ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸಿಎಸ್ ಷಡಕ್ಷರಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಅವಧಿಗೆ ರಾಜ್ಯಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ.
ಇಂದು ನೆಡೆದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ಸಿ ಎಸ್.ಷಡಕ್ಷರಿ (507 ಮತಗಳು ) ಹತ್ತಿರದ ಪ್ರತಿಸ್ಪರ್ಧಿ ಕೃಷ್ಣ ಗೌಡ (442 ಮತಗಳು )ಅವರಿಗಿಂತ 65 ಹೆಚ್ಚಿನ ಮತದ ಅಂತರದಿಂದ ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಜಿ ಸ್ಥಾನದ ಚುನಾವಣೆಯಲ್ಲಿ ಶಿವರುದ್ರಯ್ಯ ವಿ. ವಿ. (485 ಮತಗಳು ) ರವರು ಹತ್ತಿರದ ಪ್ರತಿಸ್ಪರ್ಧಿ ನಾಗರಾಜ ಆರ್ ಜುಮ್ಮನವರ್ (467 ಪಡೆದ ಮತಗಳು ) ರವರಿಗಿಂತ 18 ಮತಗಳ ಅಂತರದಿಂದ ಶಿವರುದ್ರಯ್ಯ ವಿ. ವಿ. ಅವರು ಗೆದ್ದು ಬೀಗಿದ್ದಾರೆ.
ಇನ್ನೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿ ಎಸ್. ಷಡಕ್ಷರಿ ಅವರಿಗೆ ಹಾಗೂ ಖಜಾಂಜಿಯಾಗಿ ಆಯ್ಕೆಯಾದ ಶಿವರುದ್ರಯ್ಯ ವಿ. ವಿ. ಅವರಿಗೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಂತೋಷ ಕುಮಾರ್ ಏನ್, ರಾಜ್ಯ ಪರಿಷತ್ ಸದಸ್ಯರು ದೇವೇಂದ್ರಪ್ಪ ಕೆ, ಖಜಾಂಚಿ ಸಹದೇವ ಎಸ್ ಬಡಿಗೇರ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಡಿ. ಕೆ. ತಮ್ಮಣ್ಣ ಕೆಳದಿ, ರಾಜ್ಯ ಪರಿಷತ್ ಸದಸ್ಯರುಗಳು ಅಭಿನಂದನೆಗಳನ್ನೂ ಸಲ್ಲಿಸಿದ್ದಾರೆ.