ಬೆಂಗಳೂರು: ಜೈಲಿನಲ್ಲಿ ಗುಬ್ಬಚ್ಚಿ ಸೀನಾ ಬರ್ತ್ ಡೇಯನ್ನು ಆಚರಣೆ ಮಾಡಿಕೊಂಡಿದ್ದಾರೆ. ಒಬ್ಬರಿಗೆ ಒಂದು ಕಾನೂನು, ಮತ್ತೊಬ್ಬರಿಗೆ ಮತ್ತೊಂದು ಕಾನೂನು ಮಾಡಲಾಗುತ್ತಿದೆ. ಕ್ವಾರಂಟೈನ್ ಸೆಲ್ಲಿನಿಂದ ಮೇನ್ ಸೆಲ್ ಗೆ ಶಿಫ್ಟ್ ಮಾಡಿ. ನಾವು ಟ್ರಯಲ್ ಗೆ ಸಿದ್ಧರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು, ಜೀವಾವಧಿ ಶಿಕ್ಷೆ ಬೇಕಾದ್ರೂ ವಿಧಿಸಿ ಎಂಬುದಾಗಿ ನಟ ದರ್ಶನ್ ಪರ ವಕೀಲರು ಕೋರ್ಟಿನಲ್ಲಿ ವಾದಿಸಿದ್ದಾರೆ.
ಇಂದು ಹಾಸಿಗೆ ದಿಂಬು ನೀಡದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆಯಲ್ಲಿ ನಟ ದರ್ಶನ್ ಪರವಾದಂತ ವಕೀಲರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನು ಜೈಲು ಅಧಿಕಾರಿಗಳು ಮಿಸ್ ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲಿಯೂ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿ ಅಂತ ಹೇಳಿಲ್ಲ ಎಂದು ವಾದಿಸಿದರು.
ಜೈಲಿನಲ್ಲೇ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇದು ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಮಗಗೊಂದು ಕಾನೂನು ಎಂಬಂತೆ ತೋರಿಸುತ್ತಿದೆ. ನಟ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್ಲಿನಿಂದ ಮೇನ್ ಸೆಲ್ ಗೆ ಶಿಫ್ಟ್ ಮಾಡುವಂತೆ ವಕೀಲರು ಮನವಿ ಮಾಡಿದರು.
ಇದಷ್ಟೇ ಅಲ್ಲದೇ ನಾವು ಟ್ರಯಲ್ ಗೆ ಸಿದ್ದರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು, ಜೀವಾವಧಿ ಶಿಕ್ಷೆ ಬೇಕಿದ್ರೂ ವಿಧಿಸಿ ಎಂಬುದಾಗಿ ವಾದಿಸಿದರು.
ನಟ ದರ್ಶನ್ ಪರ ವಕೀಲರ ವಾದದ ಬಳಿಕ ಎಸ್ ಪಿಪಿ ಸಚಿನ್ ಪ್ರತಿವಾದ ಮಂಡಿಸಿ, ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದಾರೆ. ಜೈಲಿನ ಆಧಿಕಾರಿಗಳು, ಆರೋಪಿಗಳ ಬಳಿ ಎರಡು ಕಡೆ ಮಾಹಿತಿ ಪಡೆದು ವರದಿಯನ್ನು ಸಲ್ಲಿಸಿದ್ದಾರೆ. ನಟ ದರ್ಶನ್ ಗೆ ಪಂಗಸ್ ಇನ್ಫೆಕ್ಷನ್ ಆಗಿಲ್ಲ. ಆದರೇ ಕಾಲು ಒಡೆದಿದೆ ಅಷ್ಟೇ. ಅದನ್ನೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ದರ್ಶನ್ ಒಬ್ಬ ನಟರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸರ್ವೆ ಸಾಮಾನ್ಯವಾಗಿ ಹೈಪ್ರೊಫೈಲ್ ಕೇಸ್, ಫ್ಯಾನ್ಸ್ ಫಾಲೋ ಇದೆ. ಅದೇನೇ ಆದರೂ ಜೈಲು ನಿಯಮಾವಳಿಯಂತೆ ನಡಿಬೇಕಿದೆ ಎಂಬುದಾಗಿ ಪ್ರತಿವಾದ ಮಂಡಿಸಿದರು.
ಈ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯವು ನಟ ದರ್ಶನ್ ಹಾಸಿಗೆ ದಿಂಬು ಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್.29ಕ್ಕೆ ಮುಂದೂಡಿತು.
ಕೋಲಾರದಲ್ಲಿ ನಾಪತ್ತೆಯಾಗಿದ್ದಂತ ‘ಇಬ್ಬರು ವಿದ್ಯಾರ್ಥಿನಿ’ಯರು ಬೆಂಗಳೂರಲ್ಲಿ ಪತ್ತೆ
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ








