ನವದೆಹಲಿ: ಕಾಂಗ್ರೆಸ್ ಪಕ್ಷವನ್ನು “ತುಕ್ಡೆ ತುಕ್ಡೆ ಗ್ಯಾಂಗ್ನ ಸುಲ್ತಾನ್” ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಪಕ್ಷವು ದೇಶವನ್ನು ವಿಭಜಿಸಲು, ಒಡೆಯಲು ಮತ್ತು ದುರ್ಬಲಗೊಳಿಸಲು ಉದ್ದೇಶಿಸಿದೆ ಎಂದು ಆರೋಪಿಸಿದರು.
ಮೈಸೂರಿನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷವು ತುಕ್ಡೆ ತುಕ್ಡೆ ಗ್ಯಾಂಗ್ನ ಸುಲ್ತಾನ್ ಆಗಿದೆ. ದೇಶದ ಬಗ್ಗೆ ಅವರ ದ್ವೇಷ ಮಿತಿ ಮೀರಿದೆ. ಕಾಂಗ್ರೆಸ್ ದೇಶವನ್ನು ದುರ್ಬಲಗೊಳಿಸಲು ಬಯಸಿದೆ. ಕಾಂಗ್ರೆಸ್ ಪಕ್ಷದ ಅಪಾಯಕಾರಿ ಉದ್ದೇಶಗಳು ಇನ್ನೂ ಹಾಗೆಯೇ ಇವೆ. ಅವರು ಬದಲಾಗಿಲ್ಲ. ಅಧಿಕಾರ ಹಿಡಿಯಲು ಅವರು ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ.” ಎಂದರು.
ದೇಶವನ್ನು ವಿಭಜಿಸುವಲ್ಲಿ ನಂಬಿಕೆ ಹೊಂದಿರುವ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರೊಂದಿಗೆ ಮೈತ್ರಿ ಮಾಡಿಕೊಳ್ಳುವವರನ್ನು ಕಾಂಗ್ರೆಸ್ ಯಾವಾಗಲೂ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.
“ನಿಷೇಧಿತ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಸರ್ಜಿಕಲ್ ದಾಳಿಯ ಪುರಾವೆಗಳನ್ನು ಸೇನೆಯಿಂದ ಕೇಳಿದ ಕಾಂಗ್ರೆಸ್ ಅವರು ಕಾಶ್ಮೀರವನ್ನು ನಮ್ಮದು ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಅವರು ಭಗವಾನ್ ರಾಮನಿಗೆ ಅಗೌರವ ತೋರಿದರು. ಇಂಡಿ ಮೈತ್ರಿಕೂಟದ ಜನರು ಸನಾತನವನ್ನು ಕೊನೆಗೊಳಿಸಲು ಬಯಸುತ್ತಾರೆ. ಅವರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಾರೆ. ಮೋದಿ ಇರುವವರೆಗೂ ಯಾರ ಯೋಜನೆಗಳು ಈಡೇರುವುದಿಲ್ಲ, ಇದು ಮೋದಿ ಅವರ ಗ್ಯಾರಂಟಿ” ಎಂದು ಅವರು ಹೇಳಿದರು.