Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM

SHOCKING : ರೈಲ್ವೆ ಹಳಿಗೆ ಬಿದ್ದ 1 ವರ್ಷದ ಮಗು : ಪ್ರಾಣದ ಹಂಗು ತೊರೆದು ರಕ್ಷಿಸಿದ ತಂದೆ | Video Viral

30/04/2026 3:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೆಂಡತಿಯನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ.!
KARNATAKA

ಹೆಂಡತಿಯನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ.!

By kannadanewsnow5721/03/2025 7:59 AM

ಕೊಪ್ಪಳ : ವಣಗೇರಿ ಗ್ರಾಮದ ಅಪರಾಧಿ ಬಸವರಾಜ ತಂದೆ ಮಲ್ಲಪ್ಪ ಮಕ್ಕಳ್ಳಿ ಇತನು ತನ್ನ ಹೆಂಡತಿಯಾದ ಅಂಬವ್ವ @ ಕಲ್ಲವ್ವ ಈಕೆಯ ಶೀಲದ ಮೇಲೆ ಸಂಶಯಪಟ್ಟು ಮನೆಯಲ್ಲಿದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗೂ ಇತರೆ ಕಡೆಗಳಿಗೆ ಹೊಡೆದು ಕೊಲೆ ಮಾಡಿದ ಅಪರಾಧ ಸಾಭಿತಾಗಿದೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಿರುತ್ತಾರೆ.

ಬೇವೂರು ಪೋಲಿಸ್ ಠಾಣೆ ವ್ಯಾಪ್ತಿಯ ವಣಗೇರಿ ಗ್ರಾಮದ ಆರೋಪಿ ಬಸವರಾಜ ತಂದೆ ಮಲ್ಲಪ್ಪ ಮಕ್ಕಳ್ಳಿ ಈತನು ತನ್ನ ಹೆಂಡತಿಯಾದ ಮೃತ ಅಂಬವ್ವ @ ಕಲ್ಲವ್ವ ಇವಳ ಶೀಲದ ಮೇಲೆ ಸಂಶಯಪಡುತ್ತಾ ಆಗಾಗ್ಗೆ ಜಗಳ ಮಾಡುತ್ತಾ ಬಂದಿದ್ದು, ಈ ವಿಷಯವಾಗಿ ವಣಗೇರಿ ಗ್ರಾಮದ ಅಪರಾಧಿ ಬಸವರಾಜನ ಅಕ್ಕಪಕ್ಕದ ಮನೆಯವರು ಅಪರಾಧಿ ಬಸವರಾಜನಿಗೆ ಬುದ್ದಿವಾದ ಹೇಳಿದರೂ ತನ್ನ ಚಾಳಿಯನ್ನು ಬಿಡದೇ ತನ್ನ ಹೆಂಡತಿಯಾದ ಮೃತ ಅಂಬವ್ವ @ ಕಲ್ಲವ್ವ ಈಕೆಯ ಶೀಲದ ಮೇಲೆ ಸಂಶಯ ಪಟ್ಟು ಅವಳೊಂದಿಗೆ ಜಗಳ ಮಾಡುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಹಿಂಸೆ ನೀಡುತ್ತಾ ಬಂದು ಅಪರಾಧಿ ಬಸವರಾಜ ತನ್ನ ಹೆಂಡತಿ ಮಲಗಿಕೊಂಡಿದ್ದಾಗ ಮನೆಯಲ್ಲಿದ್ದ ಕೊಡಲಿಯಿಂದ ಅಂಬವ್ವ @ ಕಲ್ಲವ್ವ ಇವಳ ಕುತ್ತಿಗೆಗೆ ಹಾಗೂ ಇತರೆ ಕಡೆಗಳಿಗೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 143/2017, ಕಲಂ: 498[ಎ], 302 ಭಾ.ದಂ.ಸಂ. ಅಡಿಯಲ್ಲಿ ಹಿಂದಿನ ರಮೇಶ ರೊಟ್ಟಿ ಪಿ.ಐ ಇವರು ತನಿಖೆಯಲ್ಲಿ ಆರೋಪಗಳು ಸಾಭಿತಾಗಿದ್ದರಿಂದ ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಪ್ರಕರಣದಲ್ಲಿ ವಣಗೇರಿ ಗ್ರಾಮದ ಅಪರಾಧಿ ಬಸವರಾಜ ತಂದೆ ಮಲ್ಲಪ್ಪ ಮಕ್ಕಳ್ಳಿ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ದಿ: 18-03-2025 ರಂದು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 50,000 ಗಳ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಂಬಣ್ಣ ಟಿ. ಮತ್ತು ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ. ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ ವಾದ ಮಂಡಿಸಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Court sentences accused of murdering wife to life imprisonment!
Share. Facebook Twitter LinkedIn WhatsApp Email

Related Posts

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM2 Mins Read

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM1 Min Read

ಬೆಂಗಳೂರಲ್ಲಿ ಕಾಂಪೌಂಡ್ ದುರಂತ: ಸಿಎಸ್, GBA ಮುಖ್ಯ ಆಯುಕ್ತರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಲೋಕಾಯುಕ್ತ

30/04/2026 2:51 PM2 Mins Read
Recent News

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM

SHOCKING : ರೈಲ್ವೆ ಹಳಿಗೆ ಬಿದ್ದ 1 ವರ್ಷದ ಮಗು : ಪ್ರಾಣದ ಹಂಗು ತೊರೆದು ರಕ್ಷಿಸಿದ ತಂದೆ | Video Viral

30/04/2026 3:08 PM

BIG NEWS: ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತಕ್ಕೆ ಕಾಲಮಿತಿ ಬೇಡ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ

30/04/2026 2:54 PM
State News
KARNATAKA

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

By kannadanewsnow0930/04/2026 3:19 PM KARNATAKA 2 Mins Read

ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯೊಂದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಧರ್ಮಗುರುಗಳ…

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM

ಬೆಂಗಳೂರಲ್ಲಿ ಕಾಂಪೌಂಡ್ ದುರಂತ: ಸಿಎಸ್, GBA ಮುಖ್ಯ ಆಯುಕ್ತರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಲೋಕಾಯುಕ್ತ

30/04/2026 2:51 PM

ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸ್ ಉಚಿತ ತರಬೇತಿಗೆ ಅರ್ಜಿ ಅಹ್ವಾನ

30/04/2026 2:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.