ಶಿವಮೊಗ್ಗ : ಮೂರು ತಿಂಗಳಿನೊಳಗೆ ಹೊಸ ಸಮಿತಿ ರಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಸಾಗರದ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಜಿಲ್ಲಾ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಾಲಿ ವ್ಯವಸ್ಥಾಪಕ ಸಮಿತಿ ಟ್ರಸ್ಟ್ ರಚನೆ ನೆಪದಲ್ಲಿ ತಾವೇ ಖಾಯಂ ಆಗಿ ಉಳಿಯುವ ಬೈಲಾವನ್ನು ಸಿದ್ದಪಡಿಸಿ ಸದಸ್ಯರ ಒಪ್ಪಿಗೆಯನ್ನು ಸಹ ಪಡೆಯದೆ ವಂಚಿಸುವ ಪ್ರಯತ್ನ ನಡೆಸಿತ್ತು. ಸಮಿತಿಯ ಈ ಧೋರಣೆಗೆ ನ್ಯಾಯಾಲಯದ ತೀರ್ಪು ತೀವೃ ಮುಖಭಂಗ ಉಂಟು ಮಾಡಿದೆ ಎಂದರು.
1968 ರಿಂದ ಈತನಕ ಟ್ರಸ್ಟ್ ರಚನೆಗೆ ಸಾಕಷ್ಟು ಹೋರಾಟ ನಡೆದಿದೆ. ಕಳೆದ 10 ವರ್ಷದಿಂದ ನಮ್ಮ ಹಿತರಕ್ಷಣಾ ಸಮಿತಿ ಟ್ರಸ್ಟ್ ರಚನೆ ಜೊತೆಗೆ ಸಮಿತಿಯಲ್ಲಿ ಖಾಯಂ ಪದಾಧಿಕಾರಿಗಳಾಗಿ ಕುಳಿತವರನ್ನು ಇಳಿಸಲು ಹೋರಾಟ ನಡೆಸಿತ್ತು. ಇದೀಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ನನ್ನನ್ನು ತಟಸ್ಥಗೊಳಿಸಲು ಸಾಕಷ್ಟು ಪ್ರಯತ್ನ ಸಮಿತಿಯ ಪ್ರಮುಖರು ಮಾಡಿದ್ದರು. ಆಮೀಷವೊಡ್ಡಿದ್ದರು. ಇದ್ಯಾವುದಕ್ಕೂ ನಾವು ಜಗ್ಗಲಿಲ್ಲ. ಸದಸ್ಯರ ಪರವಾಗಿ ಕಾನೂನು ಹೋರಾಟ ಸೇರಿ ಬೇರೆಬೇರೆ ಹೋರಾಟ ನಡೆಸಿದ್ದಕ್ಕೆ ಯಶಸ್ಸು ದೊರೆತಿದೆ. ಹೊಸ ಸಮಿತಿ ರಚನೆ ಮಾಡಬೇಕಾದರೆ ಶಾಸಕರು ಸಮಿತಿಯಲ್ಲಿ ಇರಬೇಕು ಎನ್ನುವುದನ್ನು ಬೈಲಾದಲ್ಲಿ ಸೇರಿಸಿ ಅವೈಜ್ಞಾನಿಕ ನೀತಿ ಸಮಿತಿ ಅನುಸರಿಸಿತ್ತು. ಹೊಸ ಸಮಿತಿ ರಚನೆಯನ್ನು ಹಳೆ ಸಮಿತಿಯೆ ಮಾಡುವ ಶಿಫಾರಸ್ಸು ಬೈಲಾದಲ್ಲಿ ಸೇರಿಸಿತ್ತು. ಎಲ್ಲವೂ ಅಧಿಕಾರ ಉಳಿಸಿಕೊಳ್ಳುವ ಹಾಲಿ ವ್ಯವಸ್ಥಾಪಕ ಸಮಿತಿ ಕುತಂತ್ರವಾಗಿತ್ತು. ನಮ್ಮ ಸಮಿತಿ ವೈಯಕ್ತಿಕವಾಗಿ ಹಣ ಭರಿಸಿ ನ್ಯಾಯಾಲಯದ ಖರ್ಚುವೆಚ್ಚ ನಿಭಾಯಿಸಿದ್ದರೇ, ವ್ಯವಸ್ಥಾಪಕ ಸಮಿತಿ ದೇವಸ್ಥಾನಕ್ಕೆ ಬರುವ ಭಕ್ತರ ಹಣವನ್ನು ವ್ಯಯಿಸಿ ನಷ್ಟ ಉಂಟು ಮಾಡಿತ್ತು ಎಂದು ಹೇಳಿದರು.
ಸಮಿತಿ ಕಾನೂನು ಸಲಹೆಗಾರ ವಿ.ಶಂಕರ್ ಮಾತನಾಡಿ, ಎಂಟು ವರ್ಷಗಳ ಹಿಂದೆ ಡಿಶ್ ಪ್ರತಾಪ್, ಈಶ್ವರ್ ಉಪ್ಪಾರ ಇನ್ನಿತರರು ಟ್ರಸ್ಟ್ ರಚನೆ ಮಾಡಬೇಕು ಎಂದು ಆರಂಭದ ಹೋರಾಟ ರೂಪಿಸಿದ್ದರು. ಹಾಲಿ ವ್ಯವಸ್ಥಾಪಕ ಸಮಿತಿ ಒಳಗೊಳಗೆ ತಮಗೆ ಅನುಕೂಲವಾಗುವ ಬೈಲಾ ಸಿದ್ದಪಡಿಸಿಕೊಂಡು ಟ್ರಸ್ಟ್ ರಚನೆಗೆ ಮುಂದಾಗಿತ್ತು. ಪ್ರಜಾಪ್ರಭುತ್ವ ಮಾದರಿ ಇಲ್ಲಿ ಅನುಸರಿಸಿರಲಿಲ್ಲ. ಇದೀಗ ಹಿತಾರಕ್ಷಣಾ ಸಮಿತಿ ವಾದಕ್ಕೆ ಜಯ ಸಿಕ್ಕಿದ್ದು ಹೊಸ ಸಮಿತಿಗೆ ಐವರು ಮಹಿಳೆಯರನ್ನು ಸೇರಿಸಿಕೊಳ್ಳಬೇಕು. ದಿನಾಂಕ 11-07-2024ರ ಮೊದಲು ಸದಸ್ಯರಾದವರು ಮತ ಚಲಾಯಿಸಬಹುದು. ದೇವಿಗೆ ನಡೆದುಕೊಳ್ಳುವ 8 ಜಾತಿಗಳಿಗೆ ಸದಸ್ಯತ್ವ ಕಡ್ಡಾಯ ಸೇರಿ ಅನೇಕ ತಿದ್ದುಪಡಿ ನ್ಯಾಯಾಲಯ ತೀರ್ಪಿನಲ್ಲಿ ಘೋಷಣೆಯಾಗಿದೆ. ಹೊಸ ಸಮಿತಿಯು ಎರಡು ಜಾತ್ರೆಗೆ ಮಾತ್ರ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಇರುತ್ತದೆ. ಹೊಸ ಸದಸ್ಯತ್ವ ತೆಗೆದುಕೊಂಡವರಿಗೆ ಒಂದು ವರ್ಷದ ನಂತರ ಮತದಾನದ ಹಕ್ಕು ಸಿಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾನೂನು ಸಲಹೆಗಾರರಾದ ಬಾಲಕೃಷ್ಣ, ಪ್ರೇಮ್ ಸಿಂಗ್, ಟಿ.ರಾಮಪ್ಪ, ನಿತ್ಯಾನಂದ ಶೆಟ್ಟಿ, ಡಿಶ್ ಗೋಪಾಲ, ಕೊಟ್ರಪ್ಪ, ಶ್ರೀಧರ್, ಗುರಬಸವ ಗೌಡ, ಪದ್ಮನಾಭ, ರಮೇಶ್, ದಿನೇಶ್, ಪ್ರವೀಣ್, ಟೀಪುಡಿ ಮಂಜು, ದರ್ಶನ್, ಜನಾರ್ಧನ ಆಚಾರಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸಿಗಂದೂರು ಚೌಡೇಶ್ವರಿ ಕೇಬಲ್ ಸೇತುವೆ ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಕೆ: ಸಂಸದ ಬಿವೈ ರಾಘವೇಂದ್ರ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ