Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

24/06/2025 8:23 PM

BREAKING : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ‘ಸೇನೆ, ನೌಕಾಪಡೆ, ವಾಯುಪಡೆ’ಗೆ ಜಂಟಿ ಆದೇಶ ಹೊರಡಿಸಲು ‘CDS’ಗೆ ಅಧಿಕಾರ

24/06/2025 8:21 PM

BIG NEWS: ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ವಿನಾಯ್ತಿ ಇಲ್ಲ: ಪತ್ನಿ ಕೊಂದಿದ್ದ ಕಮಾಂಡೋಗೆ ಸುಪ್ರೀಂ ಕೋರ್ಟ್ ತರಾಟೆ

24/06/2025 8:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ’13 ಆರೋಪಿ’ಗಳನ್ನು ‘5 ದಿನ ಪೊಲೀಸ್ ಕಸ್ಟಡಿ’ಗೆ ನೀಡಿ ಕೋರ್ಟ್ ಆದೇಶ
KARNATAKA

BIG UPDATE: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ’13 ಆರೋಪಿ’ಗಳನ್ನು ‘5 ದಿನ ಪೊಲೀಸ್ ಕಸ್ಟಡಿ’ಗೆ ನೀಡಿ ಕೋರ್ಟ್ ಆದೇಶ

By kannadanewsnow0915/06/2024 6:06 PM

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದು, ಶೆಡ್ ಒಂದರಲ್ಲಿ ಕೂಡಿ ಹಾಕಿ, ಚಿತ್ರಹಿಂಸೆ ಕೊಟ್ಟು ಹಲ್ಲೆ ನಡೆಸಿ ಹತ್ಯೆಗೈದು, ಮೋರಿಗೆ ಮೃತದೇಹವನ್ನು ಎಸೆದಿದ್ದರು. ಈ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂತಹ ಆರೋಪಿಗಳನ್ನು ಇಂದು ಪೊಲೀಸರು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ಮತ್ತಷ್ಟು ವಿಚಾರಣೆಗಾಗಿ ಪೊಲೀಸರು ಕೋರಿಕೊಂಡ ಹಿನ್ನಲೆಯಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಂತ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿಕೊಂಡು ಬರಲಾಗಿತ್ತು. ರೇಣುಕಾಸ್ವಾಮಿಗೆ ಚಿತ್ರ ಹಿಂಸೆ ನೀಡಿ, ಮರ್ಮಾಂಗಕ್ಕೆ ಒದ್ದು ಹತ್ಯೆಗೈಯಲಾಗಿತ್ತು. ಆ ಬಳಿಕ ಮೋರಿಗೆ ಮೃತದೇಹವನ್ನು ಎಸೆಯಲಾಗಿತ್ತು. ಈ ಮೃತದೇಹವನ್ನು ಕಂಡಂತ ಡಿಲಿವರಿ ಬಾಯ್ ಒಬ್ಬರು ಕಾಮಾಕ್ಷಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ತೆರಳಿದ್ದಂತ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿ, ಆತನ ಬಗ್ಗೆ ಮಾಹಿತಿ ಕಲೆಹಾಕೋದಕ್ಕೆ ತೊಡಗಿದ್ದರು. ಮೋರಿಯಲ್ಲಿ ದೊರೆತ ಮೃತದೇಹ ರೇಣುಕಾಸ್ವಾಮಿ, ಚಿತ್ರದುರ್ಗ ಮೂಲದವರು ಎಂಬುದಾಗಿ ತಿಳಿದು ಬಂದಿತ್ತು. ಆತ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

ಇದಲ್ಲದೇ ಶಾಕಿಂಗ್ ಎನ್ನುವಂತೆ ಆತನನ್ನು ಅಪಹರಿಸಿಕೊಂಡು ಬಂದಿದ್ದು ನಟ ದರ್ಶನ್ ಅಂಡ್ ಸಹಚರರು ಎಂಬುದು ತನಿಖೆ ನಡೆಸಿದಂತ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನಲೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 19 ಆರೋಪಿಗಳನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಮೃತದೇಹ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊರೆತರೂ, ಆತನನ್ನು ಹೊಡೆದು ಹತ್ಯೆ ಮಾಡಿದ್ದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶೆಡ್ ಒಂದರಲ್ಲಿ ಆಗಿದ್ದರಿಂದ, ಪ್ರಕರಣ ಆ ಠಾಣೆಗೆ ವರ್ಗಾಣೆಗೊಂಡಿತ್ತು. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದಂತ ಪೊಲೀಸರು, 6 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು.

ಚಿತ್ರದುರ್ಗ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬಂಧಿತ ಆರೋಪಿಯಾದಂತ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲರನ್ನು ಕರೆದೊಯ್ದಿದ್ದಂತ ಪೊಲೀಸರು, ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ನಡೆಸಿದ್ದರು.

ಇಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದಂತ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲರ ಕಸ್ಟಡಿ ಅವಧಿ ಮುಗಿದಿತ್ತು. ಹೀಗಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನಟ ದರ್ಶನ್ ಸೇರಿದಂತೆ ಎಲ್ಲರನ್ನೂ ಪೊಲೀಸರು ಹಾಜರುಪಡಿಸಿದರು.

ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13  ಆರೋಪಿಗಳಿಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಯಾರಿಗೆಲ್ಲ ಐದು ದಿನ ಪೊಲೀಸ್ ಕಸ್ಟಡಿಗೆ? ಇಲ್ಲಿದೆ ಲೀಸ್ಟ್

ಎ.1 ಪವಿತ್ರಾ ಗೌಡ

ಎ.2 ದರ್ಶನ್

ಎ.3 ಪವನ್

ಎ.4 ರಾಘವೇಂದ್ರ

ಎ.5 ನಂದೀಶ್

ಎ.6 ಜಗದೀಶ್ ಆಲಿಯಾಸ್ ಜಗ್ಗ

ಎ.7 ಅನು ಆಲಿಯಾಸ್ ಅನುಕುಮಾರ್

ಎ.10 ವಿನಯ್

ಎ.11 ನಾಗರಾಜ್

ಎ.12 ಲಕ್ಷ್ಮಣ

ಎ.13 ದೀಪಕ್

ಎ.14 ಪ್ರದೋಶ್

ಎ.16 ಕೇಶವಮೂರ್ತಿ ಸೇರಿದಂತೆ ಒಟ್ಟು 13 ಆರೋಪಿಗಳಿಗೆ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ ವಿಶೇಷ ಆರ್ಥಿಕ ಅಪರಾಧಗಳ  ಕೋರ್ಟ್ ಆದೇಶಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ

ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ಶೀಘ್ರವೇ ಹೆಚ್ಚಾಗಲಿದೆ ರೇಟ್

Nitish Kumar Health: ಬಿಹಾರ ಮುಖ್ಯಮಂತ್ರಿ ‘ನಿತೀಶ್ ಕುಮಾರ್’ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Share. Facebook Twitter LinkedIn WhatsApp Email

Related Posts

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

24/06/2025 8:23 PM1 Min Read

BIG NEWS : ಒಂದೇ ದಿನ ಅಶೋಕ್, ವಿಜಯೇಂದ್ರ ದೆಹಲಿ ಪ್ರವಾಸ : ಶೀಘ್ರ ನೂತನ ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ!?

24/06/2025 8:12 PM1 Min Read

ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಸಿಹಿಸುದ್ದಿ

24/06/2025 8:07 PM1 Min Read
Recent News

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

24/06/2025 8:23 PM

BREAKING : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ‘ಸೇನೆ, ನೌಕಾಪಡೆ, ವಾಯುಪಡೆ’ಗೆ ಜಂಟಿ ಆದೇಶ ಹೊರಡಿಸಲು ‘CDS’ಗೆ ಅಧಿಕಾರ

24/06/2025 8:21 PM

BIG NEWS: ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ವಿನಾಯ್ತಿ ಇಲ್ಲ: ಪತ್ನಿ ಕೊಂದಿದ್ದ ಕಮಾಂಡೋಗೆ ಸುಪ್ರೀಂ ಕೋರ್ಟ್ ತರಾಟೆ

24/06/2025 8:18 PM

BIG NEWS : ಒಂದೇ ದಿನ ಅಶೋಕ್, ವಿಜಯೇಂದ್ರ ದೆಹಲಿ ಪ್ರವಾಸ : ಶೀಘ್ರ ನೂತನ ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ!?

24/06/2025 8:12 PM
State News
KARNATAKA

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

By kannadanewsnow0924/06/2025 8:23 PM KARNATAKA 1 Min Read

ಧಾರವಾಡ: ಯೂರಿಯಾ ಗೊಬ್ಬರವು ಬೆಳೆಗಳಿಗೆ ಎಷ್ಟು ಮುಖ್ಯವೋ ಅತೀಯಾದ ಬಳಕೆ ಅμÉ್ಟೀ ಹಾನಿಕಾರಕ. ಇದರಿಂದ ಬೆಳೆ ಮತ್ತು ಮಣ್ಣಿನ ಮೇಲೆ…

BIG NEWS : ಒಂದೇ ದಿನ ಅಶೋಕ್, ವಿಜಯೇಂದ್ರ ದೆಹಲಿ ಪ್ರವಾಸ : ಶೀಘ್ರ ನೂತನ ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ!?

24/06/2025 8:12 PM

ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಸಿಹಿಸುದ್ದಿ

24/06/2025 8:07 PM

SHOCKING : ಬೆಳಗಾವಿಯಲ್ಲಿ ಘೋರ ದುರಂತ : ಶಾಲೆಯಲ್ಲಿ ಆಟವಾಡುವ ವೇಳೆ ‘ಹೃದಯಾಘಾತದಿಂದ’ ವಿದ್ಯಾರ್ಥಿನಿ ಸಾವು!

24/06/2025 7:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.