ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಈ ಬೆನ್ನಲ್ಲೇ ಡಿ ಗ್ಯಾಂಗ್ ಸಿನಿಮಾ ಮಾಡೋದಕ್ಕಾಗಿ ನಿರ್ಮಾಪಕರು ಟೈಟಲ್ ನೋಂದಣಿಗೆ ಮುಗಿ ಬಿದ್ದಿದ್ದರು. ಆದ್ರೇ ಆ ಟೈಟಲ್ ನೀಡಲಾಗಿರಲಿಲ್ಲ. ಈಗ ಖೈದಿ ನಂ.6106 ಟೈಟಲ್ ಗೆ ಪುಲ್ ಡಿಮ್ಯಾಂಡ್ ಹೆಚ್ಚಾಗಿದೆ.
ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿ ಗ್ಯಾಂಗ್ ಟೈಟಲ್ ನೀಡುವಂತೆ ನಿರ್ದೇಶಕ ರಾಕಿ ಸೋಮ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ದರ್ಶನ್ ಪ್ರಕರಣ ಕೋರ್ಟ್ ನಲ್ಲಿರುವ ಕಾರಣ, ಪೆಂಡಿಂಗ್ ನಲ್ಲಿ ಇರಿಸಲಾಗಿದೆ. ಈ ಮೂಲಕ ಡಿ ಗ್ಯಾಂಗ್ ಟೈಟಲ್ ನೀಡಿಲ್ಲ.
ಇದೀಗ ಡಿ ಗ್ಯಾಂಗ್ ಟೈಟಲ್ ಬಳಿಕ ಖೈದಿ ನಂ.6106 ಗೆ ನಿರ್ಮಾಪಕ ಭದ್ರಾವತಿಯ ಕುಮಾರ್ ಎಂಬುವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದ್ರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ಈ ಟೈಟಲ್ ಗೂ ಅನುಮತಿ ನೀಡಿಲ್ಲ. ಹೀಗಾಗಿ ಡಿ ಗ್ಯಾಂಗ್, ಹಾಗೂ ಖೈದಿ ನಂ.6106 ಟೈಟಲ್ ಗೆ ಪುಲ್ ಡಿಮ್ಯಾಂಡ್ ಹೆಚ್ಚಾಗಿದೆ.
ನಟ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತ ಡಿ ಗ್ಯಾಂಗ್ ಹಾಗೂ ಖೈದಿ ನಂಬರ್ 6106 ಟೈಟಲ್ ಯಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿದ್ದು ಯಾರೆಂಬುದು ಮಾಹಿತಿ ಇದೆ : ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ಕೋರ್ಟ್ ವಜಾ