ಬೆಂಗಳೂರು: ಧರ್ಮಸ್ಥಳದ ಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ನಡೆದ ಗೂಂಡಾಗಳ ಧಾಳಿಯನ್ನು ಸಿ.ಪಿ.ಐ.(ಎಂ) ಪಕ್ಷದ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ತೀವ್ರವಾಗಿ ಖಂಡಿಸಿದ್ದಾರೆ.
ದಶಕಗಳಿಂದ ನಡೆದ ದೌರ್ಜನ್ಯ , ಕೊಲೆ, ಸುಲಿಗೆಗಳಿಂದ ಜನ ಅಲ್ಲಿ ತತ್ತರಿಸಿದ್ದಾರೆ. ಸಾಕ್ಷಿ ಫಿರ್ಯಾದುದಾರರೊಬ್ಬರ ಹೇಳಿಕೆಯ ಮೇಲೆ ನಡೆಯುತ್ತಿರುವ ಉತ್ಕನನದಿಂದ ಸತ್ಯ ಹೊರಬರುವ ಭಯದಿಂದ ಇಂತಹ ಕೃತ್ಯಗಳಿಗೆ ಮುಂದಾಗಿರುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರಕಾರ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ.
ಮಾಧ್ಯಮದ ಮೇಲೆ ಮಾಡಿದ ಹಲ್ಲೆ ಅತ್ಯಂತ ಖಂಡನೀಯವಾಗಿದ್ದು ಘಟನೆಗೆ ಕಾರಣರಾದವರು ಮತ್ತು ಪ್ರಚೋದನೆ ಮಾಡಿದವರನ್ನು ತಕ್ಷಣವೇ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಬೇಕು. ಹಲ್ಲೆಗೊಳಗಾದವರಿಗೆ ಸೂಕ್ತ ಚಿಕಿತ್ಸೆ ಮತ್ತು ರಕ್ಷಣಾ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಉತ್ಕನನ ನಡೆಯುತ್ತಿರುವ ಸ್ಥಳದಲ್ಲಿ ಸಹಜವಾಗಿಯೆ ಮಾಧ್ಯಮ ಗಳು ಮತ್ತು ಸಾರ್ವಜನಿಕರು ನರೆಯುತ್ತಿದ್ದು ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಬೇಕು. ಪದ್ಮಲತಾ ವೇದವಲ್ಲಿ ಸೌಜನ್ಯ ಮತ್ತು ಇತರ ಎಲ್ಲ ನ್ಯಾಯಕ್ಕಾಗಿ ಕಾದಿರುವ ಸಾವುಗಳ ಸಮಗ್ರ ತನಿಖೆಯನ್ನು ಮಾಡಬೇಕು. ಎಸ್.ಐ.ಟಿ. ಯ ಕೆಲಸಗಳಿಗೆ ಅಡ್ಡಿಯಾಗದಂತೆ ಮತ್ತು ಸತ್ಯ ವನ್ನು ಹೊರಗೆ ತೆಗೆಯಲು ಬೇಕಾದ ಎಲ್ಲ ರಕ್ಷಣಾ ವ್ಯವಸ್ಥೆ ಗಳನ್ನು ಮಾಡಬೇಕೆಂದು ಸಿ.ಪಿ.ಐ.(ಎಂ) ಕರ್ನಾಟಕ ರಾಜ್ಯ ಸಮಿತಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಬಿಜೆಪಿಗರೇ ನಮ್ಮ ಮೆಟ್ರೋ ಬಗ್ಗೆ ಅರ್ಧ ಸತ್ಯಗಳನ್ನು ಹರಡುವುದನ್ನು ನಿಲ್ಲಿಸಿ: ಸಚಿವ ರಾಮಲಿಂಗಾರೆಡ್ಡಿ
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!