ಧಾರವಾಡ: ಫಿಟ್ನೆಸ್ ಸರ್ಟಿಫಿಕೇಟ್ ಮುಗಿದಿರುವಂತ ಕಾರಣ ನೀಡಿ ಗೋಡೆ ಬಿದ್ದು ಜಖಂಗೊಂಡಿರುವಂತ ಕಾರಿನ ರಿಪೇರಿ ಕರ್ಚು ನೀಡದಂತ ವಿಮಾ ಕಂಪನಿಗೆ 1.50 ಲಕ್ಷ ದಂಡವನ್ನು ವಿಧಿಸಿ ಕೋರ್ಟ್ ಆದೇಶಿಸಿದೆ.
ಹುಬ್ಬಳ್ಳಿಯ ಬ್ಯಾಂಕರ್ಸ್ ಕಾಲೋನಿಯ ನಿವಾಸಿ ರೀಯಾಜ ಅಹಮದ್ ಕಿರಂಗಿ ಟೋಯೊಟಾ ಕಾರಿನ ಮಾಲೀಕರಾಗಿದ್ದು ಎದುರುದಾರರ ವಿಮಾ ಕಂಪನಿಯಲ್ಲಿ ರೂ:16,809 ಪಾವತಿಸಿ ವಿಮಾ ಪಾಲಿಸಿಯನ್ನು ಪಡೆದಿದ್ದರು. ಅವರು ತಮ್ಮ ವಾಹನವನ್ನು ಮನೆಯ ಗೋಡೆಯ ಪಕ್ಕದಲ್ಲಿ ನಿಲ್ಲಿಸಿದ್ದರು. ದಿ:17.05.2024 ರಂದು ಬೆಳಗ್ಗೆ 8:30 ರ ಸುಮಾರು ಗೋಡೆಯು ವಾಹನ ಮೇಲೆ ಬಿದ್ದು ಜಖಂ ಆಗಿತ್ತು. ದೂರುದಾರರು ರಾಯಪುರದ ಟೋಯೊಟಾ ಶೋರೂಮನಲ್ಲಿ ವಾಹನವನ್ನು ರಿಪೇರಿಗೆ ಬಿಟ್ಟಾಗ ಶೋರೂಮನವರು ಅದರ ರಿಪೇರಿ ಖರ್ಚು ರೂ:2,05,165.73 ಆಗುತ್ತದೆ ಅಂತಾ ಹೇಳಿರುತ್ತಾರೆ. ಅವರ ಪಾಲಿಸಿಯು ಜಾರಿಯಲ್ಲಿದ್ದ ಕಾರಣ ಅದರ ರಿಪೇರಿ ಹಣವನ್ನು ಕೊಡುವಂತೆ ಎದುರುದಾರರಿಗೆ ಕೇಳಿರುತ್ತಾರೆ. ಆದರೆ ಎದುರುದಾರರು ದೂರುದಾರರ ವಾಹನವು ಪಿಟ್ನೆಸ್ ಸರ್ಟಿಪಿಕೇಟ್ ಮುಗಿದಿರುವ ಕಾರಣ ದೂರುದಾರರ ಕ್ಲೇಮನ್ನು ನಿರಾಕರಿಸಿದ್ದರು. ಎದುರುದಾರರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 01/07/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರ ವಿಮಾ ಕಂಪನಿಯಲ್ಲಿ ತಮ್ಮ ವಾಹನಕ್ಕೆ ವಿಮೆ ಮಾಡಿಸಿರುವುದು ಕಂಡು ಬಂದಿರುತ್ತದೆ. ದೂರುದಾರರ ವಾಹನವು ಜಖಂ ಆದಾಗ ಅದರ ರಿಪೇರಿ ಖರ್ಚು ರೂ:2,05,165.73 ಇರುವುದನ್ನು ದೂರುದಾರರ ದಾಖಲೆಗಳಿಂದ ಸ್ಪಷ್ಟವಾಗಿರುತ್ತದೆ. ಅಲ್ಲದೇ ಎದುರುದಾರರ ಸರ್ವೇಯರ್ ಕಾರನ್ನು ಪರೀಕ್ಷಿಸಿದಾಗ ಅದರರಿಪೇರಿಖರ್ಚು ರೂ:49,500 ಎಂದು ಹೇಳಿರಿರುತ್ತಾರೆ. ಆದರೆ ಪಾಲಿಸಿಯ ನಿಯಮದಂತೆ ವಾಹನದ ಐಡಿವಿ ಮೌಲ್ಯ ರೂ:2,52,000 ಇರುತ್ತದೆ. ಅಲ್ಲದೇ ದೂರುದಾರರ ವಾಹನವು ನಿಂತಲ್ಲೆಯೇ ಗೋಡೆ ಬಿದ್ದು ಜಖಂ ಆಗಿರುವದರಿಂದ ಇಲ್ಲಿ ಪಿಟ್ನೆಸ್ ಸರ್ಟಿಪಿಕೇಟ್ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ದೂರುದಾರರು ತಮ್ಮ ವಾಹನದ ಪಿಟ್ನೆಸ್ ಸರ್ಟಿಪಿಕೇಟ್ ಮುಂದುವರಿಸಿರುವುದನ್ನು ಗಮನಿಸಿದ ಆಯೋಗ ಎದುರುದಾರರು ದೂರುದಾರರ ವಿಮಾ ಹಣ ಕೊಡದೇ ಅವರಿಗೆ ಸೇವಾ ನ್ಯೂನ್ಯತೆ ಎಸಗಿರುವುದು ಕಂಡು ಬಂದು ಎದುರುದಾರರು ದೂರುದಾರರಿಗೆ ವಾಹನದ ರಿಪೇರಿಯ ಖರ್ಚು ರೂ:1,50,000 ರೂಪಾಯಿಗಳನ್ನು ಶೇಕಡಾ 10 ರಂತೆ ದಿನಾಂಕ 18.05.2024 ರಿಂದ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದಒಂದು ತಿಂಗಳೊಳಗಾಗಿ ದೂರುದಾರರಿಗೆ ಕೊಡಲು ಎದುರುದಾರರಿಗೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.25,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎದುರುದಾರರಾದ ಶ್ರೀ ರಾಮ್ ಜನರಲ್ ಇನ್ಸೂರೆನ್ಸ ಕಂಪನಿಗೆ ಆಯೋಗ ನಿರ್ದೇಶಿಸಿದೆ.
ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್
BREAKING: ಶಿವಮೊಗ್ಗ ಜಿಲ್ಲೆಯಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ಡಿಜೆ ಸಿಸ್ಟಂ ಬಳಕೆ ನಿಷೇಧ-DC ಆದೇಶ