ಬೆಂಗಳೂರು: ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಯು ಅಪರಾಧವಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ಮಹಿಳೆಯೊಬ್ಬರು ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದಂತ ರೇಪ್ ಕೇಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಡೇಟಿಂಗ್ ಆಪ್ ನಲ್ಲಿ ಭೇಟಿ, ಓಯೋ ರೂಂನಲ್ಲಿ ರೇಪ್ ಆರೋಪ ಸಂಬಂಧ ಹೈಕೋರ್ಟ್ ಗೆ ಮಹಿಳೆಯೊಬ್ಬರು ದಾಖಲಿಸಿದ್ದಂತ ಎಫ್ಐಆರ್ ರದ್ದುಪಡಿಸುವಂತೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದಂತ ಹೈಕೋರ್ಟ್ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲವೆಂದು ತೀರ್ಪು ನೀಡಿದೆ.
ಸಾಂಪ್ರಾಸ್ ಆಂಥೋಣಿ ಎಂಬುವರ ವಿರುದ್ಧ ದಾಖಲಿಸಿದ್ದಂತ ಕೇಸ್ ರದ್ದುಪಡಿಸಿ ಆದೇಶಿಸಿದೆ. ಮಹಿಳೆ, ಯುವಕ ಡೇಟಿಂಗ್ ಆಪ್ ನಲ್ಲಿ 1 ವರ್ಷದಿಂದ ಸಂಪರ್ಕದಲ್ಲಿದ್ದರು. ಭೇಟಿಯಾಗಲು ನಿರ್ಧರಿಸಿ ರೆಸ್ಟೋರೆಂಟ್ ನಲ್ಲಿ ಊಟ ಮಾಡಿದ್ದರು. ನಂತ್ರ ಓಯೋ ರೂಮ್ ಗೆ ಕರೆದೊಯ್ದು ಯುವಕನಿಂದ ಲೈಂಗಿಕ ಕ್ರಿಯೆ ನಡೆಸಲಾಗಿದೆ. ಲೈಂಗಿಕ ಕ್ರಿಯೆಗೆ ಮುಂದಾದಾಗ ಒಪ್ಪಿಗೆ ನಿರಾಕರಿಸಿದ್ದಾಗಿ ಮಹಿಳೆ ದೂರು ನೀಡಿದ್ದಾರೆ. ಒಪ್ಪಿಗೆ ಹಿಂಪಡೆದ ಬಳಿಕವೂ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪಿಸಿದ್ದಾರೆ. ಮರುದಿನ ಆಕೆಯ ಅಪಾರ್ಟಮೆಂಟ್ ಗೆ ಡ್ರಾಪ್ ಯುವಕ ಮಾಡಿದ್ದಾರೆ. ಆದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ದೂರನ್ನು ಮಹಿಳೆ ನೀಡಿದ್ದಾರೆ.
ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ಇನ್ ಸ್ಟಾ ಚಾಟಿಂಗ್ ಪರಿಗಣಿಸಿರಲಿಲ್ಲ. ಇನ್ ಸ್ಟಾ ಗ್ರಾಂನಲ್ಲಿ ಕೆಟ್ಟ ಅಭಿರುಚಿಯ ಚಾಟಿಂಗ್ ಗಳನ್ನು ಯುವಕ, ಮಹಿಳೆ ಮಾಡಿದ್ದಾರೆ. ಪರಸ್ಪರ ಪೋಟೋ, ವೀಡಿಯೋಗಳನ್ನು ವಿನಿಯಮ ಮಾಡಿಕೊಂಡಿದ್ದಾರೆ. ಇವುಗಳ್ನು ಪರಿಶೀಲಿಸಿದರೇ ಮಹಿಳೆಯ ದೂರು ಸುಳ್ಳೆಂದು ಸಾಭೀತಾಗಿದೆ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂಬುದಾಗಿ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ಧ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
BREAKING: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸದಂತೆ ಹೈಕೋರ್ಟ್ ಆದೇಶ








