ಬೆಂಗಳೂರು: ತಮ್ಮ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಸಿ ತರೋದಕ್ಕೆ ದೆಹಲಿ, ಮುಂಬೈಗೆ ತೆರಳೋದಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡಗೆ ಕೋರ್ಟ್ ಅನುಮತಿ ನೀಡಿದೆ.
ಈ ಸಂಬಂಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಪರವಾಗಿ ರವೀಂದ್ರ ಗೌಡ ಎಂಬುವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನ ನ್ಯಾಯಮೂರ್ತಿ ಜೈಶಂಕರ್ ವಿಚಾರಣೆ ನಡೆಸಿದರು.
ಮಾರ್ಚ್ 3ರಿಂದ 10 ಹಾಗೂ ಮಾರ್ಚ್ 17ರಿಂದ 26ರವರೆಗೆ ದೆಹಲಿ ಹಾಗೂ ಮುಂಬೈಗೆ ಪವಿತ್ರಾ ಗೌಡ ಅವರು ತಮ್ಮ ಅಂಗಡಿಗೆ ಬಟ್ಟೆ ಖರೀದಿಸಲು ತೆರಳುತ್ತಿದ್ದಾರೆ. ಇದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ಈ ಮನವಿ ಪುರಸ್ಕರಿಸಿರುವಂತ ಕೋರ್ಟ್, ಪವಿತ್ರಾ ಗೌಡ ಅವರಿಗೆ ದೆಹಲಿ, ಮುಂಬೈಗೆ ತೆರಳಲು ಅನುಮತಿ ನೀಡಿದೆ.
‘ಸಾಯಿ ಗೋಲ್ಡ್ ಪ್ಯಾಲೇಸ್’ನಲ್ಲಿ ಚಿನ್ನ ಕದ್ದಿದ್ದ ಆರೋಪಿ ಅರೆಸ್ಟ್: 63 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ