ಮೈಸೂರು: ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಬಿಡುಗಡೆ ಸಂಕಷ್ಟ ಎದುರಾಗಿದೆ. ಏಪ್ರಿಲ್.11ರಂದು ತೆರೆ ಕಾಣಬೇಕಿದ್ದಂತ ಮೈದಾನ್ ಚಿತ್ರವು ಕಥೆ ಕದ್ದಂತ ಚಿತ್ರವಾಗಿದೆ ಎಂಬ ಕಾರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ಮೈದಾನ್ ಚಿತ್ರ ಏಪ್ರಿಲ್ 11ರಂದು ದೇಶಾದ್ಯಂತ ರಿಲೀಸ್ ಆಗಬೇಕಿತ್ತು. ಆದ್ರೇ ತಮ್ಮ ಸಿನಿಮಾದ ಮೂಲ ಕತೆಯನ್ನು ಕದ್ದಿದ್ದಾರೆ ಎಂಬುದಾಗಿ ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು.
ಮೈಸೂರು ನ್ಯಾಯಾಲಯದ ಮುಂದೆ ದೂರು ದಾರ ಅನಿಲ್ ಕುಮಾರ್, 2018ರ ಚಿತ್ರದ ಕತೆ ಬಗ್ಗೆ ಲಿಂಕ್ಡಿನ್ ನಲ್ಲಿ ಹಾಕಿದ್ದೆ. ಕಥೆ ಗಮನಿಸಿ ಸುಕ್ ದಾಸ್ ಸೂರ್ಯವಂಶಿ ಎಂಬುವರು ಚರ್ಚಿಸಿದ್ದರು. 2019ರ ಫೆಬ್ರವರಿಯಲ್ಲಿ ಹೆಸರು ಕೂಡ ನೋಂದಾಯಿಸಲಾಗಿತ್ತು. ನನ್ನ ಮೂಲ ಕತೆ ಕದ್ದು ಮೈದಾನ್ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರ ಬಿಡುಗಡೆ ತಡೆ ನೀಡುವಂತೆ ಮನವಿ ಮಾಡಿದ್ದರು.
ದೂರುದಾರರ ಮನವಿ ಪುರಸ್ಕರಿಸಿರುವಂತ ಮೈಸೂರು ನ್ಯಾಯಾಲಯವು, ಅಮಿತ್ ಶರ್ಮಾ ನಿರ್ದೇಶನದ ಮೈದಾನ್ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದಾರೆ.
ರಾಜ್ಯದ ‘ಸರ್ಕಾರಿ ನೌಕರ’ರೇ ಎಚ್ಚರ.! ‘ರಾಜಕೀಯ ಪಕ್ಷದ ಪರ ಸಂದೇಶ ಫಾರ್ವರ್ಡ್’ ಮಾಡಿದ್ರೂ ಕಾನೂನು ಕ್ರಮ ಫಿಕ್ಸ್!
`ವಾಟ್ಸಪ್’ ಬಳಕೆದಾರರೇ ಎಚ್ಚರ : ಈ 3 ಸಂದೇಶಗಳ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣವೇ ಖಾಲಿ!