Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಪಾಕ್ ನಡುವೆ ಕದನ ವಿರಾಮ: 2025ರ ಐಪಿಎಲ್ ಪುನರಾರಂಭಕ್ಕೆ ಬಿಸಿಸಿಐ ಚಿಂತನೆ | IPL 2025 Match

10/05/2025 7:48 PM

BREAKING : ಕೊನೆಗೂ ಪುಲ್ವಾಮಾ ಭಯೋತ್ಪಾದಕ ದಾಳಿ ತನ್ನದೇ ಎಂದು ಒಪ್ಪಿಕೊಂಡ ಪಾಕಿಸ್ತಾನ್ | Watch Video

10/05/2025 7:46 PM

BREAKING: ಸಿಂಧೂ ನದಿ ನೀರು ಒಪ್ಪಂದ ರದ್ದು, ವೀಸಾ ಅಮಾನತು ಮುಂದುವರಿಕೆ: ಕೇಂದ್ರ ಸರ್ಕಾರದ ಮೂಲಗಳು | India-Pakistan ceasefire

10/05/2025 7:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ ಪಕ್ಷದಿಂದ 3ನೇ ಗ್ಯಾರಂಟಿ’ ಘೋಷಣೆ: ಯುವ ಜನತೆಗೆ ನೌಕರಿಗಾಗಿ ‘ಯುವ ನ್ಯಾಯ’ ಯೋಜನೆ ಜಾರಿ
INDIA

ಕಾಂಗ್ರೆಸ್ ಪಕ್ಷದಿಂದ 3ನೇ ಗ್ಯಾರಂಟಿ’ ಘೋಷಣೆ: ಯುವ ಜನತೆಗೆ ನೌಕರಿಗಾಗಿ ‘ಯುವ ನ್ಯಾಯ’ ಯೋಜನೆ ಜಾರಿ

By kannadanewsnow0907/03/2024 6:50 PM

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದೇ ಮಾದರಿಯಲ್ಲೇ ದೇಶದಲ್ಲೂ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಸ್ಕೀಂ ಜಾರಿಗೊಳಿಸೋದಾಗಿ ಘೋಷಣೆ ಮಾಡಿದೆ. ಇಂದು ತನ್ನ 3ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು, ದೇಶದ ಯುವಜನತೆಗೆ ನೌಕರಿ ಖಾತ್ರಿ ನೀಡುವಂತ ಯುವ ನ್ಯಾಯ ಯೋಜನೆಯನ್ನು ಜಾರಿಗೊಳಿಸೋದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ದೇಶದಲ್ಲಿ 2024 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ, ದೇಶದ ಯುವಕರಿಗೆ ಉದ್ಯೋಗ ಖಾತರಿಯನ್ನು ಒದಗಿಸುವ ಮೂಲಕ ಹೊಸ ರೋಜ್ಗಾರ್ ಕ್ರಾಂತಿ ಪ್ರಾರಂಭವಾಗಲಿದೆ. ಇಂದು ಕಾಂಗ್ರೆಸ್ ಪಕ್ಷವು ಈ ದೇಶದ ಕೋಟ್ಯಂತರ ಯುವಕರಿಗಾಗಿ ದೊಡ್ಡ ಘೋಷಣೆ ಮಾಡುತ್ತಿದೆ ಎಂದಿದ್ದಾರೆ.

ಯುವ ನ್ಯಾಯ ಗ್ಯಾರಂಟಿ ಸ್ಕೀಂ 5 ಪ್ರಮುಖ ಅಂಶಗಳು

ಭಾರತಿ ಭರೋಸಾ

ನಾವು ದೇಶದ ಎಲ್ಲಾ ಯುವಕರಿಗೆ ಭಾರತಿ ಭರೋಸಾವನ್ನು ಖಾತರಿಪಡಿಸುತ್ತೇವೆ. ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪರೀಕ್ಷೆಯಿಂದ ನೇಮಕಾತಿಯವರೆಗೆ ಕಾಲಮಿತಿಯನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.

ಪೆಹಲಿ ನೌಕ್ರಿ ಪಕ್ಕಿ

ಪದವಿ ಪಡೆದ ನಂತರವೂ, ಸರಿಯಾದ ಅಪ್ರೆಂಟಿಸ್ಶಿಪ್ ತರಬೇತಿ ಇಲ್ಲದ ಕಾರಣ ಪ್ರತಿಯೊಬ್ಬರಲ್ಲಿ ಇಬ್ಬರು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಹೊಸ ಅಪ್ರೆಂಟಿಸ್ಶಿಪ್ ಹಕ್ಕು ಕಾನೂನನ್ನು ತರುವ ಮೂಲಕ ನಾವು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಅಥವಾ ಪದವಿ ಹೊಂದಿರುವವರಿಗೆ ಅಪ್ರೆಂಟಿಸ್ಶಿಪ್ ತರಬೇತಿಯನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಭರವಸೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಕ್ತಿ

ನೇಮಕಾತಿ ಪ್ರಕ್ರಿಯೆಯು ಸಮರ್ಪಕವಾಗಿ ದೇಶದಲ್ಲಿ ನಡೆಯುತ್ತಿಲ್ಲ. ನೇಮಕಾತಿ ಪ್ರಕ್ರಿಯೆ ನಡೆದರೂ ಪ್ರಶ್ನೆಪತ್ರಿಕೆ ಸೋರಿಕೆಯಂತ ಪಿಡುಗು ಇದ್ದೇ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಇದಕ್ಕೆ ಇತಿಶ್ರೀ ಹಾಡಲಾಗುವುದು. ನೇಮಕಾತಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಭಾರತ್ ಜೋಡೊ ಯಾತ್ರೆ ಮತ್ತು ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಹಲವಾರು ಗಿಗ್ ಕಾರ್ಮಿಕರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಟ್ರಕ್ ಚಾಲಕರು, ಮೆಕ್ಯಾನಿಕ್‌ಗಳು, ಮರದ ಕೆಲಸ ಮಾಡುವವರು, ಆಹಾರಗಳನ್ನು ಮನೆಬಾಗಿಲಿಗೆ ತಲುಪಿಸುವರು, ಟ್ಯಾಕ್ಸಿ ಚಾಲಕರು ಸೇರಿದಂತೆ ಸಮಾಜದಲ್ಲಿ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆ ಜಾರಿಗೆ ತರಲಾಗುವುದು.

ಯುವ ರೋಷಿನಿ

40 ವರ್ಷದೊಳಗಿನ ಯುವಕರು ತಮ್ಮದೇ ಸ್ಟಾರ್ಟ್ಅಪ್‌ ಆರಂಭಿಸಲು ನೆರವಾಗುವ ಉದ್ದೇಶದಿಂದ ₹5 ಸಾವಿರ ಕೋಟಿ ನಿಧಿಯನ್ನು ಸ್ಥಾಪಿಸಿ, ಅದರಿಂದ ಉದ್ಯಮಕ್ಕೆ ನೆರವು ಮತ್ತು ಉದ್ಯೋಗ ಸೃಜನೆಗೆ ನೆರವಾಗುವ ಯೋಜನೆ ಜಾರಿಗೆ ತರಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಮಾಡಿ ವಿವರಿಸಿದ್ದಾರೆ.

YUVA NYAY

As soon as the Congress Govt is formed in 2024, a new ROZGAR REVOLUTION will begin by providing EMPLOYMENT GUARANTEE to the Youth of the country.

Today, the Congress Party is making a big announcement for the crores of Youth of this country, which has 5 main points -… pic.twitter.com/04HmKkigvC

— Mallikarjun Kharge (@kharge) March 7, 2024

‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ

Share. Facebook Twitter LinkedIn WhatsApp Email

Related Posts

BREAKING : ಕೊನೆಗೂ ಪುಲ್ವಾಮಾ ಭಯೋತ್ಪಾದಕ ದಾಳಿ ತನ್ನದೇ ಎಂದು ಒಪ್ಪಿಕೊಂಡ ಪಾಕಿಸ್ತಾನ್ | Watch Video

10/05/2025 7:46 PM1 Min Read

BREAKING: ಸಿಂಧೂ ನದಿ ನೀರು ಒಪ್ಪಂದ ರದ್ದು, ವೀಸಾ ಅಮಾನತು ಮುಂದುವರಿಕೆ: ಕೇಂದ್ರ ಸರ್ಕಾರದ ಮೂಲಗಳು | India-Pakistan ceasefire

10/05/2025 7:44 PM2 Mins Read

BIG NEWS: ಐಎಂಎಫ್ ಸಾಲಕ್ಕಾಗಿ ತಕ್ಷಣದ ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಅಮೆರಿಕ ಪಾಕ್ ಮೇಲೆ ಒತ್ತಡ

10/05/2025 7:35 PM1 Min Read
Recent News

ಭಾರತ-ಪಾಕ್ ನಡುವೆ ಕದನ ವಿರಾಮ: 2025ರ ಐಪಿಎಲ್ ಪುನರಾರಂಭಕ್ಕೆ ಬಿಸಿಸಿಐ ಚಿಂತನೆ | IPL 2025 Match

10/05/2025 7:48 PM

BREAKING : ಕೊನೆಗೂ ಪುಲ್ವಾಮಾ ಭಯೋತ್ಪಾದಕ ದಾಳಿ ತನ್ನದೇ ಎಂದು ಒಪ್ಪಿಕೊಂಡ ಪಾಕಿಸ್ತಾನ್ | Watch Video

10/05/2025 7:46 PM

BREAKING: ಸಿಂಧೂ ನದಿ ನೀರು ಒಪ್ಪಂದ ರದ್ದು, ವೀಸಾ ಅಮಾನತು ಮುಂದುವರಿಕೆ: ಕೇಂದ್ರ ಸರ್ಕಾರದ ಮೂಲಗಳು | India-Pakistan ceasefire

10/05/2025 7:44 PM

BIG NEWS: ಐಎಂಎಫ್ ಸಾಲಕ್ಕಾಗಿ ತಕ್ಷಣದ ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಅಮೆರಿಕ ಪಾಕ್ ಮೇಲೆ ಒತ್ತಡ

10/05/2025 7:35 PM
State News
KARNATAKA

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

By kannadanewsnow0910/05/2025 5:44 PM KARNATAKA 2 Mins Read

ನವದೆಹಲಿ: ಅಗ್ನಿಶಾಮಕ ದಳದ ಕೇಂದ್ರಗಳು ದಿನದ 24ಗಂಟೆ ಸನ್ನದ್ಧ ಸ್ಥಿತಿಯಲ್ಲಿರಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು, ಸಹಾಯವಾಣಿ ಆರಂಭಿಸುವಂತೆ…

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM

BIG NEWS : ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ : ಗ್ರಾಮ ಪಂಚಾಯತ್ ಉಪಾಧ್ಯಕ್ಷನ ವಿರುದ್ಧ ‘FIR’ ದಾಖಲು

10/05/2025 4:53 PM

ಟಿಕೆಟ್ ಇಲ್ಲದೇ ಪ್ರಯಾಣಿಸಿದ ಪ್ರಯಾಣಿಕರಿಗೆ KSRTC ಶಾಕ್: 3,780 ಮಂದಿಯಿಂದ 7.32 ಲಕ್ಷ ದಂಡ ವಸೂಲಿ

10/05/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.