ಹಾವೇರಿ: ಜಿಲ್ಲೆಯಲ್ಲಿ ಹುಟ್ಟಿದ ಹಬ್ಬದ ದಿನವೇ ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಬ್ರಿಡ್ಜ್ ಮೇಲಿನಿಂದ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ, ಕಾಂಗ್ರೆಸ್ ಯುವ ಕಾರ್ಯಕರ್ತ ಮನೋಜ್ ಪ್ರಕಾಶ್ ಉಡಗಣ(28) ಎಂಬಾತನನ್ನೇ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಯುವ ಕಾರ್ಯಕರ್ತ ಮನೋಜ್ ನಿಗೆ ಕಂಠಪೂರ್ತಿ ಮದ್ಯವನ್ನು ಕುಡಿಸಲಾಗಿದೆ. ಆ ಬಳಿಕ ವರದಾ ನದಿ ಬ್ರಿಡ್ಜ್ ಮೇಲಿನಿಂದ ನೂಕಿ ಹತ್ಯೆ ಮಾಡಲಾಗಿದೆ.
ಮೃತ ಮನೋಜ್ ಯುವತಿಯೊಬ್ಬಳನನ್ನು ಪ್ರೀತಿಸುವುದಾಗಿ ತಿಳಿದು ಬಂದಿದೆ. ಆ ಯುವತಿಗೆ ಬೇರೊಬ್ಬರ ಜೊತೆಗೆ ಮದುವೆಯಾಗಿತ್ತು. ಆದರೂ ಮನೋಜ್ ಆಕೆಯ ಹಿಂದೆ ಬಿದ್ದಿದ್ದನಂತೆ. ಇದೇ ಕಾರಣದಿಂದ ಆಕೆಯ ಪತಿ ಕೋಪಗೊಂಡು ಕಾಂಗ್ರೆಸ್ ಯುವ ಕಾರ್ಯಕರ್ತನಾಗಿದ್ದಂತ ಮನೋಜ್ ನನ್ನು ವರದಾ ನದಿ ಬ್ರಿಡ್ಜ್ ಮೇಲಿನಿಂದ ತಳ್ಳಿ ಹತ್ಯೆ ಮಾಡಲಾಗಿದೆ.
ಕಳೆದ ಜುಲೈ.26ರಂದು ಮನೋಜ್ ಹುಟ್ಟಿದ ಹಬ್ಬವಿತ್ತು. ಆ ದಿನವೇ ಆತನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಬಳಿಯ ವರದಾ ನದಿ ದಡದಲ್ಲಿ ಮನೋಜ್ ಶವ ಪತ್ತೆಯಾಗಿದ್ದು, ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BREAKING: ಧರ್ಮಸ್ಥಳ ಕೇಸ್: 6 ಅಡಿ ಅಗೆದರೂ ದೊರೆಯದ ಕುರುಹು, 8ನೇ ಪಾಯಿಂಟ್ ಶೋಧ ಕಾರ್ಯ ಮುಕ್ತಾಯ
ಕಾಂಗ್ರೆಸ್ ಸರ್ಕಾರದ ವಿರುದ್ಧದ BJP ಪ್ರತಿಭಟನೆ: ಅನ್ನದಾತರನ್ನು ಕಡೆಗಣಿಸಿದವರಿಗೆ ಧಿಕ್ಕಾರವೆಂದ ಬಿವೈ ವಿಜಯೇಂದ್ರ