ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ಗರಿಗೆದರಿದೆ. ಹಾಲಿ ಅಧ್ಯಕ್ಷ ಸಿಎಸ್ ಷಡಕ್ಷರಿ ಅವರು ಮತ್ತೊಂದು ಅವಧಿಗೆ ನೇಮಕ್ಕಾಗಿ ತಮ್ಮ ಉಮೇಧುವಾರಿಕೆಯನ್ನು ಸಲ್ಲಿಸಿದ್ದಾರೆ.
2024-2029ನೇ ಅವಧಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಚುಕ್ಕಾಣಿ ಹಿಡಿಯಲು ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಸಿಎಸ್ ಷಡಕ್ಷರಿ ನಾಮಪತ್ರವನ್ನು ಸಲ್ಲಿಸಿದದಾರೆ. ಹಲವಾರು ಜಿಲ್ಲೆಗಳ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಈ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್.27, 2024ರಂದು ಮತದಾನದಲ್ಲಿ ಪಾಲ್ಗೊಂಡು, ಮತ ಚಲಾಯಿಸಲಿದ್ದಾರೆ.
ಡಿಸೆಂಬರ್.8ರಂದು ಬೆಂಗಳೂರಲ್ಲಿ ನಡೆದಿದ್ದ ಸಮಾಲೋಚನಾ ಸಭೆಯಲ್ಲಿ ಹಾಜರಿದ್ದಂತ 850ಕ್ಕೂ ಹೆಚ್ಚು ಮತದಾರರು ಅಧ್ಯಕ್ಷ ಸ್ಥಾನಕ್ಕೆ ಸಿಎಸ್ ಷಡಕ್ಷರಿ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದರು ಎನ್ನಲಾಗುತ್ತಿದೆ. ಆದರೇ ಡಿ.27ರಂದು ನಡೆಯಲಿರುವಂತ ಚುನಾವಣೆಯಲ್ಲಿ ಯಾರು ಗೆಲುವು ಎಂಬುದು ನಿರ್ಧಾರವಾಗಲಿದೆ.
ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ಗುಡ್ ನ್ಯೂಸ್: ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀನೆಗೆ ಪರಿಗಣನೆ
GOOD NEWS: ಸಾಮಾನ್ಯ ಜನರಿಗೆ ಬಿಗ್ ರಿಲೀಫ್: ಗಗನಕ್ಕೇರಿದ್ದ ‘ಟೊಮೆಟೊ, ಈರುಳ್ಳಿ’ ಬೆಲೆ ಇಳಿಕೆ