ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಸುರಪುರ ವಿಧಾನಸಭಾ ಉಪ ಚುನಾವಣೆಗೆ ಇಂದು ಟಿಕೆಟ್ ಘೋಷಣೆ ಮಾಡಲಾಗಿದೆ. ದಿವಂಗತ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗದಿಂದ ಕರ್ನಾಟಕದ ಯಾದಗಿರಿ ಜಿಲ್ಲಿಯೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯಲ್ಲಿ ಮೇ.7ರಂದು ನಡೆಸಲಾಗುತ್ತದೆ. ಮೇ.7ರಂದು ನಡೆದಂತ ಮತದಾನದ ಮತಏಣಿಕೆ ಕಾರ್ಯವು ಜೂನ್.4ರಂದು ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಘೋಷಣೆ ಮಾಡಲಾಗಿತ್ತು.
ಈ ಬೆನ್ನಲ್ಲೇ ಎಐಸಿಸಿಯಿಂದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜಾ ವೇಣುಗೋಪಾಲ ನಾಯಕ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಅಂದಹಾಗೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮೇ 7ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು ಅದೇ ದಿನ ಸುರಪುರದಲ್ಲೂ ಉಪಚುನಾವಣೆ ನಡೆಯಲಿದೆ. ಹೀಗಾಗಿ ಸುರಪುರ ವಿಧಾನಸಭಾ ಕ್ಷೇತ್ರದ ಜನರು ಲೋಕಸಭೆ ಮತ್ತು ವಿಧಾನಸಭೆಗೆ ಎರಡಕ್ಕೂ ಮತವನ್ನು ಚಲಾಯಿಸಲಿದ್ದಾರೆ.
ಅಂದಹಾಗೇ ಇಂದು ಕಾಂಗ್ರೆಸ್ ಪಕ್ಷದಿಂದ 2ನೇ ಪಟ್ಟಿಯನ್ನು ಲೋಕಸಭಾ ಚುನಾವಣೆಗೆ ಪ್ರಕಟಿಸಲಾಗಿದೆ. 57 ಲೋಕಸಭಾ ಕ್ಷೇತ್ರಗಳಿಗೆ ಇಂದು ಕಾಂಗ್ರೆಸ್ ಪಕ್ಷದಿಂದ ಹುರಿಯಾಳುಗಳನ್ನು ಘೋಷಣೆ ಮಾಡಲಾಗಿದೆ.
ಹೀಗೆದೆ ಕರ್ನಾಟಕ 17 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
- ಬೆಳಗಾವಿ- ಮೃಣಾಳ್ ರವೀಂದ್ರ ಹೆಬ್ಬಾಳ್ಕರ್
- ಚಿಕ್ಕೋಡಿ-ಪ್ರಿಯಾಂಕಾ ಜಾರಕಿಹೊಳಿ
- ಬಾಗಲಕೋಟೆ – ಸಂಯುಕ್ತಾ ಎಸ್ ಪಾಟೀಲ್
- ಗುಲಬರ್ಗಾ-ರಾಧಾಕೃಷ್ಣ
- ರಾಯಚೂರು- ಜಿ ಕುಮಾರ್ ನಾಯಕ್
- ಬೀದರ್-ಸಾಗರ್ ಖಂಡ್ರೆ
- ಕೊಪ್ಪಳ ಕೆ ರಾಜಶೇಖರ್ ಬಸವರಾಜ ಹಿತ್ನಾಳ್
- ಧಾರವಾಡ- ವಿನೋದ್ ಆಸೂಟಿ
- ಉತ್ತರ ಕನ್ನಡ – ಡಾ ಅಂಜಲಿ ನಿಂಬಾಳ್ಕರ್
- ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್
- ಉಡುಪಿ ಚಿಕ್ಕಮಗಳೂರು – ಡಾ. ಜಯಪ್ರಕಾಶ್ ಹೆಗ್ಡೆ
- ದಕ್ಷಿಣ ಕನ್ನಡ – ಬದ್ಮರಾಜ್
- ಚಿತ್ರದುರ್ಗ – ಬಿಎನ್ ಚಂದ್ರಪ್ಪ
- ಮೈಸೂರು – ಎಂ ಲಕ್ಷ್ಮಣ್
- ಬೆಂಗಳೂರು ನಾರ್ಥ್ – ಎಂ ವಿ ರಾಜೀವ್ ಗೌಡ
- ಬೆಂಗಳೂರು ಕೇಂದ್ರ – ಮನ್ಸೂದ್ ಆಲಿಖಾನ್
- ಬೆಂಗಳೂರು ದಕ್ಷಿಣ-ಸೌಮ್ಯಾರೆಡ್ಡಿ
BREAKING: ‘ಕಾಂಗ್ರೆಸ್’ನಿಂದ ಕರ್ನಾಟಕದ 17 ಲೋಕಸಭಾ, ಸುರಪುರ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ