ಕಲಬುರ್ಗಿ: ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಂತವರನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಈ ಖೆಡ್ಡಾಕ್ಕೆ ಬಿದ್ದಂತ ವಿಚಾರವನ್ನು ಪತ್ನಿಗೆ ತಿಳಿಸಿ ಬ್ಲಾಕ್ ಮೇಲ್ ಮಾಡಿ, ಲಕ್ಷ ಲಕ್ಷ ಹಣವನ್ನು ವಂಚಕರು ಪೀಕಿದ್ದಾರೆ.
ಕಲಬುರ್ಗಿಯ ಸೆನ್ ಠಾಣೆಯ ಪೊಲೀಸ್ ಪೇದೆಯನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಪೇದೆಯ ಪೋಟೋವನ್ನು ಪತ್ನಿಗೆ ತೋರಿಸಿ 8 ಲಕ್ಷ ಪೀಕಿದ್ದಾರೆ.
ಪೂಜ ಹಾಗೂ ಅಮರ್ ಸಿಂಗ್ ಎಂಬಾತ ಸೇರಿ ಸೆನ್ ಠಾಣೆಯ ಪೇದೆ ಹಾಗೂ ಪತ್ನಿಗೆ ಮತ್ತಷ್ಟು ಹಣ ನೀಡದೇ ಇದ್ದರೇ ಹನಿಟ್ರ್ಯಾಪ್ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದಾರೆ. 15 ಲಕ್ಷ ಹಣವನ್ನು ಕೊಡುವಂತೆಯೂ ಬೆದರಿಸಿದ್ದಾರೆ. ಹೀಗಾಗಿ ಈ ಬೆದರಿಕೆಗೆ ಹೆದರಿದಂತ ಪೊಲೀಸ್ ಪೇದೆ ಪತ್ನಿ ಆತ್ಮಹತ್ಯೆಗೂ ಯತ್ನಿಸಿರೋದಾಗಿ ಹೇಳಲಾಗುತ್ತಿದೆ.
ಈ ಸಂಬಂಧ ಕಲಬುರ್ಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎಸ್ಸಿಜಿ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಔಟ್ | Rohit Sharma
ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ