ಶಿವಮೊಗ್ಗ: ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಹೈಕೋರ್ಟ್ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಶೀಘ್ರವೇ ಚುನಾವಣಾ ಪ್ರಕ್ರಿಯೆ ಮುಂದುವರೆಸಿ, ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಸದಸ್ಯರು ಡಿಆರ್ ಭೇಟಿಯಾಗಿ ಮನವಿ ಮಾಡಿದರು.
ಇಂದು ಶಿವಮೊಗ್ಗದ ಡಿಆರ್ ಕಚೇರಿಗೆ ಭೇಟಿ ಮಾಡಿದಂತ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಸಂಚಾಲಕ ಎಂ.ಡಿ ಆನಂದ್ ಮತ್ತು ಸಮಿತಿಯ ಸದಸ್ಯರು, ಹೈಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಮುಂದೂಡಿಕೆ ಮಾಡಿದ್ದನ್ನು ಮತ್ತೆ ಪುನರಾರಂಭಿಸುವಂತೆ ಕೋರಲಾಯಿತು.
ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಹಾಲಿ ಸಮಿತಿಯ ನಡೆಗೆ ಆಕ್ರೋಶ
ಹೈಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ತಡೆಯಾಜ್ಞೆ ನೀಡುತ್ತಿದ್ದಂತೆ, ಹಾಲಿ ಸಮಿತಿಯ ಅಧ್ಯಕ್ಷರಾದಂತ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿ ಭಟ್ ಅವರು, ಚುನಾವಣಾಧಿಕಾರಿ ಭೇಟಿಯಾಗಿ ಕೋರ್ಟ್ ತಡೆಯಾಜ್ಞೆಯ ಮಾಹಿತಿಯನ್ನು ಸಲ್ಲಿಸಿದ್ದರು. ಆದರೇ ಹೈಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನೀಡಿದ್ದಂತ ತಡೆಯಾಜ್ಞೆ ತೆರವುಗೊಳಿಸಿದ್ದನ್ನು ಮಾತ್ರ, ಈವರೆಗೆ ಹಾಲಿ ಸಮಿತಿಯಿಂದ ಡಿಆರ್ ಗೆ ಮಾಹಿತಿ ಸಲ್ಲಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ತಡೆಯಾಜ್ಞೆ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಲು ತೋರಿದ್ದಂತ ಅವಸರವನ್ನು, ತಡೆಯಾಜ್ಞೆ ತೆರವುಗೊಳಿಸಿದ ನಂತ್ರ ಏಕಿಲ್ಲ ಎಂಬುದಾಗಿ ಸಾರ್ವಜನಿಕರು ಹಾಲಿ ಸಮಿತಿಯ ನಡೆಯ ಬಗ್ಗೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಇಂದು ಶಿವಮೊಗ್ಗ ಡಿಆರ್ ಗೆ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಹಿತಿ ಸಲ್ಲಿಸಿದ ಹಿತರಕ್ಷಣಾ ಸಮಿತಿ
ಇಂದು ಶಿವಮೊಗ್ಗ ಜಿಲ್ಲಾ ರಿಜಿಸ್ಟರ್(DR) ಅವರನ್ನು ಮಾರಿಕಾಂಬ ಹಿತರಕ್ಷಣಾ ಸಮಿತಿಯ ಸದಸ್ಯರು ಭೇಟಿ ಮಾಡಿದರು. ಅಲ್ಲದೇ ಅತೀ ಶೀಘ್ರದಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಹೈಕೋರ್ಟ್ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಕೂಡಲೇ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲು ಮನವಿ ಸಲ್ಲಿಸಿದರು.
ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ಪ್ರಕ್ರಿಯೆ ಮುಂದುವರೆಸಿ, ಚುನಾವಣೆ ಮುಕ್ತಾಯಗೊಳಿಸಿ, ಹೊಸ ಸಮಿತಿಗೆ ಕೋರ್ಟ್ ನಿರ್ದೇಶನದಂತೆ ಮಾರಿಕಾಂಬ ದೇವಿ ಜಾತ್ರೆಯ ವೇಳೆಗೆ ಅಧಿಕಾರ ಹಸ್ತಾಂತರಿಸುವಂತೆಯೂ ಒತ್ತಾಯಿಸಿದರು ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಸಂಚಾಲಕ ಎಂ.ಡಿ ಆನಂದ್, ಮಾಸಾ ನಂಜುಂಡಸ್ವಾಮಿ, ನಿತ್ಯಾನಂದ ಶೆಟ್ಟಿ, ಟಿ.ರಾಮಪ್ಪ, ಧರ್ಮರಾಜ್ ಜಿ ಸಾಗರ್, ರಘುನಾಥ್, ಶ್ರೀನಾಥ್, ಮಂಜುನಾಥ(ಟೀಪುಡಿ), ಎಸ್.ವಿ ಜನಾರ್ಧನ್ ಆಚಾರಿ, ಜಿ.ರಾಮಪ್ಪ, ಶ್ರೀಧರ ಬಿ, ಎಲ್ ವಿ ರಾಜು, ರಾಘು ಗದ್ದೆಮನೆ, ದಿನಕರ, ಶ್ರೀಧರ.ಕೆ, ಮಹೇಶ್ ಬಸ್ ಏಜೆಂಟ್, ಗುರುಬಸವನಗೌಡ, ರಾಜು ಎಲ್.ವಿ, ಸತೀಶ್ ತೂಕ ಅಳತೆ, ನಿತ್ಯಾನಂದ ಶೆಟ್ಟಿ, ಪ್ರಜ್ವಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..
BIG NEWS: ರಾಜ್ಯದ 84 ತಾಲ್ಲೂಕುಗಳಿಗೆ ‘ತಾಲ್ಲೂಕು ವೈದ್ಯಾಧಿಕಾರಿ’ ನೇಮಿಸಿ ಸರ್ಕಾರ ಆದೇಶ: ಇಲ್ಲಿದೆ ಪಟ್ಟಿ








