ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಂಬಂಧ ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ. ಆದರೇ ಹಿಂದಿನ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಬಗ್ಗೆ ತೀರ್ಮಾನಿಸಲಾಗಿತ್ತು. ಈ ಯೋಜನೆಯಿಂದ ಏನು ಪರಿಣಾಮ ಆಗುತ್ತದೆ ಎಂಬುದು ಯಾರೂ ಹೇಳುತ್ತಿಲ್ಲ. ಬಿಜೆಪಿಯವರು ಹಣ ಹೊಡೆಯುವ ಯೋಜನೆ ಇದಾಗಿತ್ತು. ಆದರೇ ಅವರೇ ಈಗ ಇದರ ವಿರುದ್ಧ ಮಾತನಾಡುತ್ತಿದ್ದಾರೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ನಿಲ್ಲಿಸುವುದಾದರೇ ಬಿಜೆಪಿಯವರು ನಿಲ್ಲಿಸಲಿ ನೋಡೋಣ. ಈ ಯೋಜನೆ ನಿಲ್ಲಿಸಲು ಇವರೇನು ಇಂಜಿನಿಯರ್ ಗಳಾ? 1,465 ಮೆಗಾವ್ಯಾಟ್ ವಿದ್ಯುತ್ ಯೋಜನೆ ಇದಾಗಿದೆ. ಯಾವುದೇ ಯೋಜನೆಯಾದರೂ ಸ್ವಲ್ಪ ಮಟ್ಟಿನ ಅರಣ್ಯ ಹೋಗಿಯೇ ಹೋಗುತ್ತದೆ. ಪರಿಸರ ಕೂಡ ಹಾನಿಯಾಗುತ್ತದೆ. ಆದರೇ ರೈತ ಸಂಘದ ಜೊತೆಗೆ ಕೂತು ಯೋಜನೆ ತೀರ್ಮಾನಿಸಿದ ಬಿಜೆಪಿಯವರೇ ಹೋರಾಟ ಮಾಡುವುದು ಎಷ್ಟು ಸರಿ? ಬಿಜೆಪಿಯವರು ಸುಮ್ಮನೇ ಗೊಂದಲ ಮೂಡಿಸಬಾರದು. ಸಾರ್ವಜನಿಕವಾಗಿ ಹೇಳಿಕೆ ನೀಡಿ ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ಸಾಗರದಲ್ಲಿ ಮಳೆಯಿಂದಾಗಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ, ಅಡಿಕೆ ಹಾನಿಗೊಂಡ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.
BREAKING: ಕರ್ನೂಲ್ ಬಸ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ








