ಹುಬ್ಬಳ್ಳಿ: ಮೃತ ಮಹಿಳೆಯ ಶವ ಪ್ಯಾಕ್ ಮಾಡಿಕೊಡಲು ಮೃತರ ಸಂಬಂಧಿಕರಿಂದ 500 ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿ, ಆ ಬಳಿಕ 200 ರೂಪಾಯಿ ಪೋನ್ ಪೇ ಮೂಲಕ ಲಂಚದ ಹಣವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಗುತ್ತಿಗೆ ನೌಕರನೊಬ್ಬ ಪಡೆದಿದ್ದನು. ಈ ವಿಷಯ ಹೊರ ಬರುತ್ತಿದ್ದಂತೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲಂಚವಾಗಿ ಪಡೆದಿದ್ದಂತ 200 ರೂಪಾಯಿಗಳನ್ನು ಹಿಂದಿರುಗಿಸಿರೋದಾಗಿ ತಿಳಿದು ಬಂದಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತ ಮಹಿಳೆಯ ಶವ ಪ್ಯಾಕ್ ಮಾಡಿಕೊಡಲು 500 ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟು, ಪೋನ್ ಪೇ ಮೂಲಕ ರೂ.200 ಪಡೆದಿದ್ದರು. ಈ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಕಿಮ್ಸ್ ನಿರ್ದೇಶಕ ಈಶ್ವರ್ ಹೊಸಮನಿ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದರು.
ಈ ಬೆನ್ನಲ್ಲೇ ರಾಯಚೂರು ಮೂಲಕ ಕುಟುಂಬದಿಂದ ಪೋನ್ ಪೇ ಮೂಲಕ ಲಂಚದ ಹಣವನ್ನು ಪಡೆದಿದ್ದಂತ ಗುತ್ತಿಗೆ ಸಿಬ್ಬಂದಿ 200 ರೂ.ಗಳನ್ನು ಮರಳಿ ಕುಟುಂಬಸ್ಥರಿಗೆ ಹಿಂದಿರುಗಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!
ಸಿಎಂ ಸಿದ್ಧರಾಮಯ್ಯ ವಿರುದ್ಧ ಶಾಸಕ ಸುನಿಲ್ ಕುಮಾರ್ ಲೆಟರ್ ಬಾಂಬ್: ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಶಿಫಾರಸ್ಸು!?








