ದಾವಣಗೆರೆ: ಬಡವರ ಪಾಲಿಗೆ ಕಾಂಗ್ರೆಸ್ ಪಕ್ಷ ಒಂದು ಗಿರವಿ ಅಂಗಡಿಯಂತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಇಂದು ಇಲ್ಲಿ ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮೆಟ್ಟಿಲು ಹತ್ತಿದ ಬಡವರ ಜೀವಸಮಾಧಿಯಾಗುತ್ತದೆ. ಯಾರೂ ವಾಪಸ್ ಬರುವುದಿಲ್ಲ. ಶ್ರೀಮಂತರು ಈ ಬಡವರು ಇಟ್ಟ ಗಿರವಿ ವಸ್ತುಗಳನ್ನು ಹೊಡೆದುಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು.
ಬಾಬಾಸಾಹೇಬರು ಹೇಳಿದಂತೆ ಕಾಂಗ್ರೆಸ್ ಸುಡುವ ಮನೆಯೇ ಹೊರತು ಅದು ಭವಿಷ್ಯ ನೀಡುವ ಮನೆಯಲ್ಲ ಎಂದರು. ದಲಿತರ ಪರ ಇರುವ ಮತ್ತು ಅಂಬೇಡ್ಕರರಿಗೆ ಗೌರವ ಕೊಡುವ ಬಿಜೆಪಿ ಮತ್ತು ಮೋದಿಯವರನ್ನು ಸರ್ವರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯನವರು ಹಗರಣಗಳ ಮೂಲಕ ಕಾಗೆ ಥರ ಕಪ್ಪಾಗಿದ್ದಾರೆ. ಅಲ್ಲಿ ಕಪ್ಪು ಚುಕ್ಕಿ ತೋರಿಸಲು ಸಾಧ್ಯವೇ ಪ್ರಶ್ನಿಸಿದರು. ದಲಿತರಿಗೆ 42 ಸಾವಿರ ಕೊಡುವುದಾಗಿ ಬಜೆಟ್‍ನಲ್ಲಿ ಪ್ರಕಟಿಸುತ್ತಾರೆ. 14 ಸಾವಿರ ಕೋಟಿಯನ್ನು ಗ್ಯಾರಂಟಿಗಾಗಿ ಅದರಿಂದ ತೆಗೆಯುತ್ತಾರೆ. ದಲಿತರ ದುಡ್ಡು ದಲಿತರು ಕೊಟ್ಟ ಗ್ಯಾರಂಟಿ ಯಾವುದದು ಎಂದು ಕೇಳಿದರು.
ದಲಿತರಿಗೆ ಕೊಟ್ಟದ್ದು ಕೇವಲ 7 ಸಾವಿರ ಕೋಟಿ. ಇದರ ಕುರಿತು ಕಾಂಗ್ರೆಸ್ಸಿನ ದಲಿತ ನಾಯಕರು ಒಬ್ಬರೂ ಮಾತನಾಡುವುದಿಲ್ಲ ಎಂದು ಟೀಕಿಸಿದರು. ದಲಿತರಿಗೆ ಇಷ್ಟು ಅನ್ಯಾಯ ಆದರೂ ಎಐಸಿಸಿ ಅಧ್ಯಕ್ಷರು ದೇಶದಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಾರೆ ಎನ್ನುತ್ತಾರೆ. 65 ವರ್ಷಗಳ ಕಾಲ ಬಿಜೆಪಿ ಆಡಳಿತ ಇತ್ತೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಸ್ಮಾರ್ಟ್ ಮೀಟರ್ ಅವ್ಯವಹಾರ ತನಿಖೆಗೆ ಲೋಕಾಯುಕ್ತಕ್ಕೆ ದೂರು: ಡಾ.ಸಿ.ಎನ್.ಅಶ್ವತನಾರಾಯಣ್
ರಾಜ್ಯ GST ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ರಾಜ್ಯವಾಗಿದೆ: ಸಿಎಂ ಸಿದ್ಧರಾಮಯ್ಯ