ನವದೆಹಲಿ: ನಾಲ್ವರು ಕರ್ನಾಟಕದ ಮುಖ್ಯಮಂತ್ರಿಗಳು ಓಡಾಡಿದಂತ ಕಾರನ್ನು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ಖರೀದಿಸಿದ್ದಾರೆ.
ಕರ್ನಾಟಕ ಭವನದಲ್ಲಿ ಅವಧಿ ಮುಕ್ತಾಯಕ್ಕೆ ಬಂದಿದ್ದಂತ ಕಾರುಗಳನ್ನು ಹರಾಜು ಹಾಕಲಾಯಿತು. ಕರ್ನಾಟಕದ ನಾಲ್ವರು ಮುಖ್ಯಮಂತ್ರಿಗಳು ಓಡಾಡಿದ ಕಾರನ್ನು ಅತೀ ಹೆಚ್ಚು ಅಂದರೆ 2.10 ಲಕ್ಷ ರೂಗಳಿಗೆ ಬಿಡ್ ಮಾಡಿ ಕಾಂಗ್ರೆಸ್ ನಾಯಕ ಟಿ.ಆರ್ ರಾಮಪ್ಪ ಎಂಬುವರು ಖರೀದಿಸಿದ್ದಾರೆ.
ಹೊಂಡಾ ಸಿ ಆರ್ ಬಿ ಕಾರು ಇದ್ದಾಗಿದ್ದು, ಈ ಕಾರನ್ನು 2010ರಲ್ಲಿ ಕರ್ನಾಟಕ ಭವನದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದೇ ಕಾರಿನಲ್ಲೇ ಮಾಜಿ ಮುಖ್ಯಮಂತ್ರಿಗಳಾದಂತ ಬಿಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ಬಂದಾಗ ಓಡಾಡಿದ್ದರು.
2010ರ ಕಾರಿನ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರ ಹರಾಜಿಗೆ ಇಡಲಾಗಿತ್ತು. ಸರ್ಕಾರಿ ಮೌಲ್ಯದ 1.35 ಲಕ್ಷ ಬಿಡ್ ನಿಗದಿ ಪಡಿಸಲಾಗಿತ್ತು. ಇದನ್ನು 2.10 ಲಕ್ಷಕ್ಕೆ ಬಿಡ್ ಮಾಡಿ ಕೋಲಾರ ಮೂಲದ ಕಾಂಗ್ರೆಸ್ ಮುಖಂಡ ಟಿ.ಆರ್ ರಾಮಪ್ಪ ತಮ್ಮದಾಗಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವಂತ ಟಿ.ಆರ್ ರಾಮಪ್ಪ, ನಾಲ್ವರು ಮಾಜಿ ಮುಖ್ಯಮಂತ್ರಿಗಳು ಓಡಾಡಿದಂತ ಅದೃಷ್ಟದ ಕಾರು ಇದಾಗಿದೆ. ಈ ಕಾರಣದಿಂದಲೇ ನಾನು ಹೊಂಡಾ ಸಿ ಆರ್ ಬಿ ಕಾರನ್ನು ಬಿಡ್ ಮಾಡಿ ಖರೀದಿಸಿದ್ದಾಗಿ ತಿಳಿಸಿದ್ದಾರೆ.
Shocking: ಸೋವಿಯತ್ ಸೈನಿಕರನ್ನೇ ಕಲ್ಲಾಗಿಸಿದ ‘ಏಲಿಯನ್ಸ್’: ಸಿಐಎ ವರದಿಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ
ನಾಳೆ ಭಾರತದ ಮೊದಲ ‘ವರ್ಟಿಕಲ್ ಲಿಫ್ಟಿಂಗ್ ಪಂಬನ್ ಸೇತುವೆ’ ಪ್ರಧಾನಿ ಮೋದಿ ಲೋಕಾರ್ಪಣೆ: ವಿಶೇಷತೆ ಇಲ್ಲಿದೆ