ನವದೆಹಲಿ: ಕರ್ನಾಟಕಕ್ಕೆ ಕಾವೇರಿ ನದಿ ನೀರು ವಿಚಾರದಲ್ಲಿ ಮತ್ತೆ ಶಾಕ್ ಅನ್ನು ಸಿಡಬ್ಲ್ಯೂಆರ್ ಸಿ ನೀಡಿದೆ. ಮತ್ತೆ ತಮಿಳುನಾಡಿಗೆ 1 ಟಿಎಂಸಿ ನೀರನ್ನು ಜುಲೈ.31ರವರೆಗೆ ಹರಿಸುವಂತೆ ಶಿಫಾರಸ್ಸು ಮಾಡಿ, ಶಾಕ್ ಮೇಲೆ ಶಾಕ್ ನೀಡಿದೆ.
ಇಂದು ದೆಹಲಿಯ ಕಚೇರಿಯಲ್ಲಿ ನಡೆದಂತ ಸಭೆಯಲ್ಲಿ ಕರ್ನಾಟಕದ ವಾದ ಆಲಿಸಿ, ಕರ್ನಾಟಕದ ವಾದವನ್ನು ಕಾವೇರಿ ನದಿ ನೀರು ವಿಚಾರದಲ್ಲಿ ಪುರಸ್ಕರಿಸಿದಂತ CWRC ಮತ್ತೆ 1 ಟಿಎಂಸಿ ನೀರನ್ನು ಹರಿಸುವಂತೆ ಶಿಫಾರಸ್ಸು ಮಾಡಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ.
ಹೌದು ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ. ದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಮಿತಿಯ 98ನೇ ಸಭೆಯಲ್ಲಿ ಈ ಶಿಫಾರಸು ಮಾಡಲಾಯಿತು.
ಈಗಾಗಲೇ ಕಾವೇರಿ ಕೊಳ್ಳದಲ್ಲಿ ಮಳೆಯ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸ್ವಲ್ಪ ಮಟ್ಟಿಗೆ ನೀರು ಕೆ ಆರ್ ಎಸ್ ಡ್ಯಾಂಗೆ ಸೇರಿದೆ. ಇದರ ನಡುವೆ ಇಂದು ಸಿ ಡಬ್ಲ್ಯೂ ಆರ್ ಸಿ ಕಾವೇರಿ ನದಿಯಿಂದ 1 ಟಿಎಂಸಿ ನೀರನ್ನ ತಮಿಳುನಾಡಿಗೆ ಹರಿಸುವಂತೆ ಶಿಫಾರಸ್ಸು ಮಾಡಿ ಆದೇಶಿಸಿದೆ.
ರಾಜ್ಯಾಧ್ಯಂತ ‘ಡೆಂಗ್ಯೂ’ ಆರ್ಭಟ: ‘ಆರೋಗ್ಯ ಇಲಾಖೆ’ಯಿಂದ ಈ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ
BREAKING : ವಾಲ್ಮೀಕಿ ಹಗರಣ : ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ