ನವದೆಹಲಿ: ನಿಮ್ಮ ಮಕ್ಕಳ ಆಸ್ತಿಯನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಬಯಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಮಾಚಲ ಪ್ರದೇಶದ ಹಮೀರ್ಪುನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಠಾಕೂರ್, “ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ಕಾಂಗ್ರೆಸ್ ಕೈಯೊಂದಿಗೆ, ನಿಮ್ಮ ಮಕ್ಕಳ ಆಸ್ತಿಯನ್ನು ಮುಸ್ಲಿಮರಿಗೆ ನೀಡಲು, ರಾಷ್ಟ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಮುಗಿಸಲು, ಜಾತಿವಾದ ಮತ್ತು ಪ್ರಾದೇಶಿಕತೆಯ ಆಧಾರದ ಮೇಲೆ ದೇಶವನ್ನು ವಿಭಜಿಸಲು ಬಯಸುವ ವಿದೇಶಿ ಶಕ್ತಿಗಳ ಕೈಗಳು ಸಹ ಗೋಚರಿಸುತ್ತವೆ” ಎಂದು ಹೇಳಿದರು.
“ತುಕ್ಡೆ-ತುಕ್ಡೆ ಗ್ಯಾಂಗ್ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಸುತ್ತುವರೆದಿದೆ ಮತ್ತು ಅವರ ಸಿದ್ಧಾಂತವನ್ನು ಹೈಜಾಕ್ ಮಾಡಿದೆ” ಎಂದು ಅವರು ಆರೋಪಿಸಿದರು.
“ನೀವು ಕಾಂಗ್ರೆಸ್ನ ‘ತುಕ್ಡೆ-ತುಕ್ಡೆ’ ಗ್ಯಾಂಗ್ನೊಂದಿಗೆ ಹೋಗಲು ಬಯಸುತ್ತೀರಾ ಅಥವಾ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಅನ್ನು ನಂಬುವ ನರೇಂದ್ರ ಮೋದಿಯವರೊಂದಿಗೆ ಹೋಗಲು ಬಯಸುತ್ತೀರಾ ಎಂದು ನೀವು ನಿರ್ಧರಿಸಬೇಕು. ಮಕ್ಕಳ ಆಸ್ತಿ ಅವರ ಬಳಿಯೇ ಇರಬೇಕೇ ಅಥವಾ ಮುಸ್ಲಿಮರಿಗೆ ಹೋಗಬೇಕೇ ಎಂಬುದನ್ನು ನೀವು ನಿರ್ಧರಿಸಬೇಕು” ಎಂದು ಅನುರಾಗ್ ಠಾಕೂರ್ ಹೇಳಿದರು.
ಆದಾಗ್ಯೂ, ಬಿಜೆಪಿ “ಮುಸ್ಲಿಮರಿಗೆ ಎಲ್ಲಾ ಹಕ್ಕುಗಳನ್ನು ಸಮಾನವಾಗಿ ನೀಡಿದೆ” ಮತ್ತು ಅದು ಧರ್ಮದ ಆಧಾರದ ಮೇಲೆ ಅಲ್ಲ, ಬದಲಿಗೆ “ಅದು ಅವರ ಹಕ್ಕು” ಎಂದು ಠಾಕೂರ್ ಹೇಳಿದ್ದಾರೆ.