ಶಿವಮೊಗ್ಗ : ಸಹಕಾರಿ ಸಂಸ್ಥೆಗಳು ಆರ್ಥಿಕತೆಯ ಬೆನ್ನೆಲುಬು ಆಗಿರುತ್ತದೆ ಎಂದು ಸಾಗರದ ಬೀರೇಶ್ವರ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಲಸೆ ಚಂದ್ರಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಬೀರೇಶ್ವರ ಕೋ. ಆಪರೇಟಿವ್ ಸೊಸೈಟಿಗೆ ನೂತನ ನೇಮಕವಾಗಿರುವ ಶಾಖಾ ಸಲಹಾ ಸಮಿತಿ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ, ಸಹಕಾರಿ ಸಂಸ್ಥೆ ಅಭಿವೃದ್ದಿಯಾಗಬೇಕಾದರೆ ಷೇರುದಾರರ ಸಹಕಾರದ ಜೊತೆಗೆ ಆಡಳಿತ ಮಂಡಳಿ ನಿರ್ದೇಶಕರ ಪಾತ್ರವೂ ಪ್ರಮುಖವಾಗಿರುತ್ತದೆ ಎಂದು ಹೇಳಿದರು.
ಸಾಗರವು ಸಹಕಾರಿ ಕ್ಷೇತ್ರಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿದ ತಾಲ್ಲೂಕು ಆಗಿದೆ. ಅನೇಕ ಸಹಕಾರಿ ಸಂಸ್ಥೆಗಳು ಇಲ್ಲಿ ಗ್ರಾಹಕ ಸೇವೆಯಲ್ಲಿ ನಿರತವಾಗಿದೆ. ಬೆಳಗಾವಿ ಜಿಲ್ಲೆಯ ಬೀರೇಶ್ವರ ಸಹಕಾರಿ ಸಂಸ್ಥೆ ಅನೇಕ ವರ್ಷಗಳಿಂದ ಗ್ರಾಹಕರಿಗೆ ಇಲ್ಲಿ ಉತ್ತಮ ಸೇವೆ ನೀಡುತ್ತಾ ಬರುತ್ತಿದೆ. ಸಂಸ್ಥೆಗೆ ಹೊಸಹೊಸ ನಿರ್ದೇಶಕರು ಬರುತ್ತಿದ್ದು, ಅವರ ಸಕ್ರಿಯ ಸೇವೆಯಿಂದ ಸಂಸ್ಥೆ ಇನ್ನಷ್ಟು ಅಭಿವೃದ್ದಿ ಹೊಂದುತ್ತದೆ ಎಂದು ತಿಳಿಸಿದರು.
ಸಹಕಾರಿ ಸಂಸ್ಥೆ ವ್ಯವಸ್ಥಾಪಕ ರವೀಂದ್ರ ಹನಗಂಡಿ ಮಾತನಾಡಿ, ಬೀರೇಶ್ವರ ಸಹಕಾರಿ ಸಂಸ್ಥೆ ಒಟ್ಟು 230 ಶಾಖೆ ಹೊಂದಿದ್ದು ಮಹಾರಾಷ್ಟ್ರ ಕರ್ನಾಟಕ, ಗೋವಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು 424840 ಸದಸ್ಯರು ಇದ್ದಾರೆ. ಸಂಸ್ಥೆಯ ಆರ್ಥಿಕ ವಹಿವಾಟು ಉತ್ತಮವಾಗಿದ್ದು, ಸುಮಾರು 36 ಕೋಟಿ ವಹಿವಾಟು ಹೊಂದಿದೆ. 4610 ಕೋಟಿ ಡೆಪಾಜಿಟ್ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಲಹಾ ಸಮಿತಿಗೆ ಆಯ್ಕೆಯಾದ ದೇವೇಂದ್ರಪ್ಪ, ಗಿರೀಶ್ ಗುಳ್ಳಳ್ಳಿ, ಗಣೇಶ ಪ್ರಸಾದ್, ಲಿಯೋ ಡಿಸೋಜ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಶಾರದಾ ನಾಯ್ಕ್, ಶ್ರೀನಿವಾಸ್ ಮೇಸ್ತಿç, ಮಂಜುನಾಥ್, ಗೌತಮ್, ರಾಹುಲ್ ಕುಲಕರ್ಣಿ ಇನ್ನಿತರರು ಹಾಜರಿದ್ದರು.
ಬದುಕಿನಲ್ಲಿ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದ ಘಟ್ಟ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ‘ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting