ರಾಯಚೂರು : ಕೃಷ್ಣಾ ನದಿ ದಡದಲ್ಲಿ ಕುರಿ ಮೇಯಿಸುತ್ತಿದ್ದ ಬಾಲಕನನ್ನು ಮೊಸಳೆಯೊಂದು ಎಳೆದುಕೊಂಡು ಹೋಗಿರುವ ಘಟನೆ ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಲಕನ್ನು ಗಂಜಳ್ಳಿ ಗ್ರಾಮದ ವಿಶ್ವ (12) ಎಂದು ಗುರುತಿಸಲಾಗಿದ್ದು, ಕುರಿಗಳಿಗೆ ನೀರು ಕುಡಿಸಲು ಕೃಷ್ಣಾನದಿಗೆ ಹೋದಾಗ ಮೊಸಳೆ ದಾಳಿ ಮಾಡಿ ವಿಶ್ವನನ್ನು ಎಳೆದೊಯ್ದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಬೋಟ್ ಹಾಕಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದೆ.