ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಕುರಿತಂತೆ ರಾಜ್ಯ ಚುನಾವಣಾಧಿಕಾರಿ ಎ.ಹನುಮನರಸಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿ.ಪಿ ಕೃಷ್ಣೇಗೌಡ ಹಾಗೂ ಸಿ.ಎಸ್ ಷಡಕ್ಷರಿ ಅವರು ಕಣದಲ್ಲಿದ್ದರು ಅಂತ ತಿಳಿಸಿದ್ದಾರೆ.
ಇಂದು ನಡೆದಂತ ಸಂಘದ ರಾಜ್ಯಾಧ್ಯಕ್ಷ ಸ್ಥಾನದ 2024-2029ನೇ ಅವಧಿಯ ಚುನಾವಣೆಯಲ್ಲಿ ಸಿಎಸ್ ಷಡಕ್ಷರಿಯವರು 507 ಮತಗಳನ್ನು ಗಳಿಸಿ ಪ್ರತಿ ಸ್ಪರ್ಧಿ ಬಿ.ಪಿ ಕೃಷ್ಣೇಗೌಡ ವಿರುದ್ಧ ಗೆಲುವು ಸಾಧಿಸಿರುವುದಾಗಿ ಘೋಷಿಸಿದ್ದಾರೆ.
ಇನ್ನೂ ರಾಜ್ಯ ಖಜಾಂಚಿ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಶಿವರುದ್ರಯ್ಯ ವಿ.ವಿ ಅವರು 485 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ನಾಗರಾಜ ಆರ್ ಜುಮ್ಮನ್ನವರ 467 ಮತಗಳಿಂದ ಸೋಲು ಕಂಡಿರುವುದಾಗಿ ತಿಳಿಸಿದ್ದಾರೆ.
ಕಜಕಿಸ್ತಾನದಲ್ಲಿ ವಿಮಾನ ಅಪಘಾತಕ್ಕೆ ಬಾಹ್ಯ ಹಸ್ತಕ್ಷೇಪವೇ ಕಾರಣ: ಅಜೆರ್ಬೈಜಾನ್ ಏರ್ಲೈನ್ಸ್
BREAKING: ‘ಬಿಜೆಪಿ ಮುಖಂಡ’ನಿಂದಲೇ ಕೀಚಕ ಕೃತ್ಯ: ಸಾಲಕೊಡಿಸುವುದಾಗಿ ‘ಲಾಡ್ಜ್’ಗೆ ಕರೆದೊಯ್ದು ಮಹಿಳೆ ಮೇಲೆ ಅತ್ಯಾಚಾರ