ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ರೆಡಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೇ ಯಾರಿಗೆಲ್ಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಫೈಲನ್ ಮಾಡಲಾಗಿದೆ ಅನ್ನೋ ಸಂಭವನೀಯ ಪಟ್ಟಿ ಮುಂದಿದೆ ಓದಿ.
ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಲೋಕಸಭಾ ಚುನಾವಣೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಂಭಾವ್ಯ ಪಟ್ಟಿಯನ್ನು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರೆಡಿ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೇ ಅಥವಾ ಘೋಷಣೆಯ ನಂತ್ರ ಕಾಂಗ್ರೆಸ್ ಪಕ್ಷದಿಂದ ಪಟ್ಟಿಯನ್ನು ಘೋಷಿಸೋ ಸಾಧ್ಯತೆ ಇದೆ. ಅಲ್ಲದೇ ಫೆಬ್ರವರಿ ಅಂತ್ಯದ ವೇಳೆಗೆ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೀಗಿದೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
- ಹಾಸನ- ಶ್ರೇಯಸ್ ಪಟೇಲ್, ಹೊಳೇನರಸೀಪುರ ಕ್ಷೇತ್ರದ ಪರಾಜಿತ ಅಭ್ಯರ್ಷಿ
- ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ, ಮಾಜಿ ಸಚಿವ, ಹಾಲಿ ಎಂಎಲ್ಸಿ
- ಬೆಂಗಳೂರು ಉತ್ತರ- ಕುಸುಮಾ ಹನುಮಂತರಾಯಪ್ಪ
- ಬೆಂಗಳೂರು ಸೆಂಟ್ರಲ್- ಎನ್ ಎ ಹ್ಯಾರಿಸ್, ಶಾಂತಿನಗರ ಶಾಸಕ
- ಬೀದರ್, ಸಾಗರ್ ಖಂಡ್ರೆ, ಸಚಿವ ಈಶ್ವರ್ ಖಂಡ್ರೆ ಪುತ್ರ
- ಕಲಬುರ್ಗಿ – ರಾಧಾಕೃಷ್ಣ
- ಬೆಂಗಳೂರು ದಕ್ಷಿಣ – ಎನ್.ರಮೇಶ್ ಕುಮಾರ್, ವಿಧಾನಸಭೆ ಮಾಜಿ ಸ್ಪೀಕರ್
- ಬಳ್ಳಾರಿ – ಸೌಪರ್ಣಿಕಾ, ಇ.ತುಕಾರಾಂ ಪುತ್ರಿ
- ಚಾಮರಾಜನಗರ – ಹೆಚ್.ಸಿ ಮಹದೇವಪ್ಪ, ಸಮಾಜಕಲ್ಯಾಣ ಸಚಿವ
- ಕೊಪ್ಪಳ – ರಾಜಶೇಖರ್ ಹಿಟ್ನಾಳ್
- ಮಂಡ್ಯ – ವೆಂಕಟರಮಣಗೌಡ(ಸ್ಟಾರ್ ಮಂಜು)
- ಕೋಲಾರ – ಕೆ.ಹೆಚ್ ಮುನಿಯಪ್ಪ, ಚಿಕ್ಕಪೆದ್ದಣ್ಣ, ನರಸಿಂಹರಾಜು
- ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ, ವೀರಪ್ಪ ಮೊಯ್ಲಿ
- ಮೈಸೂರು-ಕೊಡಗು – ಎಂ ಲಕ್ಷ್ಮಣ್, ಶಶ್ರುತ್ ಗೌಡ
- ಬೆಳಗಾವಿ – ಡಾ.ಗಿರೀಶ್, ಮೃಣಾಲ್ ಠಾಕೋರ್.
- ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್, ಭೀಮಣ್ಣ ನಾಯಕ್
- ತುಮಕೂರು – ಮುದ್ದ ಹನುಮೇಗೌಡ
BIG NEWS: ರಾಜ್ಯ ಸರ್ಕಾರದಿಂದ ‘VA ನೇಮಕಾತಿ’ಯಲ್ಲಿ ಮಹತ್ವದ ಬದಲಾವಣೆ: ‘ಸ್ಪರ್ಧಾತ್ಮಕ ಪರೀಕ್ಷೆ’ ನಿಗದಿ
BIG NEWS: ‘ಸರ್ಕಾರಿ ಕಾರ್ಯಕ್ರಮ’ಗಳ ಆರಂಭದಲ್ಲೇ ‘ನಾಡಗೀತೆ’ ಹಾಡುವುದು ಕಡ್ಡಾಯ – ‘ರಾಜ್ಯ ಸರ್ಕಾರ’ ಆದೇಶ