ಬೆಂಗಳೂರು: ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಕಾಂಗ್ರೆಸ್ ಪಕ್ಷದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ರಾಹುಲ್‌ಗಾಂಧಿಗೆ ಸಮನ್ಸ್ ಜಾರಿಗೊಳಿಸಿದೆ.

ಬಿಜೆಪಿ ವಿರುದ್ಧವಾಗಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಡಬ್ಬಲ್ ಎಂಜಿನ್ ಸರ್ಕಾರ ಹಾಗೂ 40% ಸರ್ಕಾರ ಎಂದು ಜಾಹೀರಾತು ನೀಡಲಾಗಿತ್ತು. ಈ ಸಂಬಂಧ ಬಿಜೆಪಿ ಕಾನೂನು ಘಟಕದ ವಕೀಲ ವಿನೋದ್‌ ಕುಮಾರ್ ಸಲ್ಲಿಸಿದ್ದ ಖಾಸಗಿ ದೂರು ನೀಡಿದ್ದರು.

ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.

ಮಾರ್ಚ್ 28ಕ್ಕೆ ಸಿದ್ದರಾಮಯ್ಯ, ಡಿಕೆಶಿ ಹಾಗೂ ರಾಹುಲ್ ಗಾಂಧಿ ಕೋರ್ಟ್ ಗೆ ಖುದ್ದು ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಲಾಗಿದೆ.

BREAKING : ಪೇಟಿಎಂ ಗ್ರಾಹಕರಿಗೆ ಬಿಗ್ ರಿಲೀಫ್ : RBI ಮಹತ್ವದ ಕ್ರಮ, ‘UPI ಖಾತೆ ವರ್ಗಾವಣೆ’ ಸುಲಭ

BREAKING: ರಾಜ್ಯದಲ್ಲಿ ‘ಅಮಾನವೀಯ’ ಘಟನೆ: ಉತ್ತರ ಕನ್ನಡದಲ್ಲಿ ನಡುರಸ್ತೆಯಲ್ಲೇ ‘ಮಹಿಳೆ ಬಟ್ಟೆ’ ಹರಿದು ಹಲ್ಲೆ

Share.
Exit mobile version