ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಕ್ರೂಡೀಕೃತ, ಪರಿಷ್ಕೃತ ಮಾನದಂಡವನ್ನು ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಗದಿಪಡಿಸಲಾದ ಆಡಳಿತಾತ್ಮಕ/ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೇ, ಈ ಹುದ್ದೆಗಳಿಗೆ “ದಕ್ಷತೆ ಹಾಗೂ ಸೇವಾ ಜೇಷ್ಠತೆಯನ್ನು ಹೊಂದಿರತಕ್ಕ ಅಧಿಕಾರಿಗಳನ್ನು ಆಯಾಯ ಹುದ್ದೆಗಳಿಗೆ ನಿಗದಿಪಡಿಸಬೇಕಾಗಿರುವ ಮಾನದಂಡಗಳಿಗೆ ಒಳಪಟ್ಟು ಆಯ್ಕೆ ಮಾಡಲಾಗುವುದು ಹಾಗೂ ಈ ಹುದ್ದೆಗಳನ್ನು “ತುಂಬುವಾಗ ಅರ್ಹ ಸೇವಾನಿರತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗುವುದು” ಎಂದು ಸೂಚಿಸಲಾಗಿದೆ.
ಮುಂದುವರೆದು, ಮೇಲೆ ಕ್ರಮಾಂಕ (2)ರಲ್ಲಿ ಓದಲಾದ ತಿದ್ದುಪಡಿಯಲ್ಲಿ, ಈ ಮೇಲ್ಕಂಡ ಹುದ್ದೆಗಳ ಭರ್ತಿಗೆ ವೈದ್ಯರುಗಳು ನಿಯತಕಾಲಿಕವಾಗಿ ನೇಮಕಗೊಳ್ಳುವ ಮೊದಲು ಸಲ್ಲಿಸಿರುವ ಒಟ್ಟಾರ ಗುತ್ತಿಗೆ ಸೇವಾವಧಿಯನ್ನು ಅರ್ಹತೆಗೆ ಪರಿಗಣಿಸುವ ಬಗ್ಗೆ ತಿಳಿಸಲಾಗಿದೆ ಎಂದಿದ್ದಾರೆ.
ಇಲಾಖೆಯ ಉಪ ನಿರ್ದೇಶಕರ ಹುದ್ದೆ ಭರ್ತಿಗೆ ಅಂತಹ ವೈದ್ಯಾಧಿಕಾರಿಗಳು ಈ ಮೊದಲು ಉಪ ನಿರ್ದೇಶಕರಾಗಿ ಸಲ್ಲಿಸಿರುವ ಕನಿಷ್ಠ 03 ವರ್ಷಗಳ ಸೇವೆಯನ್ನೂ ಸಹ ಅರ್ಹತೆಗೆ ಪರಿಗಣಿಸಲು” ತಿಳಿಸಲಾಗಿದೆ.
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಆಕುಕ 156 ಹೆಚ್ ಎಸ್‌ಹೆಚ್ 2025, ಬೆಂಗಳೂರು, ದಿನಾಂಕ : 24ನೇ ಏಪ್ರಿಲ್ 2025 –
ಪುಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಂದಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಕೆಳಕಂಡ ಆಡಳಿತಾತ್ಮಕ/ವೈದ್ಯರ ಹುದ್ದೆಗಳಿಗೆ ಸಮಂಜಸವಾದ ಕಾಲವಕಾಶ ನೀಡಿ ಆಸಕ್ತ ಅಧಿಕಾರಿಗಳಿಂದ ಅರ್ಜಿಗಳನ್ನು ಕೋರಲು ಸೂಚಿಸಿದ್ದಾರೆ.
1. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,
2. ಜಿಲ್ಲಾ/ಪ್ರಾದೇಶಿಕ ತರಬೇತಿ ಸಂಸ್ಥೆಗಳ ಪ್ರಾಂಶುಪಾಲರು; 3. ಜಿಲ್ಲಾ ಶಸ್ತ್ರಚಿಕಿತ್ಸಕರು,
4. ಉಪ ನಿರ್ದೇಶಕರು,
5. ಪುಮುಖ ಆಸ್ಪತ್ರೆಗಳ ಸೂಪರಿಂಟೆಂಡೆಂಟ್‌ಗಳು,
6. ಜಿಲ್ಲಾ ಮಟ್ಟದ ಕಾರ್ಯಕ್ರಮಾಧಿಕಾರಿಗಳು;
ಈ ಮೇಲ್ಕಂಡ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಅರ್ಹ ವೈದ್ಯರುಗಳಿಂದ ಅರ್ಜಿ ಆಹ್ವಾನಿಸತಕ್ಕದ್ದು. ಹುದ್ದೆಯ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸುವ ವೈದ್ಯರು, ಅಂತಹ ಹುದ್ದೆಗೆ ಅಗತ್ಯಪಡಿಸಲಾದ ಕನಿಷ್ಠ ಮಾದನಂಡವನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡು, ಆಯ್ಕೆ ಪಟ್ಟಿಯನ್ನು ಅವರ ದಕ್ಷತೆ, ಸೇವಾ ಹಿರಿತನ, ಹಿಂದಿನ ಕಾರ್ಯಕ್ಷಮತೆ, ಗಮನಾರ್ಹ ಸಾಧನೆ ಇತ್ಯಾದಿಗಳನ್ನು ಹಾಗೂ ಅವರ ನಾಯಕತ್ವ / ಉಪಕ್ರಮ ತೆಗೆದುಕೊಳ್ಳುವ (initiative)/ ವಿಶ್ಲೇಷಣಾತ್ಮಕ ಸಾಮರ್ಥ್ಯಗಳ ಆಧಾರದ ಟಿಪ್ಪಣಿಗಳನ್ನು ತಯಾರಿಸಿ ಒಂದು ತಿಂಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಏ.27ರಂದು ಬೆಂಗಳೂರಲ್ಲಿ ಬೆಳಗ್ಗೆ 3.30ರಿಂದಲೇ ‘ನಮ್ಮ ಮೆಟ್ರೋ ರೈಲು’ ಸಂಚಾರ ಆರಂಭ | Namma Metro