ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಲಿದೆ ಎನ್ನಲಾಗುತ್ತಿತ್ತು. ಒಂದು ವೇಳೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದ್ದೇ ಆದ್ರೇ, ಕರ್ನಾಟಕದಲ್ಲಿ ಮುಂದಾಗುವ ಅನಾಹುತಗಳಿಗೇ ರಾಜ್ಯ ಸರ್ಕಾರವೇ ಹೊಣೆ ಎಂಬುದಾಗಿ ಕರ್ನಾಟಕ ಬಿಜೆಪಿ ಎಚ್ಚರಿಕೆ ನೀಡಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅದು, ಬಣ್ಣ ಬದಲಿಸುವಲ್ಲಿ ಕಾಂಗ್ರೆಸ್ ಪಕ್ಷದವರು ಊಸರವಳ್ಳಿಯನ್ನು ಸಹ ಮೀರಿಸುತ್ತಾರೆ ಎಂಬುದಾಗಿ ಕಿಡಿಕಾರಿದೆ.
ಗ್ಯಾರಂಟಿಗಳೇ ನಮ್ಮ ಸರ್ಕಾರಕ್ಕೆ ಶ್ರೀರಕ್ಷೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಶಾಸಕರೆಲ್ಲರೂ ಈಗ ಗ್ಯಾರಂಟಿಯಿಂದಲೇ ನಮ್ಮ ಸರ್ಕಾರಕ್ಕೆ ಹಿನ್ನಡೆ ಎನ್ನುತ್ತಿರುವುದು ಹತಾಶೆಯ ಪರಮಾವಧಿ ಅಂತ ಗುಡುಗಿದೆ.
ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಗ್ಯಾರಂಟಿಗಳನ್ನು ನಿಲ್ಲಿಸಿದರೆ, ಕರ್ನಾಟಕದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣವಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದೆ.
ಬಣ್ಣ ಬದಲಿಸುವಲ್ಲಿ @INCKarnataka ದವರು ಊಸರವಳ್ಳಿಯನ್ನು ಸಹ ಮೀರಿಸುತ್ತಾರೆ.
ಗ್ಯಾರಂಟಿಗಳೇ ನಮ್ಮ ಸರ್ಕಾರಕ್ಕೆ ಶ್ರೀರಕ್ಷೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಶಾಸಕರೆಲ್ಲರೂ ಈಗ ಗ್ಯಾರಂಟಿಯಿಂದಲೇ ನಮ್ಮ ಸರ್ಕಾರಕ್ಕೆ ಹಿನ್ನಡೆ ಎನ್ನುತ್ತಿರುವುದು ಹತಾಶೆಯ ಪರಮಾವಧಿ.
ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಗ್ಯಾರಂಟಿಗಳನ್ನು ನಿಲ್ಲಿಸಿದರೆ,… pic.twitter.com/aldIsAL0JL
— BJP Karnataka (@BJP4Karnataka) June 6, 2024
BREAKING: ಬಿಟ್ ಕಾಯಿನ್ ಪ್ರಕರಣ: ಶ್ರೀಕಿ ಸೇರಿ 6 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ SIT
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ : ಕೇವಲ 60 ಸೆಕೆಂಡ್ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್!