ಮಂಡ್ಯ: ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ಆಫರ್ ನೀಡಿ ಬಿಜೆಪಿ-ಜೆಡಿಎಸ್ ನಾಯಕರು ನಮ್ಮ ಸರ್ಕಾರವನ್ನು ಬೀಳಿಸಲು ಮುಂದಾಗುತ್ತಿದ್ದಾರೆ ಅಂತ ಮಂಡ್ಯ ಕೈ ಶಾಸಕ ರವಿಕುಮಾರ್ ಹೇಳಿದ್ದಾರೆ.
ಅವರು ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಧ್ಯವರ್ತಿಗಳ ಮೂಲಕ ಐವತ್ತು ಮಂದಿ ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ಆಫರ್ ನೀಡುತ್ತಿದ್ದಾರೆ ಅಂತ ಹೇಳಿದರು. ಇನ್ನೂ ಇದೇ ವೇಳೆ ಅವರು ಮಾತನಾಡುತ್ತ ಸಂತೋಶ್, ಶೋಭಾ, ಕುಮಾರಸ್ವಾಮಿಯವರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಂತ ಅವರು ಆರೋಪಿಸಿದರು. ಇನ್ನೂ ನನ್ನ ಬಳಿ ದಾಖಲೆಗಳು ಇದ್ದು ಅವುಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಅಂತ ತಿಳಿಸಿದರು.