ಬೆಂಗಳೂರು: ಆರ್ ಎಫ್ ಓ ವರ್ಗಾವಣೆಯಲ್ಲೂ ಭ್ರಷ್ಟಾಚಾರ ಎಂಬ ಪತ್ರಿಕೆಯೊಂದರ ವರದಿಯು ಸತ್ಯಕ್ಕೆ ದೂರವಾದದ್ದು ಹಾಗೂ ತಪ್ಪು ವರದಿಯಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘವು ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘವು, ‘ಆರ್.ಎಫ್.ಓ. ವರ್ಗಾವಣೆಯಲ್ಲೂ ಭ್ರಷ್ಟಾಚಾರ: ಕರ್ನಾಟಕ ವಲಯ ಅರಣ್ಯ ಅಧಿಕಾರಿಗಳ ಸಂಘ’ ಎಂಬ ಶೀರ್ಷಿಕೆಯಡಿಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟಿಸಿರುವಂತ ವರದಿಯು ಸತ್ಯದೂರವಾಗಿರುವಂತದ್ದು. ನಮ್ಮ ಸಂಘ ಯಾವುದೇ ಸಂದರ್ಭದಲ್ಲೂ ಸಂದರ್ಭದಲ್ಲೂ ಆರ್.ಫ್.ಓ. ಆರ್.ಫ್.ಓ. ವರ್ಗಾವಣೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಭ್ರಷ್ಟಾಚಾರ ನಡೆದಿದೆ ಎಂದೂ ಹೇಳಿಲ್ಲ. ನಮ್ಮ ಸಂಘ ಅರಣ್ಯ ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲೂ ಭ್ರಷ್ಟಾಚಾರ ಎಂಬ ಪದವನ್ನು ಬಳಕೆ ಮಾಡಿಲ್ಲ ಎಂದು ಹೇಳಿದೆ.
ರಾಜ್ಯ ಸರ್ಕಾರವು ಈಗಾಗಲೇ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ವನಪಾಲಕ ಹುದ್ದೆಗಳಿಗೆ ಕಳೆದ 2 ವರ್ಷಗಳಿಂದ ಆನ್ ಲೈನ್ ಟ್ರಾನ್ಸಫರ್ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಜಾರಿಗೆ ತಂದು ವರ್ಗಾವಣೆ ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ. ಅದು ಸ್ವಾಗತಾರ್ಹ ಕ್ರಮವಾಗಿದೆ. ಸದರಿ ವರ್ಗಾವಣೆ ಪುಕ್ರಿಯೆಯನ್ನು ವಲಯ ಅರಣ್ಯಾಧಿಕಾರಿ ವೃಂದಕ್ಕೂ ವಿಸ್ತರಿಸಿದ್ದಲ್ಲಿ ವಲಯ ಅರಣ್ಯಾಧಿಕಾರಿಗಳಿಗೆ ಅನುಕೂಲವಾಗುವುದು ಎಂಬ ಹಿತದೃಷ್ಟಿಯಿಂದ ಕರ್ನಾಟಕ ವಲಯ ಅರಣ್ಯ ಅಧಿಕಾರಿಗಳ ಸಂಘವು ಸೆಪ್ಟೆಂಬರ್ 10 ರಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಮಾಡಿರುತ್ತದೆ ಎಂದಿದೆ.
ಸಚಿವರಿಗೆ ಸಲ್ಲಿಸಿರುವಂತ ಮನವಿ ಪತ್ರದಲ್ಲಿ ಎಲ್ಲಿಯೂ ಭ್ರಷ್ಟಾಚಾರ ಎಂಬ ಪದವನ್ನೇ ಬಳಕೆ ಮಾಡಿಲ್ಲ. ಆದರೂ ಪತ್ರಿಕೆಯೊಂದರಲ್ಲಿ ಪಕಟವಾಗಿರುವ ವರದಿಯಲ್ಲಿ ವಲಯ ಅರಣ್ಯಾಧಿಕಾರಿಗಳ (RFO) ವರ್ಗಾವಣೆಯಲ್ಲಿ ರಾಜಕೀಯ ಒತ್ತಡ ವೈಯಕ್ತಿಕ ಶಿಫಾರಸ್ಸು, ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿವೆ ಎಂದೇ ಹೇಳಿರುವುದಾಗಿ ಪ್ರಕಟಿಸಲಾಗಿದೆ. ಆದರೆ ಕರ್ನಾಟಕ ವಲಯ ಅರಣ್ಯ ಅಧಿಕಾರಿಗಳ ಸಂಘವು RFO ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಸಿಲ್ಲ. ಈ ಕುರಿತು ಸಂಘದ ವತಿಯಿಂದ ಯಾವುದೇ ಹೇಳಿಕೆಯನ್ನು ಸಹ ನೀಡಿರುವುದಿಲ್ಲ. ಆದರೂ ನಮ್ಮಸಂಘದ ಹೆಸರು ಬಳಸಿಕೊಂಡಿದೆ ಎಂದು ತಿಳಿಸಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಅರಣ್ಯ ಭೂಮಿ ಒತ್ತುವರಿ ತೆರವು, ಅರಣೀಕರಣ, ನೆಡುತೋಪು ನಿರ್ಮಾಣ, ವನ್ಯಜೀವಿ ಸಂರಕ್ಷಣೆಯಲ್ಲಿ ನಮಗೆ ಆತ್ಮಸ್ಥೆರ್ಯ ತುಂಬುತ್ತಿದ್ದಾರೆ. ಹೀಗಿರುವಾಗ ಇಲಾಖೆಯಲ್ಲಿ ವರ್ಗಾವಣೆಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಮ್ಮ ಸಂಘ ಆರೋಪಿಸಿರುವುದಾಗಿ ಪತ್ರಿಕೆಯೊಂದರಲ್ಲಿ ಪ್ರಕಟಿಸಿರುವುದು ತೀವ್ರ ಆಘಾತ ತಂದಿದೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತಪ್ಪು ವರದಿ ಮಾಡುವುದರಿಂದ ಸರ್ಕಾರ ಮತ್ತು ಇಲಾಖೆಯ ಕುರಿತಂತೆ ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಯಾಗುತ್ತವೆ. ಈ ವರದಿಯಿಂದ ಸಂಘ ಮತ್ತ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತದೆ ಎಂದು ಹೇಳಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಆರ್ ಎಫ್ ಓ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಾಗಿ ನಮ್ಮ ಸಂಘಟನೆ ಹೇಳಿಲ್ಲ. ನಮ್ಮ ಸಂಘವು ಆರ್ ಎಫ್ ಓ ಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳಿಸಿ, ವೇತನ ಶ್ರೇಣಿಯನ್ನು ಪರಿಷ್ಕರಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಯಲ್ಲಿ ಮನವಿ ಮಾಡಲಾಗಿದೆ. ಇದರ ಹೊರತಾಗಿ ಭ್ರಷ್ಟಾಚಾರದ ಆರೋಪ ಮಾಡಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘವು ಸ್ಪಷ್ಟ ಪಡಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ರಾಜ್ಯ ಸರ್ಕಾರದಿಂದ ಅಧಿಕಾರಿಗಳ ‘ವಿದೇಶ ಪ್ರವಾಸ ನಿರ್ಬಂಧಿಸಿ’ ಆದೇಶ
ಎಲೆಚುಕ್ಕಿ, ಅಡಿಕೆ ಕೊಳೆ ರೋಗ ರೈತರ ಬದುಕನ್ನು ಕಸಿಯುತ್ತಿದೆ: ಶಾಸಕ ಗೋಪಾಲಕೃಷ್ಣ ಬೇಳೂರು ಕಳವಳ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಸೆ.29ರವರೆಗೆ ಭಾರಿ ಮಳೆ