Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನೋವು ನಿವಾರಕ’ಗಳ ಅತಿಯಾದ ಬಳಕೆ ನಿಮ್ಮ ಕಿಡ್ನಿಗೆ ಕಂಟಕ ; ಮೌನವಾಗಿ ಹಾನಿ ಮಾಡುತ್ತೆ! ವೈದ್ಯರ ಎಚ್ಚರಿಕೆ

19/03/2026 10:14 PM

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM

BREAKING: ಬೆಂಗಳೂರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

19/03/2026 9:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಂದು ಕಡೆ ಕಾಂಗ್ರೆಸ್‍ ನಿಂದ, ಮತ್ತೊಂದು ಕಡೆ ಕಳ್ಳ ಖದೀಮರಿಂದ ಲೂಟಿ: ಛಲವಾದಿ ನಾರಾಯಣಸ್ವಾಮಿ ಕಿಡಿ
KARNATAKA

ಒಂದು ಕಡೆ ಕಾಂಗ್ರೆಸ್‍ ನಿಂದ, ಮತ್ತೊಂದು ಕಡೆ ಕಳ್ಳ ಖದೀಮರಿಂದ ಲೂಟಿ: ಛಲವಾದಿ ನಾರಾಯಣಸ್ವಾಮಿ ಕಿಡಿ

By kannadanewsnow0917/01/2025 4:12 PM

ಬೆಂಗಳೂರು: ರಾಜ್ಯ ಸರಕಾರವು ಗೃಹ ಸಚಿವರಿಗೆ ಮಾಹಿತಿಗಳನ್ನೇ ಕೊಡದೆ ಕತ್ತಲಲ್ಲಿ ಇಟ್ಟಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಗೃಹ ಮಂತ್ರಿಗಳನ್ನೇ ಮೂಲೆಗುಂಪು ಮಾಡಿದೆ ಎಂದು ಅವರ ಮಾತಿನಿಂದ ಗೊತ್ತಾಗುವುದಾಗಿ ತಿಳಿಸಿದರು. ಮಾನ್ಯ ಗೃಹ ಸಚಿವರು ಏನೇ ಕೇಳಿದರೂ ಮಾಹಿತಿ ತರಿಸಿಕೊಳ್ಳುವೆ ಎನ್ನುತ್ತಾರೆ. ಸಿ.ಟಿ.ರವಿ ಕೇಸಿನಲ್ಲೂ ಅಲ್ಲಿ ನಡೆದ ಘಟನೆಗಳ ಮಾಹಿತಿ ಇಲ್ಲ; ಏನಾಗಿದೆ ಎಂದು ಗೊತ್ತಿಲ್ಲ ಎಂದಿದ್ದರು ಎಂದು ಟೀಕಿಸಿದರು.

ಬಳಿಕ ಪೊಲೀಸರ ಕ್ರಮ ಸರಿ ಇಲ್ಲ; ಸಿ.ಟಿ.ರವಿ ಅವರನ್ನು ಕಬ್ಬಿನಗದ್ದೆಯಲ್ಲಿ ಸುತ್ತಾಡಿಸಿದರು ಮತ್ತು ಇಡೀ ರಾತ್ರಿ ಬೇರೆ ಬೇರೆ ಕಡೆ ಸುತ್ತಾಡಿಸಿದ್ದಾಗಿ ಪತ್ರಕರ್ತರು ಕೇಳಿದಾಗ, ಅದು ನನಗೆ ಗೊತ್ತಾಗಲಿಲ್ಲ; ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೇಸು ಹಾಕಿದ್ದರಿಂದ ಅದನ್ನು ನಿಭಾಯಿಸಲು ಹಾಗೆ ಮಾಡಿದ್ದಾರೆ ಎಂದಿದ್ದರು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಅವರಿಗೆ ಬೇಕಾದ ವಿಚಾರ ಬಂದರೆ ಎಲ್ಲ ಮಾಹಿತಿಯೂ ಇರುತ್ತದೆ. ಅವಶ್ಯಕತೆ ಇಲ್ಲದ್ದರ ಮಾಹಿತಿಯೇ ಇರುವುದಿಲ್ಲ ಎಂದರು. ಶಾಸಕ ಹರಿಪ್ರಸಾದ್ ಅವರು, ಆರೆಸ್ಸೆಸ್, ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದಿದ್ದಾರೆ. ಎಲ್ಲಾದರೂ ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಂಡ ಒಂದೇ ಒಂದು ಘಟನೆಯನ್ನು ತಿಳಿಸಲು ಅವರಿಗೆ ಸಾಧ್ಯವೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.

ಏನೋ ಒಂದು ಆಪಾದನೆ ಮಾಡಬೇಕೆಂಬ ಕಾರಣಕ್ಕೆ ಅವರು ಮಾಡುತ್ತಿದ್ದಾರೆ. ನಿಜವಾಗಿಯೂ ಈ ರಾಷ್ಟ್ರದಲ್ಲಿ ಮೀಸಲಾತಿ, ಸಂವಿಧಾನದ ಪರವಾಗಿ ಇರುವುದು ಬಿಜೆಪಿ ಎಂದು ತಿಳಿಸಿದರು. ಸಂವಿಧಾನ ವಿರೋಧಿ ಕಾಂಗ್ರೆಸ್ ಎಂದು ಟೀಕಿಸಿದರು. ಹರಿಪ್ರಸಾದ್ ಅವರಿಗೆ ಸಂವಿಧಾನದ, ಮೀಸಲಾತಿ ಬಗ್ಗೆ ಕಾಳಜಿ ಇದೆ. ಆದರೆ, ಕಾಂಗ್ರೆಸ್ಸಿಗೆ ಇಲ್ಲವಲ್ಲವೇ? ಎಂದು ಕೇಳಿದರು.

ಸಂವಿಧಾನವನ್ನು ತಿದ್ದಿದ್ದು ಕಾಂಗ್ರೆಸ್; ಇಂದಿರಾ ಗಾಂಧಿಯವರು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಸಂವಿಧಾನ ತಿದ್ದಿ, ತುರ್ತು ಪರಿಸ್ಥಿತಿಯನ್ನು ಹೇರಿ, ಈ ದೇಶದಲ್ಲಿ ಸಂವಿಧಾನ 2 ವರ್ಷ ಕಾಲ ಅದರ ಚಟುವಟಿಕೆ ಇಲ್ಲದಂತೆ ನ್ಯಾಯಾಲಯಗಳಲ್ಲೂ ಮತ್ತೆಲ್ಲ ವ್ಯವಹಾರ ಸ್ತಬ್ಧ ಮಾಡಿದ ಕೀರ್ತಿ ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.

ಬ್ಯಾಂಕಿನ ದರೋಡೆಗಳು ಕೂಡ ಕಾನೂನು- ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನಗಳು ಎಂದ ಅವರು, ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಸರಕಾರಿ ಖಜಾನೆ ಲೂಟಿ ಮಾಡುತ್ತಿದೆ. ಕಾಂಗ್ರೆಸ್‍ನಿಂದ ಒಂದು ಕಡೆ ಲೂಟಿ, ಕಳ್ಳಖದೀಮರಿಂದ ಮತ್ತೊಂದು ಕಡೆ ಲೂಟಿ ಎಂಬ ಸ್ಥಿತಿ ಇದೆ ಎಂದು ಆರೋಪಿಸಿದರು.

ಸಿಎಂ ಸ್ಥಾನಕ್ಕೆ ಅರ್ಹತೆ ಇದ್ದರೂ ಆಸೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

SHOCKING : ದಕ್ಷಿಣ ಕನ್ನಡದಲ್ಲಿ ಪೈಶಾಚಿಕ ಕೃತ್ಯ : 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ!

Share. Facebook Twitter LinkedIn WhatsApp Email

Related Posts

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM1 Min Read

BREAKING: ಬೆಂಗಳೂರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

19/03/2026 9:17 PM1 Min Read

ಸಾಗರ ‘ತಹಶೀಲ್ದಾರ್ ಕಚೇರಿ’ಯಲ್ಲಿ ನಕಲಿ ದಾಖಲೆ ಸೃಷ್ಟಿ ಜಾಲ ಬಯಲು: ಆರು ಜನರ ವಿರುದ್ಧ ‘FIR’ ದಾಖಲು

19/03/2026 9:09 PM1 Min Read
Recent News

‘ನೋವು ನಿವಾರಕ’ಗಳ ಅತಿಯಾದ ಬಳಕೆ ನಿಮ್ಮ ಕಿಡ್ನಿಗೆ ಕಂಟಕ ; ಮೌನವಾಗಿ ಹಾನಿ ಮಾಡುತ್ತೆ! ವೈದ್ಯರ ಎಚ್ಚರಿಕೆ

19/03/2026 10:14 PM

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM

BREAKING: ಬೆಂಗಳೂರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

19/03/2026 9:17 PM

ಸಾಗರ ‘ತಹಶೀಲ್ದಾರ್ ಕಚೇರಿ’ಯಲ್ಲಿ ನಕಲಿ ದಾಖಲೆ ಸೃಷ್ಟಿ ಜಾಲ ಬಯಲು: ಆರು ಜನರ ವಿರುದ್ಧ ‘FIR’ ದಾಖಲು

19/03/2026 9:09 PM
State News
KARNATAKA

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

By kannadanewsnow0919/03/2026 10:12 PM KARNATAKA 1 Min Read

ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ನಾಳೆ (ಶುಕ್ರವಾರ) ಸಡಗರದ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು…

BREAKING: ಬೆಂಗಳೂರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

19/03/2026 9:17 PM

ಸಾಗರ ‘ತಹಶೀಲ್ದಾರ್ ಕಚೇರಿ’ಯಲ್ಲಿ ನಕಲಿ ದಾಖಲೆ ಸೃಷ್ಟಿ ಜಾಲ ಬಯಲು: ಆರು ಜನರ ವಿರುದ್ಧ ‘FIR’ ದಾಖಲು

19/03/2026 9:09 PM

BREAKING: ರಾಜ್ಯದಲ್ಲಿ ಯುಗಾದಿ ಹಬ್ಬದ ದಿನವೇ ಘೋರ ಘಟನೆ: ರೀಲ್ಸ್ ಹುಚ್ಚಾಟಕ್ಕೆ ಬಿಜೆಪಿ ಪುತ್ರ ಬಲಿ

19/03/2026 9:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.