ಬೆಂಗಳೂರು: ನಗರದಲ್ಲಿ ಬರೋಬ್ಬರಿ 51 ಜನರಿಗೆ 2.64 ಕೋಟಿ ಪಂಗನಾಮ ಹಾಕಿದ್ದಂತ ಇಬ್ಬರು ದಂಪತಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದ್ದು, ಸಿಇಎನ್ ಪೊಲೀಸ್ ಠಾಣೆ, ದಕ್ಷಿಣ ವಿಭಾಗವು, ವಿದೇಶಗಳಿಗೆ ಕೆಲಸದ ವೀಸಾ ನೀಡುವುದಾಗಿ ಸುಳ್ಳು ಭರವಸೆ ನೀಡಿ 51 ಜನರಿಗೆ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಸುಮಾರು ₹2.64 ಕೋಟಿ ಮೊತ್ತದ ವಂಚನೆ ನಡೆದಿದ್ದು, ₹80 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಲ್ಲಿ ಉದ್ಯೋಗಾವಕಾಶಗಳ ಭರವಸೆ ನೀಡುವ ಇಂತಹ ವಂಚನಾತ್ಮಕ ಉದ್ಯೋಗ ಪ್ರಸ್ತಾಪಗಳ ಬಗ್ಗೆ ಎಚ್ಚರವಹಿಸಿ ಎಂಬುದಿ ತಿಳಿಸಿದ್ದಾರೆ.
ದಿನಾಂಕ:28/01/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಗಿರುತ್ತದೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಈ ಇಬ್ಬರೂ ಸಹ ದಂಪತಿಗಳೆಂಬ ಮಾಹಿತಿ ತಿಳಿದು ಬಂದಿರುತ್ತದೆ. ಹಾಗೂ ಪ್ರಕರಣದ ಆರೋಪಿತೆಯು ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ಹೊರದೇಶದ ಹಾರ್ಸ್ ಜಾಕಿ ಒಬ್ಬರು ಪರಿಚಯವಾಗಿದ್ದು ಅವರು ನಾನು ವಿದೇಶಗಳಲ್ಲಿ ಹಾರ್ಸ್ ಜಾಕಿ ಮತ್ತು ಇತರೆ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ನೀವು ಆಸಕ್ತ ವ್ಯಕ್ತಿಗಳನ್ನು ನನಗೆ ಪರಿಚಯಿಸಿದಲ್ಲಿ ಒಂದು ವೀಸಾಗೆ ಕೆ 50 ಸಾವಿರ ಹಣ ಕಮಿಷನ್ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದರಿಂದ, ಆರೋಪಿತರು ಒಪ್ಪಿ ಪ್ರಾರಂಭದಲ್ಲಿ ಇಬ್ಬರಿಗೆ ವೀಸಾ ಮಾಡಿಸಿಕೊಟ್ಟು, ಪಿರಾದುದಾರರು ಮತ್ತು ಇತರರಿಗೆ ನಂಬಿಕೆ ಬರುವಂತೆ ನಟಿಸಿ ಒಟ್ಟು 51 ಜನರಿಂದ 1 2,64,20,000/- ಹಣವನ್ನು ಆರೋಪಿಗಳಿಬ್ಬರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಈ ರೀತಿ ಬಂದ ಹಣದಲ್ಲಿ 02 ಕಾರು, 02 ಬೈಕ್ ಹಾಗೂ * 50 ಲಕ್ಷ ಹಣವನ್ನು ನೀಡಿ ಮನೆ ಭೋಗ್ಯಕ್ಕೆ ಪಡೆದುಕೊಂಡು, ಇನ್ನುಳಿದ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಹೆಚ್ಚಿನ ಹಣವನ್ನು ತಮ್ಮ ವಿಲಾಸೀ ಜೀವನಕ್ಕೆ ಬಳಕೆ ಮಾಡಿದ್ದಾಗಿ ತಿಳಿಸಿರುತ್ತಾರೆ.
ಆರೋಪಿಗಳ ವಶದಿಂದ ಒಂದು XUV ಕಾರು, ಒಂದು Honda City ಕಾರು, ಒಂದು JAWA ಬೈಕ್, ಒಂದು Yamaha FZ ಬೈಕ್, 24 ಗ್ರಾಂ ಚಿನ್ನಾಭರಣ ಹಾಗೂ 366 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ಸುಮಾರು 380,00,000/-(ಎಂಬತ್ತು ಲಕ್ಷ ರೂಪಾಯಿ). ದಿನಾಂಕ:09/02/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ರವರ ಮಾರ್ಗದರ್ಶನದಲ್ಲಿ, ಆತ್ಮೀಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಗೋವರ್ಧನ್ ಗೋಪಾಲ್ ರವರ ನೇತೃತ್ವದಲ್ಲಿ, ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಈಶ್ವರಿ ಪಿ.ಎನ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ರಾಜ್ಯದಲ್ಲಿ ನಂದಿನಿ ಹಾಲಿನ ದರ 5 ರೂ ಹೆಚ್ಚಳ ಫಿಕ್ಸ್: ಸುಳಿವು ನೀಡಿದ ಕೆಎಂಎಫ್ ಅಧ್ಯಕ್ಷ | Nandini Milk Price