ಬೆಂಗಳೂರು: ರಾಜ್ಯದಲ್ಲಿ ಇಂದು ದಾಖಲೆಯ 298 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ಇಂದು ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 6900 ಹಾಗೂ RAT ಪರೀಕ್ಷೆ ಮೂಲಕ 891 ಜನರು ಸೇರಿದಂತೆ 7791 ಮಂದಿಯನ್ನು ಕೋವಿಡ್ ಸೋಂಕು ( Covid19 Case ) ಪತ್ತೆ ಪರೀಕ್ಷೆಗೆ ಒಳಪಡಿಸಿರೋದಾಗಿ ತಿಳಿಸಿದೆ.

ಈ ಪರೀಕ್ಷೆಯಲ್ಲಿ ಬೆಂಗಳೂರಲ್ಲಿ 172, ಬಾಗಲಕೋಟೆ 4, ಬಳ್ಳಾರಿ 6, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 1, ಚಾಮರಾಜನಗರ 8, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 5, ಚಿತ್ರದುರ್ಗ 1, ದಕ್ಷಿಣ ಕನ್ನಡ 11, ದಾವಣಗೆರೆ 1, ಧಾರವಾಡ 3, ಗದಗ 1, ಹಾಸನ 19, ಕಲಬುರ್ಗಿ 3, ಕೊಡಗು 2, ಕೋಲಾರ 1, ಕೊಪ್ಪಳ 6, ಮಂಡ್ಯ 11, ಮೈಸೂರು 18, ರಾಯಚೂರು 1, ರಾಮನಗರ 2, ಶಿವಮೊಗ್ಗ 3, ತುಮಕೂರು 5, ಉತ್ತರ ಕನ್ನಡ 4, ವಿಜಯನಗರ 5 ಸೇರಿದಂತೆ 298 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಇನ್ನೂ ಕಳೆದ 24 ಗಂಟೆಯಲ್ಲಿ ಧಾರವಾಡ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಹಾಗೂ ಬೆಂಗಳೂರಲ್ಲಿ ಇಬ್ಬರು ಸೇರಿದಂತೆ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 298 ಮಂದಿಗೆ ಸೋಂಕು ದೃಢಪಟ್ಟ ಕಾರಣ, ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1240ಕ್ಕೆ ಏರಿಕೆಯಾಗಿದೆ.

ಗಮನಿಸಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

BREAKING ; ಫೆ.13ರಂದು ಬುಬುಧಾಬಿಯಲ್ಲಿ ‘ಪ್ರಧಾನಿ ಮೋದಿ’ ಮೆಗಾ ಕಾರ್ಯಕ್ರಮ, 50,000 ಜನರು ಭಾಗಿ |Ahlan Modi

Share.
Exit mobile version