ನವದೆಹಲಿ: ಹೊಸ ವರ್ಷದ ಮುನ್ನಾದಿನದಂದು ಸ್ವಿಗ್ಗಿ ಬಿರಿಯಾನಿ ದಾಖಲೆ ಮಟ್ಟದಲ್ಲಿ ಮಾರಾಟ ಮಾಡಿದೆ. ಹೌದು, 4.8 ಲಕ್ಷಕ್ಕೂ ಹೆಚ್ಚು ಆರ್ಡರ್ ಗಳೊಂದಿಗೆ, ನಿಮಿಷಕ್ಕೆ 1,244 ಬಿರಿಯಾನಿಗಳು ಗರಿಷ್ಠ ಮಟ್ಟವನ್ನು ತಲುಪಿವೆ ಎನ್ನಲಾಗಿದೆ. ಇನ್ನೂ ಮತ್ತೊಂದೆಡೆ, ಸ್ವಿಗ್ಗಿ ಇನ್ಸ್ಟಾಮಾರ್ಟ್ ಗಂಟೆಗೆ 1722 ಕಾಂಡೋಮ್ಗಳ ಗರಿಷ್ಠ ಮಾರಾಟವನ್ನು ಮಾಡಿದೆ ಅಂತ ತಿಳಿಸಿದೆ.
ಈ ಮೂಲಕ ಬಿರಿಯಾನಿಯನ್ನು ಮೀರಿಸಲು ಯಾವುದೂ ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಹೈದರಾಬಾದ್ನಲ್ಲಿ ಹೊಸ ವರ್ಷದ ಮುನ್ನಾದಿನದಂದು 4.8 ಲಕ್ಷಕ್ಕೂ ಹೆಚ್ಚು ಬಿರಿಯಾನಿ ಆರ್ಡರ್ಗಳನ್ನು ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದೆ.
ಆಹಾರ ವಿತರಣಾ ಪ್ಲಾಟ್ಫಾರ್ಮ್ನ ಸಹೋದರ ಸಂಸ್ಥೆಯಾದ ಸ್ವಿಗ್ಗಿ ಇನ್ಸ್ಟಾಮಾರ್ಟ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಕಾಂಡೋಮ್ಗಳ ಆರ್ಡರ್ಗಳು ಗಂಟೆಗೆ 1722 ಕಾಂಡೋಮ್ಗಳಿಗೆ ಏರಿದೆ ಎಂದು ಹೇಳಿದೆ.