ಬೆಂಗಳೂರು: ಡಿಸೆಂಬರ್.31ರಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಸಂಬಂಧ ನಾಳೆ ಮಹತ್ವದ ಸಭೆಯನ್ನು ಕಾರ್ಮಿಕ ಇಲಾಖೆಯ ಆಯುಕ್ತರೊಂದಿಗೆ ನಡೆಸಲಿದ್ದಾರೆ.
ನಾಳೆ ಡಿಸೆಂಬರ್.31ರಂದು ಮುಷ್ಕರಕ್ಕೆ ಕರೆ ನೀಡಿರುವಂತ ಸಾರಿಗೆ ಸಂಘಟನೆಗಳ ಜೊತೆಗೆ ಕಾರ್ಮಿಕ ಇಲಾಖೆಯಿಂದ ಸಭೆ ನಡೆಸಲಾಗುತ್ತಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಕಾರ್ಮಿಕ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಭೆ ನಡೆಯಲಿದೆ.
ನಾಳಿನ ಸಭೆಯಲ್ಲಿ ಕೆ ಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ 4 ನಿಗಮಗಳ ಎಂಡಿಗಳು ಕೂಡ ಭಾಗಿಯಾಗಲಿದ್ದಾರೆ. ಅಲ್ಲದೇ ಮುಷ್ಕರಕ್ಕೆ ಕರೆ ನೀಡಿದವರು, ಜಂಟಿ ಕ್ರಿಯಾ ಸಮಿತಿಯವರು ಕೂಡ ಭಾಗಿಯಾಗಲಿದ್ದಾರೆ.
ಮುಷ್ಕರ ಸಂಬಂಧ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಂಘಟನೆಗಳಿಂದ ಸರ್ಕಾರಕ್ಕೆ ನೋಟಿಸ್ ನೀಡಲಾಗಿತ್ತು. ಕಾರ್ಮಿಕ ಇಲಾಖೆಯ ನಿಯಮದಂತೆ ಮುಷ್ಕರಕ್ಕೆ ನೋಟಿಸ್ ನೀಡಿದ 21 ದಿನಗಳ ನಂತ್ರವೇ ಮುಷ್ಕರ ನಡೆಸಬೇಕು. ಹೀಗಾಗಿ ನಾಳೆ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವ ನಿರ್ಧಾರ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಬೇಕಿದೆ.
BREAKING: ಸಾಗರದ ‘ಗಣಪತಿ ಬ್ಯಾಂಕ್ ಚುನಾವಣೆ’ ಫಲಿತಾಂಶ ಪ್ರಕಟ: ಯಾರೆಲ್ಲ ಗೆಲುವು? ಇಲ್ಲಿದೆ ಲೀಸ್ಟ್
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ