ಬೆಂಗಳೂರು: ಸಾಮಾಜಿಕ ಜಾಲತಾಣವಾದಂತ ವಾಟ್ಸ್ ಆಪ್ ಗ್ರೂಪಿನಲ್ಲಿ ಜಾತಿ ಗಣತಿ ವರದಿಯೆಂದು ಕೆಲವೊಂದು ಅಂಕಿ ಸಂಖ್ಯೆಗಳನ್ನು ಪ್ರಕಟಿಸಿ, ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ದೂರು ನೀಡಲಾಗಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆಎ ದಯಾನಂದ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದಂತ ದೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ:22.09.2025ರಿಂದ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಪ್ರಾರಂಭಿಸಿ ದಿನಾಂಕ:31.10.2025ರವರೆಗೆ ಸಾರ್ವಜನಿಕರಿಗೆ ಆನೈನ್ ಮೂಲಕ ಪಾಲ್ಗೊಳ್ಳಲು ದಿನಾಂಕ:30.11.2025ರವರೆಗೆ ಅವಕಾಶ ನೀಡಲಾಗಿದೆ. ಅದರಂತೆ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿರುತ್ತದೆ. ಈ ಸಂಬಂಧ ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ: 28665/2025, 28668/2025, 28670/2025 ಮತ್ತು 28675/2025 ಗಳಲ್ಲಿ ಆಯೋಗವು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಯಾವುದೇ ವ್ಯಕ್ತಿಗೆ ಮಾಹಿತಿಯನ್ನು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಲಾಗುವುದೆಂದು ದಿನಾಂಕ:26.09.2025 ರಂದು ಅಫಿಡವಿಟ್ ಸಲ್ಲಿಸಲಾಗಿದೆ ಎಂದಿದ್ದಾರೆ.
ಅದರಂತೆ ಆಯೋಗದ ವತಿಯಿಂದ ಗೌಪ್ಯತೆಯನ್ನು ಕಾಪಾಡಲಾಗಿದೆ. ಆದ್ಯಾಗ್ಯೂ, Engineers& Doctors ಎಂಬ ವಾಟ್ಸ್ ಆಪ್ ಗ್ರೂಪಿನಲ್ಲಿ shiva ಎನ್ನುವ ವ್ಯಕ್ತಿಯು ಅವರ ಮೊಬೈಲ್ ನಂಬರ್ 8618891657 ಯಿಂದ 2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ಲಿಂಗಾಯಿತರು-65 ಲಕ್ಷ, ಒಕ್ಕಲಿಗರು-60 ಲಕ್ಷ, ಕುರುಬರು-45 ಲಕ್ಷ ಈಡಿಗರು-15 ಲಕ್ಷ, ಪರಿಶಿಷ್ಟ ಪಂಗಡ-40.45 ಲಕ್ಷ, ವಿಶ್ವಕರ್ಮ-15 ಲಕ್ಷ, ಬೆಸ್ತರು 15 ಲಕ್ಷ, ಬ್ರಾಹ್ಮಣರು-14 ಲಕ್ಷ, ಗೊಲ್ಲರು-10 ಲಕ್ಷ ಮುಸ್ಲಿಮರು-60 ಲಕ್ಷ ಕ್ರೈಸ್ತರು-12 ಲಕ್ಷ, ಸವಿತಾ ಸಮಾ -5 ಲಕ್ಷ, ಗೊಲ್ಲರು – 10ಲಕ್ಷ, ಕುಂಬಾರ -5 ಲಕ್ಷ ಮತ್ತು ಮಡಿವಾಳ -6 ಲಕ್ಷ ಇತರ ಎಂದು ಗ್ರೂಪ್ ಗೆ ಶೇರ್ ಮಾಡಲಾಗಿದ್ದು, ಸದರಿ ಶಿವ ಎನ್ನುವವರನ್ನು ಅವರ ಮೊಬೈಲ್ ನಂಬರ್ ಮೂಲಕ ಸಂಪರ್ಕಿಸಿದಾಗ ಸದರಿಯವರು ಚಿಕ್ಕಮಗಳೂರು ಎಂದು ಹೇಳಿದ್ದು ಅವರಿಗೆ 9972508500 ಮೊಬೈಲ್ ನಂಬರ್ ನಿಂದ ಸದರಿ ವಿಷಯವು ವಾಟ್ಸ್ ಆಪ್ ಮೂಲಕ ಬಂದಿರುತ್ತದೆ ಎಂದು ತಿಳಿಸಿರುತ್ತಾರೆ. ಎರಡೂ ಪತಿಗಳನ್ನು ಈ ಕೂಡ ಲಗತ್ತಿಸಿದೆ ಎಂದು ತಿಳಿಸಿದ್ದಾರೆ.
ಉಚ್ಚ ನ್ಯಾಯಾಲಯದ ಆದೇಶದಂತೆ ಆಯೋಗದ ವತಿಯಿಂದ ಸಂಗ್ರಹಿಸಲಾಗುತ್ತಿರುವ ಮಾಹಿತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಆಯೋಗದ ವಿಶ್ವಾಸಾರ್ಹತೆ ಹಾಗೂ ನಂಬಿಕೆಯನ್ನು ನಿರ್ವಹಿಸುವುದು ಅತಿ ಮುಖ್ಯವಾಗಿರುತ್ತದೆ. ಸಮೀಕ್ಷಾ ದತ್ತಾಂಶಗಳನ್ನು ಸಂಗ್ರಹಿಸುವ ಹಂತದಲ್ಲಿರುವಾಗ ಈ ರೀತಿ ಸಾರ್ವಜನಿಕರಲ್ಲಿ ಗೊಂದಲ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ನೀಡಿ ಉಂಟುಮಾಡುತ್ತಿರುವುದರ ಬಗ್ಗೆ ಹಾಗೂ ಸದರಿ ವಿಷಯದ ಸತ್ಯತೆಯ ಬಗ್ಗೆ ಪರಿಶೀಲಿಸುವುದು ಅವಶ್ಯವಿರುತ್ತದೆ. ಆದ ಕಾರಣ ಮೇಲೆ ಪುಸ್ತಾಪಿಸಿರುವ 2 ಮೊಬೈಲ್ ನಂಬರ್ ಗಳ ಆಧಾರದಂತೆ ಸದರಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಕೋರಿದ್ದಾರೆ.









