ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದೊಡ್ಡದಾಯಿತೇ ಹೊರತು ಕರ್ನಾಟಕಕ್ಕೆ ನೀಡುವಂತ ಪಾಲಿನ ಪ್ರಮಾಣವೇನು ಕಡಿಮೆಯ ಆಗಿಲ್ಲ ಎಂಬುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಬಿಜೆಪಿ ವಿರುದ್ಧ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್.ಟಿ ಕಿಡಿಕಾರಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್.ಟಿ ಅವರು, ಪ್ರಿಯ ಬಿಜೆಪಿ ಮತ್ತು ಅಶ್ವಿನಿ ವೈಷ್ಣವ್ ಅವರೇ, ಯುಪಿಎ ಅವಧಿಯಲ್ಲಿ, ಕರ್ನಾಟಕವು ಭಾರತದ ರೈಲ್ವೆ ಬಜೆಟ್‌ನ ~5% ಅನ್ನು ಪಡೆದುಕೊಂಡಿತು ಎಂದಿದ್ದಾರೆ.
2025-26 ರಲ್ಲಿ ಮೋದಿ ನೇತೃತ್ವದಲ್ಲಿ, ಇದು ಕೇವಲ 2.85% ಮಾತ್ರವೇ ಆಗಿದೆ. ಒಟ್ಟಾರೆ ಬಜೆಟ್ ಬಲವಾಗಿ ಬೆಳೆದಿರುವುದರಿಂದ ಮಾತ್ರ ₹7,500+ ಕೋಟಿ ದೊಡ್ಡದಾಗಿ ಕಾಣುತ್ತದೆ ಎಂದಿದ್ದಾರೆ.
ಈ “ದಾಖಲೆಯ ಬಜೆಟ್” ಹೊರತಾಗಿಯೂ, 2014-2025 ರ ನಡುವಿನ ರೈಲು ಅಪಘಾತಗಳು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಅತ್ಯಧಿಕವಾಗಿವೆ ಎಂದು ಕಿಡಿಕಾರಿದ್ದಾರೆ.
ಹೆಚ್ಚಿನ ಹಣ, ಹೆಚ್ಚಿನ ಪಿಆರ್, ಹೆಚ್ಚಿನ ಅಪಘಾತಗಳು – ಕಡಿಮೆ ಸುರಕ್ಷತೆ ಎಂಬುದಾಗಿ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್.ಟಿ ಅವರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
Dear @BJP4India & @AshwiniVaishnaw
Under UPA, Karnataka got ~5% of India’s Railway Budget.
In 2025-26 under Modi, it’s just 2.85%.
₹7,500+ cr looks big ONLY because the overall budget has ballooned.
And despite this “record budget”, train accidents between 2014–2025 are the… pic.twitter.com/3stEi4UskR— Anil Kumar T (@iamanilinc) August 10, 2025