ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ವ್ಯಂಗ್ಯ ಚಿತ್ರದ ಪೋಸ್ಟ್ ಶೇರ್ ಮಾಡಿದಂತ ಆರೋಪಿಯ ವಿರುದ್ಧ FIR ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಕಾರ್ಗಲ್ ಠಾಣೆ ಪಿಎಸ್ಐ ಹೊಳೆಬಸಪ್ಪ ಅವರು, ದಿನಾಂಕ 15-05-2025ರಂದು ಮಧ್ಯಾಹ್ನ ಕಾರ್ಗಲ್ ನ ಶಕೀರ್ ಎಂಬಾತ ಪ್ರಜಾ ಪ್ರತಿನಿಧಿ ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮುಂದೆ ಮಂಡಿಯೂರಿ ಕುಳಿತಂತೆ ಇರುವಂತ ವ್ಯಂಗ್ಯ ಚಿತ್ರವನ್ನು ಶೇರ್ ಮಾಡಿದ್ದನು. ಈ ಮೂಲಕ ಗಲಭೆ ಏಳುವಂತೆ ಪ್ರಚೋದಿಸುವ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸುವಂತ ಪೋಟೋ ಶೇರ್ ಮಾಡಿದ್ದನು ಎಂದಿದ್ದಾರೆ.
ಆರೋಪಿ ಶಕೀರ್ ಹುಸೇನ್ ಶೇರ್ ವಾಟ್ಸ್ ಆಪ್ ಗ್ರೂಪಿನಲ್ಲಿ ಶೇರ್ ಮಾಡಿದಂತ ಪೋಟೋ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಶಕೀರ್ ಹುಸೇನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಟೋ ಶೇರ್ ಮಾಡಿದಂತ ಶಕೀರ್ ಹುಸೇನ್ ಎಂಬಾತನ ವಿರುದ್ಧ ಕಲಂ 192, 352 ಬಿಎನ್ಎಸ್ ನ ಕಲಂ 153, 504 ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಅಂದಹಾಗೇ ಈ ಹಿಂದೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದಂತ ಆರೋಪಿಯ ವಿರುದ್ಧ ಸಾಗರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಗೆ ಬಿಸಿ ಮುಟ್ಟಿಸಿದ್ದರು. ಈ ಮೂಲಕ ಸಾಗರ ತಾಲ್ಲೂಕಿನಲ್ಲಿ ಕೋಮು ಸೌಹಾರ್ದತೆಯನ್ನು ನಿಯಂತ್ರಿಸುವಂತ ಕ್ರಮವನ್ನು ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಕೈಗೊಂಡಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕೋಮು ಗಲಭೆ, ಹಿಂಸಾಚಾರಕ್ಕೆ ಕಾರಣವಾಗುವಂತ ಪೋಸ್ಟ್ ಹಾಕಬೇಡಿ. ಹಾಗೆ ಮಾಡಿದ್ರೇ ಅಂತವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟುವುದಾಗಿ ಎಚ್ಚರಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಸಾಗರದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ ಆರೋಪಿ ಅರೆಸ್ಟ್, ಜೈಲುಪಾಲು
ಸಾಗರದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಒಂದೇ ದಿನದಲ್ಲಿ ಅರೆಸ್ಟ್