Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

21/02/2026 8:03 AM
BREAKING NEWS

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು !

21/02/2026 7:36 AM

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ !

21/02/2026 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿ.ಪಿ ಯೋಗೇಶ್ವರ್ ಹುಲಿ ಬೋನಿಗೆ ಹೋಗಿದ್ದಾರೆ, ಈಗ ಮಣಿಸಬೇಕು, ಇಲ್ಲವೇ ಬಲಿ ಆಗಬೇಕು: ಸಿ.ಟಿ ರವಿ
KARNATAKA

ಸಿ.ಪಿ ಯೋಗೇಶ್ವರ್ ಹುಲಿ ಬೋನಿಗೆ ಹೋಗಿದ್ದಾರೆ, ಈಗ ಮಣಿಸಬೇಕು, ಇಲ್ಲವೇ ಬಲಿ ಆಗಬೇಕು: ಸಿ.ಟಿ ರವಿ

By kannadanewsnow0923/10/2024 4:27 PM

ಬೆಂಗಳೂರು: ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದುರ್ಬಲವೆಂದು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಂತಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರ ನೀಡಿದರು. ಯೋಗೇಶ್ವರ್ ಅವರು ಕಾಂಗ್ರೆಸ್ಸಿಗೆ ಹೋದುದರಿಂದ ಒಂದಂತೂ ನಾವು ಊಹಿಸಬಹುದು. 136 ಶಾಸಕರಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರಂಥ ಪ್ರಬಲ ನಾಯಕರನ್ನು ಹೊಂದಿದ ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿ ದುರ್ಬಲ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.

ನಿನ್ನೆ ಮೊನ್ನೆಯವರೆಗೂ ನಾನೇ ಕ್ಯಾಂಡಿಡೇಟ್ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರು. ಪೂರ್ವತಯಾರಿ ಮಾಡಿ ಓಡಾಡುತ್ತಿದ್ದರು. ಡಿ.ಕೆ. ಸುರೇಶ್ ಅಲ್ಲಿ ಅಭ್ಯರ್ಥಿ ಎಂದು ಬಹಳ ಜನ ಅಂದುಕೊಂಡಿದ್ದರು. ಅಲ್ಲಿ ಯೋಗೇಶ್ವರ್‍ಗೇ ಟಿಕೆಟ್ ಕೊಟ್ಟು ಅಸಹಾಯಕತೆ ತೋರಿಸುತ್ತಾರೋ, ಅಥವಾ ಯೋಗೇಶ್ವರ್ ಜತೆಗಿಟ್ಟುಕೊಂಡು ಡಿ.ಕೆ.ಸುರೇಶ್ ಅಭ್ಯರ್ಥಿ ಆಗುತ್ತಾರೋ ನೋಡಬೇಕಿದೆ. ಆದರೆ, ಕಾಂಗ್ರೆಸ್ ತಾನು ಚನ್ನಪಟ್ಟಣದಲ್ಲಿ ದುರ್ಬಲ ಎಂದು ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.

ಹುಲಿ ಮಣಿಸುವರೇ? ಬಲಿ ಆಗುವರೇ?

ಯೋಗೇಶ್ವರ್ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡ ರಾಜಕಾರಣಿ. ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ರಾಜಕಾರಣ ಮಾಡಿದವರು. ಡಿ.ಕೆ.ಶಿವಕುಮಾರ್ ಮತ್ತು ಅವರ ನಡುವಿನ ಶತ್ರುತ್ವ ಇವತ್ತು ನಿನ್ನೆಯದಲ್ಲ. ಹುಲಿ ಬೋನಿಗೆ ಹೋಗಿದ್ದಾರೆ. ಒಂದೋ ಹುಲಿಯನ್ನು ಮಣಿಸಬೇಕು; ಇಲ್ಲವೇ ಹುಲಿಗೆ ಬಲಿ ಆಗಬೇಕು ಎಂದು ತಿಳಿಸಿದರು.

ಇವತ್ತೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ರಾಜಕಾರಣ ಮತ್ತು ಯೋಗೇಶ್ವರ್ ರಾಜಕಾರಣದ ಚಿಂತನೆಯ ನಡುವೆ ಅಗಾಧವಾದ ಅಂತರವಿದೆ. ಯೋಗೇಶ್ವರ್ ಅವರು ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುತ್ತಾರೆ. ಸದಾಕಾಲ ರಾಜಕೀಯ ಕ್ಷೇತ್ರದ ಲಾಭ ನಷ್ಟದ ಲೆಕ್ಕ ಹಾಕುತ್ತಾರೆ. ನಮ್ಮದು ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಎಂದು ವಿವರಿಸಿದರು. ಲಾಭ ನಷ್ಟದ ಲೆಕ್ಕಾಚಾರಕ್ಕೆ ಅವಕಾಶವೂ ಇಲ್ಲ; ಆ ಚಿಂತನೆಯೂ ನಮ್ಮಲ್ಲಿಲ್ಲ ಎಂದು ನುಡಿದರು.

ಯೋಗೇಶ್ವರ್ ರಾಜೀನಾಮೆ ಕೊಟ್ಟ ಮೇಲೆ ಸೋದರಿಕೆ ಸಂಬಂಧವೇನೂ ಇಲ್ಲ. ನಾವು ಎನ್‍ಡಿಎ ಆಗಿ ಚನ್ನಪಟ್ಟಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ನಾವು ನಿರ್ಣಯಿಸಿ ಚರ್ಚೆ ಮಾಡುವುದಿಲ್ಲ. ಚರ್ಚಿಸಿ ನಿರ್ಣಯಕ್ಕೆ ಬರುತ್ತೇವೆ. ಒಂದೂವರೆ ಎರಡು ತಿಂಗಳ ಹಿಂದೆಯೇ ನಾವು ಚನ್ನಪಟ್ಟಣದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಜೊತೆ ಚರ್ಚಿಸಿದ್ದೇವೆ. ಚನ್ನಪಟ್ಟಣ ಕುಮಾರಸ್ವಾಮಿಯವರು ಪ್ರತಿನಿಧಿಸಿದ ಕ್ಷೇತ್ರ. ಏಕಪಕ್ಷೀಯ ನಿರ್ಣಯ ಹೇರುವುದು, ನಮ್ಮ ನಿರ್ಣಯ ಹೇರುವುದಾಗಲೀ ಮೈತ್ರಿ ಅನಿಸುವುದಿಲ್ಲ. ಇಬ್ಬರೂ ಸೇರಿ ನಿರ್ಣಯಿಸಬೇಕಾಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಜನಹಿತ ಮರೆತ ಸರಕಾರ

ಬೆಂಗಳೂರಿನಲ್ಲಿ ಜನರ ಬದುಕು ಬೀದಿಗೆ ಬಿದ್ದಿದೆ. ಇವತ್ತು ಜನಹಿತ ಮರೆತ ಸರಕಾರ ರಾಜ್ಯದಲ್ಲಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಸ್ವಾಗತ ಮಾಡುವುದು ಜನರ ಬದುಕಿಗೆ ಸ್ಪಂದಿಸುವುದಕ್ಕಿಂತ ಮುಖ್ಯವಾಗಿದೆ. ಜನರ ಸಮಸ್ಯೆಗಳಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಇಂಥ ಸರಕಾರ ಯಾಕಿರಬೇಕು ಹೇಳಿ ಎಂದು ಪ್ರಶ್ನಿಸಿದರು.

ಮಳೆಯಿಂದ ಕಟ್ಟಡ ಕುಸಿತ ಸೇರಿ ಮಳೆ ಕಾರಣಕ್ಕೆ 8ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸರಕಾರಕ್ಕೆ ಮಾನವೀಯತೆ ಇದೆಯೇ? ಸ್ಪಂದನೆ ಏನು? ಎಂದು ಕೇಳಿದರಲ್ಲದೆ, ಭ್ರಷ್ಟಾಚಾರದಲ್ಲಿ ತೊಡಗಿದ ಬದುಕಿದ್ದೂ ಸತ್ತಂತಿರುವ ಸರಕಾರ ಇಲ್ಲಿದೆ ಎಂದು ಟೀಕಿಸಿದರು.

ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ಆಗ ಎಲ್ಲರೂ ಸಮಾನರಾಗುತ್ತಾರೆ. ಆಗ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಂತಾಗಲಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

BIG UPDATE: ಬೆಂಗಳೂರು ಕಟ್ಟಡ ಕುಸಿತ ದುರಂತ: ಮತ್ತೋರ್ವ ಕಾರ್ಮಿಕನ ಶವ ಪತ್ತೆ, ಮೃತರ ಸಂಖ್ಯೆ 8ಕ್ಕೆ ಏರಿಕೆ

BIG UPDATE: ಇಂದು ಸಂಜೆ 5.30ಕ್ಕೆ ಬೆಂಗಳೂರು ಕಟ್ಟಡ ಕುಸಿತ ದುರಂತ ಸ್ಥಳಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ | CM Siddaramaiah

Share. Facebook Twitter LinkedIn WhatsApp Email

Related Posts

BREAKING NEWS

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು !

21/02/2026 7:36 AM1 Min Read

‘ಕರ್ನಾಟಕ ರಾಜ್ಯ ಮುಕ್ತ ವಿವಿ’ಯಲ್ಲಿ ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

21/02/2026 7:23 AM1 Min Read

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

21/02/2026 7:05 AM3 Mins Read
Recent News

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

21/02/2026 8:03 AM
BREAKING NEWS

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು !

21/02/2026 7:36 AM

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ !

21/02/2026 7:28 AM

‘ಕರ್ನಾಟಕ ರಾಜ್ಯ ಮುಕ್ತ ವಿವಿ’ಯಲ್ಲಿ ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

21/02/2026 7:23 AM
State News
BREAKING NEWS KARNATAKA

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು !

By kannadanewsnow5721/02/2026 7:36 AM KARNATAKA 1 Min Read

ಬಾಗಲಕೋಟೆ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ…

‘ಕರ್ನಾಟಕ ರಾಜ್ಯ ಮುಕ್ತ ವಿವಿ’ಯಲ್ಲಿ ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

21/02/2026 7:23 AM

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

21/02/2026 7:05 AM

ನಿಮ್ಮ ಬಳಿ `ಡೆಬಿಟ್ ಕಾರ್ಡ್’ ಇದ್ರೆ ಲಕ್ಷಾಂತರ ಮೌಲ್ಯದ ಉಚಿತ ವಿಮೆ ಸಿಗಲಿದೆ : ಕ್ಲೈಮ್ ಮಾಡುವುದು ಹೇಗೆ? ತಿಳಿಯಿರಿ !

21/02/2026 6:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.