ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ ರೇವಣ್ಣ ಹಲ್ಲೆ ಮಾಡಿದ್ದಾರೆ ಎಂಬುದಾಗಿ ಮಹಿಳಾ ಆಯೋಗಕ್ಕೆ ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜ್ ಎಂಬುವರು ದೂರು ನೀಡಿದ್ದರು. ಈ ಬೆನ್ನಲ್ಲೇ ನಂದಿನಿ ನಾಗರಾಜ್ ಅವರ ಮತ್ತೊಂದು ಮುಖ ಬಟಾ ಬಯಲಾಗಿದೆ. ನಂದಿನಿ ನಾಗರಾಜ್ ವ್ಯಕ್ತಿಯೊಬ್ಬರಿಗೆ ಹಣಕ್ಕೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಾಗಿದೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಗೆ ಚಂದ್ರಶೇಖರ್ ಎಂಬುವರು ದೂರು ನೀಡಿದ್ದಾರೆ. ಅವರು ನೀಡಿದಂತ ದೂರಿನಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ನನಗೆ ಸುಮಾರು 2 ವರ್ಷಗಳಿಂದ ಸುನೀಲ್ ಕುಮಾರ್ ಎಂಬುವರು ಪರಿಚಯವಿರುತ್ತಾರೆ. ಅವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುತ್ತೇನೆ. ನನಗೆ ಎಲ್ಲಾ ಪಕ್ಷದ ಶಾಸಕರು ಮತ್ತು ಕೆಲವು ಮಂತ್ರಿಗಳು ಸಹ ಪರಿಚಯವಿರುತ್ತಾರೆೆ. ನಿಮಗೆ ಹಾಗೂ ನಿಮ್ಮ ಕಡೆಯವರಿಗೆ ಯಾರಿಗಾದರೂ ಏನಾದರೂ ಕೆಲಸಕಾರ್ಯಗಳು ಹಾಗೂ ವರ್ಗಾವಣೆ ಏನಾದರೂ ಆಗಬೇಕಾದರೆ ನಾನು ಸಹಾಯ ಮಾಡುತ್ತೇನೆಂದು ತಿಳಿಸಿರುತ್ತಾರೆ ಎಂದಿದ್ದಾರೆ.
ಆದಾಗಿ ನನಗೆ ಪರಿಚಯಸ್ಥರಾದ ಶಿವಸ್ವಾಮಿಯವರಿಗೆ ಗೋಪಾಲ್ ಜಾಧವ್ ಎಂಬ ಅಧಿಕಾರಿಗಳು ಪರಿಚಯವಿರುತ್ತದೆ. ಗೋಪಾಲ್ ಜಾದವ್ ರವರು ಸರ್ಕಾರಿ ಅಧಿಕಾರಿಯಾಗಿದ್ದು, ಅವರಿಗೆ ಸುಮಾರು 15 ತಿಂಗಳಿನಿಂದ ಸ್ಥಳ ನಿರೀಕ್ಷಣೆಯಲ್ಲಿರುತ್ತಾರೆ ಎಂಬುವ ವಿಷಯದ ಬಗ್ಗೆ ನಾನು ಹಾಗೂ ಶಿವಸ್ವಾಮಿಯವರು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಸುನಿಲ್ ಕುಮಾರ್ ರವರು ನಮ್ಮ ಬಳಿ ಯಾರು ಗೋಪಾಲಜಾದವ್ ಎಂದು ಕೇಳಿದರು. ಅವರು ನಮಗೆ ಪರಿಚಯಸ್ಥರು ಅವರಿಗೆ ಸುಮಾರು 15 ತಿಂಗಳಿನಿAದ ಸ್ಥಳ ನಿರೀಕ್ಷಣೆಯಲ್ಲಿರುತ್ತಾರೆ ಅವರಿಗೆ ಸೂಕ್ತ ಸ್ಥಳಾವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದೆವು.
ಆ ಸಂದರ್ಭದಲ್ಲಿ ಸುನಿಲ್ ಕುಮಾರ್ ರವರು ಆ ಅಧಿಕಾರಿಯ ಮಾಹಿತಿ ಕೊಡಿ ಎಂದು ಕೇಳಿದರು. ನಾವು ಅದಕ್ಕೆ ಅವರ ಬಳಿ ಚರ್ಚಿಸಿ, ಮಾಹಿತಿ ನೀಡುತ್ತೇವೆ ತಿಳಿಸಿ, ನಂತರ ಅವರಿಗೆ ಗೋಪಾಲ್ ಜಾದವ್ ರವರ ಮಾಹಿತಿ ನೀಡಿದೆವು.
ಆದ್ದರಿಂದ ನಾವುಗಳು ಸದರಿ ಗೋಪಾಲ್ ಜಾದವ್‌ರವರ ಕೆಲಸದ ವಿವರವನ್ನು ತಿಳಿಸಿರುತ್ತೇವೆ. ಆದಾದ ಕೆಲವು ದಿನಗಳ ನಂತರ ಸದರಿ ಸುನೀಲ್ ಕುಮಾರ್ ರವರು ಅವರಿಗೆ ಪರಿಚಯವಿರುವ ನಂದಿನಿ ನಾಗರಾಜ್ ಎಂಬ ಮಹಿಳೆಗೆ ಸದರಿ ಅಧಿಕಾರಿಯವರ ಮಾಹಿತಿ ತಿಳಿಸಿರುತ್ತಾರೆ. ನಂತರ ಸದರಿ ನಂದಿನಿ ನಾಗರಾಜ್ ರವರು ನೇರವಾಗಿ ಅಧಿಕಾರಿಯವರಾದ ಗೋಪಾಲ್ ಜಾದವ್ ರವರ ವಿವರ ಹಾಗೂ ಮೊಬೈಲ್ ಸಂಖ್ಯೆಯನ್ನು ತಾವೇ ಸ್ವತಃ ಗೂಗಲ್‌ನಲ್ಲಿ ಸಂಗ್ರಹಿಸಿ ಗೋಪಾಲ್ ಜಾದವ್ ರವರನ್ನು ಸಂಪರ್ಕಿಸಿ ಅವರಿಗೆ ಸೂಕ್ತ ಇಲಾಖೆಗೆ ವರ್ಗಾವಣೆ ಮಾಡಿಸಿಕೊಡುತ್ತೇನೆ ನಾನು ಕಾಂಗ್ರೆಸ್ ಪಕ್ಷದಲ್ಲಿರುವ ರಾಷ್ಟ್ರೀಯ ನಾಯಕರುಗಳು, ರಾಜ್ಯ ನಾಯಕರುಗಳು, ಹಾಗೂ ಮಂತ್ರಿಗಳ ಪರಿಚಯವಿರುತ್ತದೆ. ಆಗಾಗಿ ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆಂದು ದಿನಾಂಕ: 28-11-2004 ರಂದು ಜಯನಗರಕ್ಕೆ ಬರುವಂತೆ ಅಧಿಕಾರಿಗಳಿಗೆ ಹೇಳಿರುತ್ತಾರೆ. ಅದಕ್ಕೆ ಅಧಿಕಾರಿಗಳು ನನಗೆ ಅನಾರೋಗ್ಯವಿರುವ ಕಾರಣ ಹಾಗೂ ಆಕೆಯ ಪರಿಚಯವೂ ಸಹ ಇಲ್ಲದ ಕಾರಣ ನಾನು ಎಲ್ಲಿಗೂ ಬರುವುದಿಲ್ಲ ಎಂದು ಹೇಳುತ್ತಾರೆ.
ಆ ಸಮಯದಲ್ಲಿ ಸದರಿ ಮಹಿಳೆಯು ಅಧಿಕಾರಿಯವರಿಗೆ ನೀವಿರುವ ಸ್ಥಳಕ್ಕೆ ನಾನೇ ಬರುತ್ತೇನೆಂದು ಹೇಳಿದಾಗ ಅಧಿಕಾರಿಯವರು ವಿಜಯನಗರದ ಕದಂಬ ಹೋಟೆಲ್ ಇಲ್ಲಿಗೆ ಬರಲು ಹೇಳಿರುತ್ತಾರೆ. ಸದರಿ ಮೇಲ್ಕಂಡ ಮಹಿಳೆಯು ದಿ: 28-11-2024ರ ಸುಮಾರು ಸಂಜೆ 5.00ಗಂಟೆಯ ಸಮಯದಲ್ಲಿ ವಿಜಯನಗರದ ಕದಂಬ ಹೋಟೆಲ್‌ಗೆ ಬಂದಿರುತ್ತಾರೆ. ಆ ಸಮಯದಲ್ಲಿ ಅಧಿಕಾರಿಯವರ ಜೊತೆ ಅವರ ಆಪ್ತರಾದ ಶಿವಸ್ವಾಮಿಯವರು ಹಾಗೂ ಅಧಿಕಾರಿಗಳು, ನಂದಿನಿ ನಾಗರಾಜ್ ರವರನ್ನು ಬೇಟಿ ಮಾಡುತ್ತಾರೆ. (ಆ ಸಮಯದಲ್ಲಿ ಚಂದ್ರಶೇಖರ್ ಆದ ನಾನು ಇರುವುದಿಲ್ಲ).
ಆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಸದರಿ ಮಹಿಳೆಯ ದೂರವಾಣಿಗೆ ಕರೆ ಮಾಡಿ ನೀವು ಒಬ್ಬಳು ವಂಚಕಿ, ಮೋಸಗಾತಿ, ನಂಬಿಕೆ ದ್ರೋಹಿ ಎಂದು ಆ ಕಡೆಯಿಂದ ಮಹಿಳೆಗೆ ಬೈಯುತ್ತಿದ್ದಾಗ, ಭೈಯ್ಯುವ ವ್ಯಕ್ತಿಗೆ ಮಹಿಳೆಯು ನಾನು ರಾಹುಲ್ ಗಾಂಧಿಯನ್ನು ಇಲ್ಲಿಗೆ ಕರೆಸುತ್ತೇನೆಂದು ಜೋರಾಗಿ ಕೂಗಾಡುತ್ತಿದ್ದು, ಆ ವ್ಯಕ್ತಿಗೆ ಬೆದರಿಕೆ ಹಾಕುತ್ತಾರೆ. ನಂತರ ಅಧಿಕಾರಿಯವರಾದ ಗೋಪಾಲ್ ಜಾದವ್ ರವರನ್ನು ನಿಮಗೆ ಆಗಬೇಕಾದ ವರ್ಗಾವಣೆಯ ಕೋರಿಕೆಯ ಅರ್ಜಿಯನ್ನು ನನಗೆ ಕೊಡಿ ಎಂದು ಕೇಳುತ್ತಾರೆ. ಅತೀ ಶೀಘ್ರವಾಗಿ ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆಂದು ಹೇಳಿರುತ್ತಾರೆ.
ಆದರೆ ಸದರಿ ಮಹಿಳೆಯ ವರ್ತನೆಯನ್ನು ಕಂಡು ಅಧಿಕಾರಿಯವರಾದ ಗೋಪಾಲ್ ಜಾದವ್‌ರವರಿಗೆ ಬೇಸರವಾಗಿ ಇವರ ಮೇಲೆ ನಂಬಿಕೆ ಇಲ್ಲದೆ ಯಾವುದೇ ಕೋರಿಯ ಪತ್ರವನ್ನು ಸದರಿ ಮಹಿಳೆಗೆ ನೀಡಿರುವುದಿಲ್ಲ. ಹಾಗೂ ಹಿಂದಿರುಗಿ ಬಂದಿರುತ್ತೇನೆAದು ಚಂದ್ರಶೇಖರ್ ಆದ ನನಗೆ ತಿಳಿಸಿರುತ್ತಾರೆ.
ಇದಾದ ನಂತರ ಹಲವು ಬಾರಿ ಗೋಪಾಲ್ ಜಾದವ್ ರವರ ದೂರವಾಣಿ ನಂಬರಿಗೆ ಸತತವಾಗಿ ನಂದಿನಿ ನಾಗರಾಜ್ ರವರು ಅವರ ದೂರವಾಣಿ ನಂಬರುಗಳಿಂದ ಕರೆ ಮಾಡುತ್ತಿರುತ್ತಾರೆ. ಮತ್ತೆ ನಾಲೈದು ದಿನಗಳ ನಂತರ ಸದರಿ ಅಧಿಕಾರಿಯವರ ಜೊತೆಯಲ್ಲಿದ್ದ ಶಿವಸ್ವಾಮಿಯವರಿಗೂ ಸಹ ಶಿವಸ್ವಾಮಿಯವರ ದೂರವಾಣಿಗೆ ಸದರಿ ಮಹಿಳೆ ಮೇಲ್ಕಂಡ ನಂಬರುಗಳಿಂದ ಸತತವಾಗಿ ಕರೆ ಮಾಡಿ ನಿಮ್ಮ ಅಧಿಕಾರಿಯ ಕೆಲಸವಾಗಿದೆ ಹಣ ಕೊಡಿ ಎಂದು ಪೀಡಿಸುತ್ತಿರುತ್ತಾರೆ.
ಇದರಿಂದ ಬೇಸತ್ತು ಶಿವಸ್ವಾಮಿಯವರು ಸಹ ಆಕೆಯ ಪೋನ್ ಕರೆಯನ್ನು ತಿರಸ್ಕರಿಸಿರುತ್ತಾರೆ. ಎರಡು ವಾರಗಳ ನಂತರ ಸದರಿ ಮಹಿಳೆಯು ಸುನೀಲ್ ಕುಮಾರ್ ರವರಿಂದ ಚಂದ್ರಶೇಖರನಾದ ನನ್ನ ಮೊಬೈಲ್ ನಂಬರನ್ನು ಪಡೆದುಕೊಂಡು ನನ್ನ ಪೋನಿಗೆ ಕರೆ ಮಾಡುತ್ತಾರೆ. ಆಗ ನಾನು ನನಗೂ ನಂದಿನಿ ನಾಗರಾಜ್ ರವರಾದ ನಿಮಗೂ ಯಾವುದೇ ಪರಿಚಯವಿಲ್ಲ ಹಾಗೂ ನೀವು ಯಾರೆಂದು ನನಗೆ ತಿಳಿದಿಲ್ಲ, ಹಾಗೂ ನಾನು ನಿಮ್ಮನ್ನು ಇಲ್ಲಿಯವರೆಗೂ ಎಲ್ಲಿಯೂ ಸಹ ನೋಡಿರುವುದಿಲ್ಲ. ಆಗಾಗಿ ನೀವು ನನಗೆ ಕರೆ ಮಾಡಬೇಡಿ ಎಂದು ಹೇಳಿ ಅವರ ಕರೆಗಳನ್ನು ಚಂದ್ರಶೇಖರ್ (ದೂರುದಾರನಾದ) ಆದ ನಾನು ಸಹ ತಿರಸ್ಕರಿಸುತ್ತೇನೆ.
ತದ ನಂತರ ಸುನೀಲ್ ಕುಮಾರ್ ರವರನ್ನು ಸಂಪರ್ಕಿಸಿ ನನಗೆ ಅವರಿಂದ ಕರೆ ಮಾಡಿಸಿ ಸದರಿ ಮಹಿಳೆಯು ಹಣ ನೀಡುವಂತೆ ತಿಳಿಸಿರುತ್ತಾರೆ. ಆಗ ನಾನು ಆ ಮಹಿಳೆ ಯಾರೆಂದು ಗೊತ್ತಿಲ್ಲ. ಅವರಿಗೆ ಯಾವ ಕಾರಣಕ್ಕೆ ಹಣ ನೀಡಬೇಕು ಎಂದು ಪ್ರಶ್ನಿಸಿದೆ ಮತ್ತು ಯಾವುದೆ ಕೆಲಸ ಕಾರ್ಯಗಳು ಅವರಿಂದ ಆಗಿರುವುದಿಲ್ಲವೆಂದು ಹೇಳಿರುತ್ತೇನೆ. ನಂತರ ಸದರಿ ವಿಷಯವನ್ನು ಶಿವಸ್ವಾಮಿರವರಿಗೆ ಈ ವಿಷಯವನ್ನು ತಿಳಿಸಿರುತ್ತೇನೆ.
ಸದರಿ ಮಹಿಳೆ ಪುನಃ ಪುನಃ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸುತ್ತಿದ್ದರು. ಆಗ ನಾನು ಸದರಿ ಮಹಿಳೆಗೆ ನಾವು ಏಕೆ ಹಣವನ್ನು ಕೊಡಬೇಕು ಎಂದು ಹೇಳಿದಾಗ, ಸದರಿ ಮಹಿಳೆಯು ನೀವು ರೂ.10.00 ಲಕ್ಷ ಹಣ ನೀಡದಿದ್ದರೆ ನಿಮ್ಮ ಮೇಲೆ ಪೋಲೀಸ್ ಕಂಪ್ಲೇಂಟ್ ಹಾಗೂ ಜಾತಿ ನಿಂದನೆ ಕೇಸ್ ಹಾಕಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ.
ಆದ್ದರಿಂದ ನಮಗೆ ಭಯವಾಗಿ ನಮಗೆ ಪರಿಚಯವಿರುವ ಹಿರಿಯ ಕಾಂಗ್ರೆಸ್ ಮುಖಂಡರಾದ ಮಾನ್ಯ ಹೆಚ್.ಎಂ.ರೇವಣ್ಣ ಸಾಹೇಬರ ಬಳಿ ಈ ವಿಚಾರವನ್ನು ತಿಳಿಸಲು ದಿ: 08-01-2025 ರಂದು ಸಾಹೇಬರ ಮನೆ ಹತ್ತಿರ ಅಧಿಕಾರಿಯವರಾದ ಗೋಪಾಲ್ ಜಾದವ ರವರು, ಶಿವಸ್ವಾಮಿರವರು ಹಾಗೂ ಚಂದ್ರಶೇಖರ್ ರವರು ಹೋಗಿದ್ದೆವು. ಅದೇ ಸಮಯಕ್ಕೆ ಸುನೀಲ್ ಕುಮಾರ್ (ಮೊ:8105814793) ರವರು ನನ್ನ ಮೊಬೈಲ್ ಗೆ ಕರೆ ಮಾಡಿರುತ್ತಾರೆ. ನಾನು ಸುನೀಲ್ ಕುಮಾಲ್‌ರವರಿಗೆ ಹೆಚ್.ಎಂ.ರೇವಣ್ಣ ಸಾಹೇಬರ ಮನೆ ಬಳಿಬಂದಿದ್ದೇವೆಮದು ತಿಳಿಸಿದೆವು. ಸದರಿ ವ್ಯಕ್ತಿಯು ನನ್ನ ಕರೆಯನ್ನು ಸ್ಥಗಿತಗೊಳಿಸಿ ನಂದಿನಿ ನಾಗರಾಜ್ ರವರಿಗೆ ಹೆಚ್.ಎಂ.ರೇವಣ್ಣ ಸಾಹೇಬರ ಮನೆ ಬಳಿ ಹೋಗಿರುವ ವಿಚಾರವನ್ನು ತಿಳಿಸಿರುತ್ತಾರೆ.
ಸದರಿ ಮಹಿಳೆಯು ತಕ್ಷಣವೇ ನನ್ನ ಮೊಬೈಲ್ ಗೆ ಕರೆ ಮಾಡಿ ನೀವು ಏಕೆ ಅವರ ಬಳ ಹೋಗಿರುತ್ತೀರಿ ಎಂದು ಬೈಯುತ್ತಿರುತ್ತಾರೆ. ಅದೇ ಸಮಯದಲ್ಲಿ ನಮ್ಮ ಪೋನನ್ನು ಹೆಚ್.ಎಂ.ರೇವಣ್ಣ ಸಾಹೇಬರವರಿಗೆ ನೀಡಿದ್ದು, ಅವರು ಕರೆ ಮಾಡಿದ ವಿಷಯವನ್ನು ತಿಳಿಸುತ್ತೇವೆ. ಹೆಚ್ ಎಂ.ರೇವಣ್ಣ ಸಾಹೇಬರು ನನ್ನ ಪೋನಿನ ಮೂಲಕ ಸದರಿ ಮಹಿಳೆಯಾದ ನಂದಿನಿ ನಾಗರಾಜ್ ರವರಿಗೆ ನೀವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಯಾವುದೇ ವಿಷಯವಿದ್ದರು ಸಮಾಧಾನವಾಗಿ ಮಾತನಾಡಿ ಬಗೆಹರಿಸೋಣ ಖುದ್ದಾಗಿ ಪ್ರದೇಶ ಕಾಂಗ್ರೇಸ್ ಕಛೇರಿಗೆ ಬನ್ನಿ ಎಂದು ಸಮಾದಾನದಿಂದ ಮಾತನಾಡುತ್ತಿದ್ದರೂ ಸಹ ಸದರಿ ಮಹಿಳೆಯು ಹೆಚ್.ಎಂ.ರೇವಣ್ಣ ಸಾಹೇಬರಿಗೆ ಏರು ಧ್ವನಿಯಲ್ಲಿ ನಾನೇಕೆ ನಿಮ್ಮಲ್ಲಿಗೆ ಬರಬೇಕು ನಾನೇ ನಿಮ್ಮನ್ನು ಎಲ್ಲಿಗೆ ಕರೆಸಬೇಕು ಅಲ್ಲಿಗೆ ಕರೆಸುತ್ತೇನೆ. ನೀವು ಈ ವಿಚಾರದಲ್ಲಿ ಮಾತನಾಡಲು ಯಾರು ಎಂದು ಅನಾವಶ್ಯಕವಾಗಿ ಈ ವಿಚಾರದಲ್ಲಿ ಪ್ರವೇಶ ಮಾಡಬೇಡಿ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರ ಬಳಿಯೂ ಏರು ದ್ವನಿಯಲ್ಲಿಯೇ ಕೂಗಾಡಿದರು. ಮತ್ತು ರಾಹುಲ್ ಗಾಂಧಿ ಮತ್ತು ಎ.ಸಿ.ಸಿ.ಅಧ್ಯಕ್ಷರ ಗಮನಕ್ಕೆ ತರುತ್ತೇನೆ. ಮತ್ತು ನೀವು ನಿರ್ವಹಿಸುತ್ತಿರುವ ಗ್ಯಾರಂಟಿ ಅಧ್ಯಕ್ಷ ಸ್ಥಾನದಿಂದ ಇಳಿಸಲು ದೂರು ನೀಡುತ್ತೇನೆ ಹೇಳಿ ದೂರವಾಣಿ ಕರೆಯನ್ನು ಕಟ್ಟು ಮಾಡುತ್ತಾರೆ.
ಇದಾದ ಮೂರು ದಿನಗಳ ನಂತರ ಸುನಿಲ್‌ಕುಮಾರ್ ರವರು ಚಂದ್ರಶೇಖರ್ ಆದ ನನಗೆ ಕರೆ ಮಾಡಿ ಆ ಮಹಿಳೆ ನನಗೆ ಕರೆ ಮಾಡಿ 5.00 ಲಕ್ಷ ಹಣ ಬೇಕೆಂದು ಒತ್ತಾಯಿಸುತ್ತಿದ್ದಾಳೆ. ಗೋಪಾಲ ಜಾದವ್ ರವರ ವರ್ಗಾವಣೆ ವಿಷಯದ ಬಗ್ಗೆ ನನ್ನೊಂದಿಗೆ ಈ ವಿಷಯವನ್ನೇ ಇಟ್ಟುಕೊಂಡು ಸಮಸ್ಯೆ ಮಾಡಿಕೊಳ್ಳಬೇಡಿ ಆ ಮಹಿಳೆ ಓಡಾಡಿರಬಹುದು. ಅವರ ಖರ್ಚುವೆಚ್ಚಗಳಿಗೆ ರೂ.5.00 ಲಕ್ಷಗಳನ್ನು ಕೊಡಿ ಮುಂದೆ ನಿಮಗೆ ಯಾವುದೇ ತೊಂದರೆ ಹಾಗೂ ಕರೆಗಳು ಆ ಮಹಿಳೆಯಿಂದ ಬರುವುದಿಲ್ಲವೆಂದು ಸುನಿಲ್ ಕುಮಾರ್ ರವರು ಹೇಳುತ್ತಾರೆ. ಆಗ ನಮ್ಮ ಬಳಿ ಹಣವಿಲ್ಲವೆಂದು ನಾವುಗಳು ತಿಳಿಸಿದಾಗ ಸದರಿ ಸುನೀಲ್‌ಕುಮಾರ್ ರವರು ನೀವು ರೂ.1.00 ಲಕ್ಷವನ್ನಾದರೂ ಆ ಮಹಿಳೆಗೆ ಕೊಡಿ ಎಂದು ತಿಳಿಸುತ್ತಾರೆ. ನೀವು ಕೊಡದಿದ್ದರೆ ಜಾತಿ ನಿಂದಂನೆ ಕೇಸು ಹಾಕಿ ಅನಾವಶ್ಯಕವಾಗಿ ನಿಮಗೆ ತೊಂದರೆ ನೀಡುತ್ತಾರೆಂದು ತಿಳಿಸುತ್ತಾರೆ.
ಇದರಿಂದ ನಾವುಗಳು ಹೆದರಿ ನಮಗೆ ತೊಂದರೆ ಕೊಡುತ್ತಿರುವ ಹಾಗೂ ಅನಾವಶ್ಯಕವಾಗಿ ಸಮಸ್ಯೆ ಮಾಡುತ್ತಿರುವುದರಿಂದ ಈ ಸಮಸ್ಯೆಯಿಂದ ಮುಕ್ತಿಗೊಳ್ಳಲು ರೂ.1.00ಲಕ್ಷಗಳನ್ನು ಕೊಡುತ್ತೇವೆಂದು ತಿಳಿಸಿದೆವು.
ಆಗ ಸುನೀಲ್ ಕುಮಾರ್ ರವರು, ನಂದಿನಿ ನಾಗರಾಜ್ ರವರೊಂದಿಗೆ ಮಾತನಾಡಿ, ನಂದಿನಿ ನಾಗರಾಜ್ ರವರು ಅವರ ಸಹೋದರನಾದ ಎನ್.ಲೋಹಿತ್ ಎಂಬುವ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿ ಎಂದು ಅವರ ಖಾತೆಯ ವಿವರವನ್ನು ನೀಡುತ್ತಾರೆ.
ನೀವು ಬೇಗ ಸಂದಾಯ ಮಾಡದಿದ್ದರೆ ಅಧಿಕಾರಿಯಾದ ಗೋಪಾಲ್ ಜಾದವ್‌ರವರನ್ನು. ಚಂದ್ರಶೇಖರ್ ಆದ ನಿಮ್ಮನ್ನು ಹಾಗೂ ಶಿವಸ್ವಾಮಿಯವರಾದ ವಿರುದ್ದವೂ ಸಹ ಕಿರುಕುಳ ನೀಡುವುದಾಗಿ ಬೆದರಿಕೆ ಒಡ್ಡಿ, ನಾನು ಸುಮ್ಮನೆ ಬಿಡುವುದಿಲ್ಲ ನಿಮ್ಮ ಕೆಲಸಕಾರ್ಯಗಳಿಗೆ ಅಡ್ಡಿಪಡಿಸುತ್ತೇನೆ ಎಂದು ಆ ಮಹಿಳೆ ಬೆದರಿಸಿರುತ್ತಾರೆ.
ಆದ್ದರಿಂದ ಆ ಮಹಿಳೆಯ ಕಿರುಕುಳ ಮತ್ತು ಮಾನಸಿಕ ತೊಂದರೆಯಿAದ ಮುಕ್ತಿಯಾಗಬೇಕೆಂಬ ಉದ್ದೇಶದಿಂದ ದಿನಾಂಕ: 21-01-2025 ರಂದು ರೂ.49,900/- ದಿನಾಂಕ: 22-01-2025ರಂದು ರೂ.50,000/-ಗಳನ್ನು ಅಂದರೆ ಒಟ್ಟು ರೂ.1,00,000/-ಗಳನ್ನು ಲೋಹಿತ್.ಎನ್ ರವರ ಖಾತೆಗೆ ಆನ್‌ಲೈನ್ ಮೂಲಕ ಚಂದ್ರಶೇಖರ್ ಆದ ನಾನು ವರ್ಗಾವಣೆ ಮಾಡಿರುತ್ತೇನೆ.
ಅಲ್ಲದೆ ನಮಗೆ ನಂದಿನಿ ನಾಗರಾಜ್ ರವರಿಂದಾಗಲೀ ಅಥವಾ ಅವರ ಕಡೆಯವರಿಂದಾಗಲೀ ನಮಗೆ ಯಾವುದೇ ತೊಂದರೆಯಾಗಬಾರದು, ನಮಗೆ ಜೀವ ಬೆದರಿಕೆ ಇರುವುದರಿಂದ ನಮಗೆ ಅವರಿಂದ ತೊಂದರೆಯಾಗದಂತೆ ನಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವುದರ ಮೂಲಕ ನಮಗೆ ತೊಂದರೆ ನೀಡುತ್ತಿರುವ ನಂದಿನಿ ನಾಗರಾಜ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ದೂರು ನೀಡಿದ್ದಾರೆ. ಈ ದೂರು ಆಧರಿಸಿ ನಂದಿನಿ ನಾಗರಾಜ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೇ ನಂದಿನಿ ನಾಗರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಎಐಸಿಸಿ ಆದೇಶಿಸಿದೆ.
ಕನ್ನಡಿಗರಿಗಾಗಿ ಕರೆ ನೀಡಿದ್ದ ಅಖಂಡ ಕರ್ನಾಟಕ ಬಂದ್ ಯಶಸ್ವಿ: ವಾಟಾಳ್ ನಾಗರಾಜ್ | Karnataka Bundh
ನಾಗ್ಪುರ ಹಿಂಸಾಚಾರ: ಮತ್ತೆ 14 ಮಂದಿ ಬಂಧನ, ಬಂಧಿತರ ಸಂಖ್ಯೆ 105ಕ್ಕೆ ಏರಿಕೆ, 3 ಹೊಸ FIR ದಾಖಲು | Nagpur violence