Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

TVK Vijay Sworn: ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ; ಮೇ.13ಕ್ಕೆ ವಿಶ್ವಾಸಮತಯಾಚನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 34,576 ಕೊಟ್ಟು ಖರೀದಿಸಿದ ‘ಮೊಬೈಲ್’ನಲ್ಲಿ ದೋಷ: ಕಂಪನಿಗೆ 25,000 ಕೋರ್ಟ್ ದಂಡ
KARNATAKA

34,576 ಕೊಟ್ಟು ಖರೀದಿಸಿದ ‘ಮೊಬೈಲ್’ನಲ್ಲಿ ದೋಷ: ಕಂಪನಿಗೆ 25,000 ಕೋರ್ಟ್ ದಂಡ

By kannadanewsnow09

ಶಿವಮೊಗ್ಗ: ದೂರುದಾರರಾದ ಚೇತನ್ ತಾವು ಕೊಂಡ ಮೊಬೈಲ್‌ನಲ್ಲಿ ದೋಷವಿದ್ದು ರಿಪೇರಿ ಮಾಡದೇ ಸೇವಾ ನ್ಯೂನ್ಯತೆವೆಸಗಿದ ಎದುರುದಾರ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಹಾಗೂ ಮೊಬೈಲ್ ಕೇರ್. ಶಿವಮೊಗ್ಗ ಇವರ ವಿರುದ್ದ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡಲು ಆದೇಶಿಸಿದೆ.

ದೂರುದಾರರಾದ ಚೇತನ್ ಇವರು ಎದುರುದಾರರಾದ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್ 1ನೇ ಎದುರುದಾರರು, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ 2ನೇ ಎದುರುದಾರರು ಮತ್ತು ಮೊಬೈಲ್ ಕೇರ್ ಶಿವಮೊಗ್ಗ, 3ನೇ ಎದುರುದಾರರು ಇವರ ವಿರುದ್ದ ದೂರನ್ನು ಸಲ್ಲಿಸಿ ತಾವು ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಇವರಿಂದ ಕೊಂಡ ಮೊಬೈಲ್‌ನಲ್ಲಿ ಖರೀದಿಸಿದ ದಿನಾಂಕದಿಂದಲೂ ದೋಷ ಕಂಡುಬಂದಿದ್ದು, ಹಲವಾರು ಬಾರಿ ಎದುರುದಾರರಲ್ಲಿ ರಿಪೇರಿ ಮಾಡಿಕೊಡಲು ವಿನಂತಿಸಿದ್ದು, ಎದುರುದಾರರು ಒಮ್ಮೆ ಮೊಬೈಲ್ ರಿಪೇರಿ ಮಾಡಿಕೊಟ್ಟಿದ್ದರು. ನಂತರವೂ ಮೊಬೈಲ್‌ನಲ್ಲಿ ದೋಷ ಕಂಡುಬಂದಿದ್ದು, ಎದುರುದಾರರಲ್ಲಿ ತೋರಿಸಿದಾಗ, ಎದುರುದಾರರು ಸ್ಪಂದಿಸದಿದ್ದಕ್ಕೆ ಮೊಬೈಲ್‌ನ್ನು ರಿಪೇರಿ ಮಾಡಿಕೊಡಲು ವಕೀಲರ ಮುಖಾಂತರ ಲೀಗಲ್ ನೋಟೀಸ್ ನೀಡಿದ್ದಾಗ್ಯೂ ದುರಸ್ತಿಪಡಿಸಲು ವಿಫಲರಾದ ಕಾರಣ ಈ ಆಯೋಗದ ಮುಂದೆ ಅರ್ಜಿ ಸಲ್ಲಿಸಿ ಮೊಬೈಲ್‌ನಲ್ಲಿ ತಯಾರಿಕಾ ದೋಷವಿರುವ ಕಾರಣ ಮೊಬೈಲ್ ಖರೀದಿಯ ಮೊತ್ತ ರೂ.40,800/-ಗಳನ್ನು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಆದ ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಹಾಗೂ ರೂ.2.000/-ಗಳ ವೆಚ್ಚಗಳನ್ನು ಎದುರುದಾರರು ನೀಡಲು ನಿರ್ದೇಶಿಸಬೇಕೆಂದು ವಿನಂತಿಸಿರುತ್ತಾರೆ.

ದೂರನ್ನು ದಾಖಲಿಸಿಕೊಂಡು ಆಯೋಗದಿಂದ ಎದುರುದಾರರಿಗೆ ನೋಟೀಸ್‌ನ್ನು ನೀಡಿದ್ದು, ಎದುರುದಾರರು ನೋಟೀಸ್ ಪಡೆದು ಹಾಜರಾಗದ ಕಾರಣ ಎದುರುದಾರರನ್ನು ಏಕ-ಪಕ್ಷೀಯವೆಂದು (ಎಕ್ಸ್-ಪಾರ್ಟೆ) ತೀರ್ಮಾನಿಸಲಾಗಿರುತ್ತದೆ ಹಾಗೂ ಸದರಿ ದೂರಿನ ವಿಚಾರಣೆಯನ್ನು ಮಾಡಿ, ದೂರಿನ ಅಂಶಗಳು, ದೂರುದಾರರ ಪರ ವಕೀಲರ ವಾದವನ್ನು ಆಲಿಸಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು ಫಿರ್ಯಾದಿದಾರರು 2ನೇ ಎದುರುದಾರರಿಂದ ಮೊಬೈಲ್ ಖರೀದಿಸಿರುವುದು ಫಿರ್ಯಾದಿದಾರರು ಸಲ್ಲಿಸಿರುವ ರಸೀದಿಯಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್‌ನ್ನು ರಿಪೇರಿಗಾಗಿ 3ನೇ ಎದುರುದಾರರ ಬಳಿ ನೀಡಿರುವುದು 3ನೇ ಎದುರುದಾರರು ನೀಡಿರುವ ಸರ್ವಿಸ್ ಚಲನ್‌ನಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್ ರಿಪೇರಿ ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದರೂ ಎದುರುದಾರರು ಸರಿಯಾದ ರೀತಿಯಲ್ಲಿ ಮೊಬೈಲ್ ರಿಪೇರಿ ಮಾಡಿಕೊಡದ ಕಾರಣ ಮೊಬೈಲ್ ಹಣ ವಾಪಸ್ ನೀಡಲು ಕೋರಿರುವುದು ವಕೀಲರು ಎದುರುದಾರರಿಗೆ ಕಳುಹಿಸಿರುವ ಲೀಗಲ್ ನೋಟೀಸ್‌ನಲ್ಲಿ ಖಾತರಿಯಾಗಿರುತ್ತದೆ.

ದೂರುದಾರರು ಮಾಡಿರುವ ಆಪಾದನೆಗಳಿಗೆ ಮತ್ತು ಸಲ್ಲಿಸಿರುವ ದಾಖಲೆಗಳಿಗೆ 1 ಮತ್ತು 2ನೇ ಎದುರುದಾರರು ಸ್ಥಳೀಯವಾಗಿ ಶಿವಮೊಗ್ಗದಲ್ಲೇ ಇದ್ದರೂ ಸಹ ಹಾಜರಾಗಿ ದೂರುದಾರರು ಮಾಡಿರುವ ಆಪಾದನೆಗಳು ಸುಳ್ಳೆಂದಾಗಲಿ ಅಥವಾ ತಮ್ಮ ವಿರುದ್ಧ ದೂರುದಾರರು ಮಾಡಿರುವ ಆಪಾದನೆಗಳನ್ನು ಅಲ್ಲಗೆಳೆಯುವಂತಹ ಯಾವುದೇ ದಾಖಲೆಗಳನ್ನು ಸಹ ಮಂಡಿಸಿರುವುದಿಲ್ಲವೆಂಬ ಅಂಶಗಳನ್ನು ಪರಿಗಣಿಸಿದ ಆಯೋಗವು ಅರ್ಜಿದಾರರು ಖರೀದಿಸಿದ ಮೊಬೈಲ್ ಉತ್ಪಾದನಾ ದೋಷದಿಂದ ಕೂಡಿದ್ದು ಎದುರುದಾರರು ಸದರಿ ಮೊಬೈಲ್‌ನ್ನು ರಿಪೇರಿ ಮಾಡಿಕೊಡಲು ವಿಫಲರಾಗಿದ್ದು, ಎದುರುದಾರರ ಸೇವಾ ನ್ಯೂನ್ಯತೆಯಾಗಿರುತ್ತದೆಂದು ಪರಿಗಣಿಸಿ ಅರ್ಜಿದಾರರು ಎದುರುದಾರರಿಂದ ಮೊಬೈಲ್ ಖರೀದಿಸಿದ ಮೊತ್ತ ರೂ.34,576/- (ಜಿ.ಎಸ್.ಟಿ. ರೂ.6.223.73 ಹೊರತುಪಡಿಸಿ)ಗಳನ್ನು ಶೇ.9 ಬಡ್ಡಿಯೊಂದಿಗೆ ದಿ: 01/01/2024 ರಿಂದ ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರಿಂದ ಅರ್ಜಿದಾರರಿಗೆ ಉಂಟಾದ ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ರೂ.15,000/-ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ.10,000/-ಗಳನ್ನು ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ. ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನು ಒಳಗೊಂಡ ಪೀಠವು ದಿನಾಂಕ: 09/10/2024ರಂದು ಆದೇಶಿಸಿದೆ.

BIG NEWS: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಾಸ್ ವಿಚಾರ: ಸರ್ಕಾರಕ್ಕೆ ಕೆಲ ಮೊಕದ್ದಮೆ ಹಿಂಪಡೆಯುವ ಅಧಿಕಾರವಿದೆ- ಸಿಎಂ ಸಿದ್ಧರಾಮಯ್ಯ

10 ವರ್ಷಗಳ ಹಿಂದೆ ಮಾಡಿದ ಜಾತಿಗಣತಿ ವರದಿ ಇಟ್ಕೊಂಡು ಏನು ಮಾಡ್ತೀರಿ?: HDK ಕಿಡಿ

Share. Facebook Twitter LinkedIn WhatsApp Email

Related Posts

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

1 Min Read

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

1 Min Read

ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಸರ್ಕಾರ ರಚನೆ: ರಾಜ್ಯಪಾಲರ ಕ್ರಮಕ್ಕೆ ಕೆಪಿಸಿಸಿ ಸ್ವಾಗತ

1 Min Read
Recent News

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

TVK Vijay Sworn: ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ; ಮೇ.13ಕ್ಕೆ ವಿಶ್ವಾಸಮತಯಾಚನೆ

ಉತ್ತಮ ಲೈಂಗಿಕ ಜೀವನಕ್ಕಾಗಿ ಈ 5 ವ್ಯಾಯಾಮಗಳನ್ನು ಇಂದೇ ರೂಢಿಸಿಕೊಳ್ಳಿ!

State News
KARNATAKA

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

By kannadanewsnow09 KARNATAKA 1 Min Read

ಬೆಂಗಳೂರು: ಪ್ರಧಾನ ಮಂತ್ರಿಗಳು ನಾಳೆ (ಮೇ 10, 2026) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಕನಕಪುರ ರಸ್ತೆಯ ಊದಿಪಾಳ್ಯದ ಬಳಿ ಇರುವ…

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಸರ್ಕಾರ ರಚನೆ: ರಾಜ್ಯಪಾಲರ ಕ್ರಮಕ್ಕೆ ಕೆಪಿಸಿಸಿ ಸ್ವಾಗತ

ಸಾಲುಮರದ ತಿಮ್ಮಕ್ಕ ಸ್ಮಾರಕಕ್ಕೆ ಡಿಪಿಆರ್ ಸಿದ್ಧ: 25 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ- ಸಚಿವ ಈಶ್ವರ್ ಖಂಡ್ರೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.