಟ ಡಾಲಿ ಧನಂಜಯ್ ಅವರೇ ಕೈ ಬರಹದಲ್ಲಿ ಬರೆದು ಆಮಂತ್ರಿಸಿದಂತ ಅಕ್ಷಗಳು ಎಲ್ಲರನ್ನು ಸೆಳೆಯುತ್ತದೆ.
ಏನಿದೆ ಆಮಂತ್ರಣ ಪತ್ರಿಕೆಯಲ್ಲಿ ಮ್ಯಾಟರ್.?
ಪ್ರೀತಿಯ ಬಂಧು ಮಿತ್ರರೇ.. ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು, ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ.
ತಾವು ಎಲ್ಲಿದ್ದರೂ ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ. ಮಿತ್ರರೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ-ಧನ್ಯತ ಎಂದಿದ್ದಾರೆ.
ಇನ್ನೂ ಮುಖ ಪುಟದಲ್ಲಿ ಆಮಂತ್ರಣ ಪತ್ರ, ಧನ, ಧನ್ಯ ಮದುವೆ. ಸುಸ್ವಾಗತ ಎಂದಿದೆ. ಈ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸೂಪರ್ ಎಂದರೇ, ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳಿಗೆ ಬಿಜೆಪಿ-ಜೆಡಿಎಸ್ ವಿರೋಧ: ಸಿಎಂ ಸಿದ್ಧರಾಮಯ್ಯ ಆಕ್ರೋಶ