ನವದೆಹಲಿ : ಮಾರ್ಚ್’ನಲ್ಲಿ ಕಾಂಗ್ರೆಸ್’ನಿಂದ ಹೊರಹಾಕಲ್ಪಟ್ಟ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಲೋಕಸಭಾ ಚುನಾವಣೆಗೆ ರಾಯ್ ಬರೇಲಿ ಕ್ಷೇತ್ರವನ್ನ ಆಯ್ಕೆ ಮಾಡಿದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕೆ ಪ್ರವೇಶಿಸುವ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಒಂದು ದಿನದ ನಂತರ, ಕೃಷ್ಣಂ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಶೀಘ್ರದಲ್ಲೇ ರಾಹುಲ್ ಗಾಂಧಿ ಬಣ ಮತ್ತು ಪ್ರಿಯಾಂಕಾ ಗಾಂಧಿ ಬಣವಾಗಿ ವಿಭಜನೆಯಾಗಬಹುದು ಎಂದು ಆರೋಪಿಸಿದರು.
ವಿಶೇಷವೆಂದರೆ, ಪಕ್ಷದಲ್ಲಿ ನಡೆಯುತ್ತಿರುವ ಪಿತೂರಿಯ ಬಲಿಪಶು ಪ್ರಿಯಾಂಕಾ ಗಾಂಧಿ ಎಂದು ಕೃಷ್ಣಂ ಆರೋಪಿಸಿದ್ದಾರೆ.
ಆಚಾರ್ಯ ಪ್ರಮೋದ್ ಕೃಷ್ಣಂ ಮಾತನಾಡಿ, “ರಾಹುಲ್ ಗಾಂಧಿ ಅಮೇಥಿಯನ್ನ ತೊರೆದ ರೀತಿಯಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿದಿದೆ. ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಇದು ಈಗ ಅವರ ಬೆಂಬಲಿಗರ ಹೃದಯದಲ್ಲಿ ಜ್ವಾಲಾಮುಖಿಯ ರೂಪವನ್ನ ಪಡೆಯುತ್ತಿದೆ, ಅದು ಜೂನ್ 4 ರ ನಂತರ ಸ್ಫೋಟಗೊಳ್ಳಲಿದೆ” ಎಂದು ಅವರು ಹೇಳಿದರು.
“ಕಾಂಗ್ರೆಸ್ ಮತ್ತೆ ಎರಡು ಬಣಗಳಾಗಿ ವಿಭಜನೆಯಾಗಲಿದೆ, ಒಂದು ರಾಹುಲ್ ಗಾಂಧಿ ಮತ್ತು ಇನ್ನೊಂದು ಪ್ರಿಯಾಂಕಾ ಗಾಂಧಿ… ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವುದರಿಂದ ರಾಹುಲ್ ಗಾಂಧಿ ರಾಯ್ಬರೇಲಿ ಬದಲು ರಾವಲ್ಪಿಂಡಿಯಿಂದ ಸ್ಪರ್ಧಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ವಾಗ್ಧಾಳಿ ನಡೆಸಿದರು.
BREAKING: ಪ್ರಜ್ವಲ್ ಕೇಸ್‌ಗೆ ಬಿಗ್ ಟ್ವಿಸ್ಟ್; ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆಯ ರಕ್ಷಣೆ!
‘ಭಾರತ ಯಾವಾಗಲೂ ಮುಕ್ತವಾಗಿ ಸ್ವಾಗತಿಸುತ್ತೆ’: ಜೋ ಬೈಡನ್ ‘ಜನಾಂಗೀಯ ದ್ವೇಷ’ ಹೇಳಿಕೆ ತಳ್ಳಿಹಾಕಿದ ಸಚಿವ ‘ಜೈಶಂಕರ್’