Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

BREAKING: ಅನಿಲ್ ಅಂಬಾನಿ ಕಂಪನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ವಿಳಂಬ: ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ

04/02/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಸ್ಟೀಸ್ ಮೈಕಲ್ ಕುನ್ಹಾ ಅವರ ವೈಯಕ್ತಿಕ ನಿಂದನೆಗೆ ಖಂಡನೆ: ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು
KARNATAKA

ಜಸ್ಟೀಸ್ ಮೈಕಲ್ ಕುನ್ಹಾ ಅವರ ವೈಯಕ್ತಿಕ ನಿಂದನೆಗೆ ಖಂಡನೆ: ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು

By kannadanewsnow0911/11/2024 5:43 PM

ಬೆಂಗಳೂರು: ಕೋವಿಡ್ ಭ್ರಷ್ಟಾಚಾರಗಳ ಕುರಿತು ಮೈಕಲ್ ಕುನ್ಹಾ ಅವರ ಆಯೋಗದ ವರದಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ಜಸ್ಟೀಸ್ ಕುನ್ಹಾ ಅವರನ್ನ ಕಾಂಗ್ರೆಸ್ ಏಜೇಂಟ್ ಎಂದು ಕರೆದ ಪ್ರಲ್ಹಾದ್ ಜೋಶಿ ಹೇಳಿಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯ ವಕ್ತಾರ ದಿನೇಶ್ ಗುಂಡೂರಾವ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ದೂರು ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಮೂರ್ತಿಯಾಗಿ ಜಸ್ಟೀಸ್ ಕುನ್ಹಾ ಅವರು ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದವರು. ಗೌರವಾನ್ವಿತರ ಬಗ್ಗೆ ಕೇಂದ್ರ ಸಚಿವರಾಗಿ ಪ್ರಲ್ಹಾದ್ ಜೋಶಿ ವಯಕ್ತಿಕ ನಿಂದನೆ ಮಾಡಿ ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪ್ರಲ್ಹಾದ್ ಜೋಶಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಪ್ರಲ್ಹಾದ್ ಜೋಶಿ ಕ್ಷಮೆ ಕೇಳಬೇಕು ಎಂದು ಆಗ್ರಹಿದರು.

ಕೇಂದ್ರ ಸಚಿವರು ಎಂದಾಕ್ಷಣ ಏನು ಬೇಕಾದರು ಮಾತನಾಡಬಹುದು ಎಂಬ ಅಹಂಕಾರ ಪ್ರವೃತ್ತಿಯಲ್ಲಿ ಪ್ರಲ್ಹಾದ್ ಜೋಶಿಯವರಿದ್ದಾರೆ. ಇತ್ತಿಚೆಗೆ ಜೋಶಿ ಅವರು ಹೇಳಿಕೆಗಳು ಅಹಂಕಾರದಿಂದ ಕೂಡಿವೆ. ಜಸ್ಟೀಸ್ ಆಗಿದ್ದವರನ್ನ ಕಾಂಗ್ರೆಸ್ ಏಜೆಂಟ್ ಎಂದರೆ ಏನರ್ಥ.. ಜೋಶಿಯವರು ರಾಜಕಾರಣಿಗಳಾದ ನಮ್ಮ ಮೇಲೆ ಮಾತನಾಡಲಿ. ಅಥವಾ ಕಾನೂನು ಹೋರಾಟ ನಡೆಸಲಿ. ಆದರೆ ಗೌರವಾನ್ವಿತ ನ್ಯಾಯಮೂರ್ತಿಗಳ ವೈಯಕ್ತಿಕ ನಿಂಧನೆ ಸರಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕುನ್ಹಾ ಅವರ ಆಯೋಗ ಅಂತಿಮ ವರದಿ ಸಲ್ಲಿಸುವ ಮುನ್ನ ಅವರ ಮೇಲೆ ಒತ್ತಡ ತರುವ ಪ್ರಯತ್ನವನ್ನ ಪ್ರಲ್ಜಾದ್ ಜೋಶಿ ನಡೆಸಿಸುತ್ತಿದ್ದಾರೆ. ಕುನ್ಹಾ ಅವರನ್ನ ಕಾಂಗ್ರೆಸ್ ಏಜೆಂಟ್ ಎಂದಿರುವುದು ಒತ್ತಡ ತಂತ್ರದ ಒಂದು ಭಾಗ. ವರದಿಯನ್ನ ವಿಮರ್ಷಿಸಲಿ. ಆದರೆ ಕುನ್ಹಾ ಅವರ ವೈಯಕ್ತಿಕ ನಿಂದನೆ ಸರಿಯಲ್ಲ. ಪ್ರಲ್ಜಾದ್ ಜೋಶಿ ಒಬ್ಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದವರು, ನಮ್ಮ ತನಿಖಾ ಆಯೋಗಗಳು, ವ್ಯವಸ್ಥೆಗಳ ವಿರುದ್ಧ ಮಾತನಾಡುತ್ತಿರುವುದು ದುರಂತ. ಈ ರೀತಿ ನಿಂದನೆಗಳನ್ನ ಮಾಡಿದರೆ ಮುಂದೆ ಯಾರು ಕೂಡ ತನಿಖೆ ನಡೆಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಮಿಷನ್ inquiry act 1952 ಪ್ರಕಾರ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಕಾನೂನು ಬಾಹಿರವಾಗಿದೆ. 6 ತಿಂಗಳ ವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಈ ವಿಚಾರವನ್ನ ರಾಷ್ಟ್ರಪತಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ರಾಜ್ಯಪಾಲರು ನಮ್ಮ ಅಹಾವಾಲುಗಳನ್ನ ತಾಳ್ಮೆಯಿಂದ ಆಲೀಸಿದ್ದು, ಈ ರೀತಿಯ ವೈಯಕ್ತಿಕ ಹೇಳಿಕೆಗಳನ್ನ ನೀಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಪ್ರಲ್ಹಾದ್ ಜೋಶಿ ತಮ್ಮ ಹೇಳಿಕೆಯನ್ನ ವಾಪಸ್ ಪಡೆದು ಕ್ಷಮೆ ಕೋರುವುದು ಒಳಿತು ಎಂದು ಇದೇ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ ಇದೇ ವೇಳೆ ಆಗ್ರಹಿಸಿದರು.

ಬೆಂಗಳೂರು ಜನತೆ ಗಮನಕ್ಕೆ: ನ.13ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM4 Mins Read

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM2 Mins Read

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM1 Min Read
Recent News

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

BREAKING: ಅನಿಲ್ ಅಂಬಾನಿ ಕಂಪನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ವಿಳಂಬ: ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ

04/02/2026 12:48 PM

ಪೋಷಕರೇ ಎಚ್ಚರ : ಆಟವಾಡುವಾಗ `ಹಲ್ಕ್ ಆಟಿಕೆ’ ನುಂಗಿದ ಬಾಲಕ : `ಎಕ್ಸ್ ರೇ’ ನೋಡಿದ ವೈದ್ಯರೇ ಶಾಕ್.!

04/02/2026 12:30 PM
State News
KARNATAKA

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

By kannadanewsnow5704/02/2026 12:54 PM KARNATAKA 4 Mins Read

ಬೆಂಗಳೂರು : ಜನಸಮುದಾಯಕ್ಕೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು…

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM

SHOCKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ ಕೃತ್ಯ’ : ಒಂಟಿ ವೃದ್ಧೆಯನ್ನು ಕೊಲೆಗೈದು 73 ಗ್ರಾಂ ಚಿನ್ನಾಭರಣ ದರೋಡೆ.!

04/02/2026 11:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.