Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಕಿ ಇರುವ ಕ್ರಿಮಿನಲ್ ಕೇಸ್‌ಗಳ ನೆಪದಲ್ಲಿ ಪಾಸ್‌ಪೋರ್ಟ್ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

11/04/2026 6:20 PM

ನಮ್ಮ ಸಾವಿನ ನಂತರ ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳು ಏನಾಗುತ್ತವೆ? ನಿಮ್ಮ ಆನ್‌ಲೈನ್ ಪ್ರಪಂಚದ ‘ಡಿಜಿಟಲ್ ವಾರಸುದಾರ’ ಯಾರು?

11/04/2026 6:13 PM

ಸಹೋದ್ಯೋಗಿ ಮಹಿಳೆಯ ಎದೆಯತ್ತ ದಿಟ್ಟಿಸುವುದು ‘ವೊಯರಿಜಂ’ ಅಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು !

11/04/2026 6:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫೆ.22 ರಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !
KARNATAKA

ಫೆ.22 ರಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

By kannadanewsnow5720/02/2026 7:15 AM

ಫೆಬ್ರವರಿ  22 ರಂದು ನಡೆಯುವ  ಕಲ್ಯಾಣ ಕರ್ನಾಟಕ ವೃಂದದ ವಿವಿಧ ಖಾಲಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.

ಬುಧುವಾರ(ಫೆ.18) ರಂದು ಜಿಲ್ಲಾಡಳಿತ ಭವನದನಲ್ಲಿ ಆಯೋಜಿಸಲಾಗಿದ್ದ ಬಿಡಿಎ, ಕೆಕೆಆರ್‌ಟಿಸಿ, ಕೆಎಸ್‌ಡಿಎಲ್,  ತಾಂತ್ರಿಕ ಶಿಕ್ಷಣ ಇಲಾಖೆ, ಆರ್‌ಜಿಯುಹೆಚ್‌ಎಸ್, ಬಿಡಬ್ಲೂಎಸ್‌ಎಸ್‌ಬಿ, ಕೆಎಸ್‌ಎಸ್‌ಐಡಿಸಿ ಮುಂತಾದ ಇಲಾಖೆ, ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿಯ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 2205 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಗಳಲ್ಲಿ ಎಷ್ಟೇ ಎಚ್ಚರವಹಿಸಿದರೂ ಕೆಲವು ತಪ್ಪುಗಳಾಗುತ್ತವೆ, ಹಾಗಾಗಿ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಪರೀಕ್ಷಾ ಮಾರ್ಗಸೂಚಿಗಳನ್ನು ಸರಿಯಾಗಿ ಓದಿಕೊಂಡು  ಕರ್ತವ್ಯ ನಿರ್ವಹಿಸಬೇಕು.  ತಾಂತ್ರಿಕತೆ ಬಹಳ ಮುಂದುವರೆದಿದ್ದು ಪರೀಕ್ಷೆಗಳಲ್ಲಿ ತಾಂತ್ರಿಕಕತೆ ಬಳಸುವ ಅಪಾಯವಿರುವುದರಿಂದ ಹೆಚ್ಚು ಜಾಗರೂಕರಾಗಿರಬೇಕೆಂದರು.

ಪರೀಕ್ಷಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳಾದ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಬ್ಲೂ ಟೂತ್ ಡಿವೈಸ್, ಪೇಜರ್, ವೈರ್‌ಲೆಸ್, ಕ್ಯಾಲ್ಕುಲೇಟರ್, ಮೊದಲಾದ ಎಲೆಕ್ಟಾçನಿಕ್ ವಸ್ತುಗಳಿಗೆÀ ನಿರ್ಬಂದವಿರುತ್ತದೆೆ, ಆದಾಗ್ಯೂ ಯಾವುದೇ ವ್ಯಕ್ತಿಗಳು ಇವುಗಳನ್ನು ಕೇಂದ್ರದೊಳಗೆ ತಂದರೆ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸಿ ಆಯೋಗ ನಡೆಸುವ ಎಲ್ಲಾ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದೆಂದರು.

   ಪರೀಕ್ಷಾ ಉಪ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಜಾಮರ್ ಕ್ಯಾಮರಾ (ಎಚಿmmeಡಿ) ಒದಗಿಸಬೇಕು. ಪ್ರವೇಶ ಪತ್ರ ಮತ್ತು ಮೂಲ ಗುರುತಿನ ಚೀಟಿ ಹೊಂದಿರಬೇಕು. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿದ ಆಸನದಲ್ಲಿ ಕುಳಿತಿರುವುದನ್ನು ಖಚಿತಪಡಿಸಿಕೊಳ್ಳಬೇಕು.  ನಾಮಿನಲ್ ರೋಲ್‌ನಲ್ಲಿರುವ  ಫೋಟೋ ಮತ್ತು ಸಹಿಯನ್ನು ಪರಾಮರ್ಶಿಸಿ ಅಭ್ಯರ್ಥಿಯ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಆಸೀನರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಅವರದೇ ನೋಂದಣಿ ಸಂಖ್ಯೆಯುಳ್ಳ ಒ.ಎಂ.ಆರ್. ಹಾಳೆಗಳನ್ನು ನೀಡಿ ಅದರಲ್ಲಿರುವ ಅಂಕಣಗಳನ್ನು ಸೂಕ್ತವಾಗಿ ಭರ್ತಿ ಮಾಡುವಂತೆ  ಕೊಠಡಿ ವೀಕ್ಷಕರು ಆಭ್ಯರ್ಥಿಗಳಿಗೆ ಸೂಚಿಸಬೇಕು.

  ಕೊಠಡಿ ವೀಕ್ಷಕರು ಆಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅದರಲ್ಲಿರುವ ಸೂಚನೆಗಳನ್ನು ಓದಿಕೊಂಡ ನಂತರ ಉತ್ತರಿಸಲು ತಿಳಿಸಬೇಕು. ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಉತ್ತಮ ಡೆಸ್ಕ್ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು, ಪರೀಕ್ಷಾ ಕೇಂದ್ರದಲ್ಲಿ ಆಸನಗಳ  ವ್ಯವಸ್ಥೆ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ತುಂಬು ತೊಳಿನ ಶರ್ಟ್ ಧರಿಸಬಾರದು.

ಪರೀಕ್ಷಾ ಕೇಂದ್ರಗಳು : ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜ್, ರಾಜನಹಳ್ಳಿ ಸೀತಮ್ಮ ಸರ್ಕಾರಿ ಮಹಿಳಾ ಪಿಯು ಕಾಲೇಜು, ಬಾಲಕರ ಸರ್ಕಾರಿ ಪಿಯು ಕಾಲೇಜು, ಡಾ. ಶಾಮನೂರು ಶಿವಶಂಕರಪ್ಪ ಪಿಯು ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಸಮಯ : ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 (ಪತ್ರಿಕೆ 1), ಮಧ್ಯಾಹ್ನ 2.30 ರಿಂದ ಸಂ 4.30 (ಪತ್ರಿಕೆ 2 ) ನಡೆಸಲಾಗುವುದು ಎಂದರು.

ಪರೀಕ್ಷಾ ಕೆಂದ್ರಗಳ ಸುತ್ತ 200 ಮೀ ನಿಷೇಧಿತ ಪ್ರದೇಶ : ಡಿ.ಸಿ

ಫೆ.22 ರಂದು  ಕಲ್ಯಾಣ ಕರ್ನಾಟಕ ವೃಂದದ ವಿವಿಧ ಖಾಲಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ  ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು ಈ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಲು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಆದೇಶಿಸಿದ್ದಾರೆ.

Competitive examination for Kalyana Karnataka cadre posts on Feb. 22: It is mandatory for candidates to follow these rules!
Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

11/04/2026 4:37 PM2 Mins Read

ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ ಸಿಗುವ ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳೇನು? ಸಂಪೂರ್ಣ ವಿವರ ಇಲ್ಲಿದೆ

11/04/2026 4:24 PM2 Mins Read

BIG NEWS : `ಗೋಲ್ಡ್ ಲೋನ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ.!

11/04/2026 4:18 PM2 Mins Read
Recent News

ಬಾಕಿ ಇರುವ ಕ್ರಿಮಿನಲ್ ಕೇಸ್‌ಗಳ ನೆಪದಲ್ಲಿ ಪಾಸ್‌ಪೋರ್ಟ್ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

11/04/2026 6:20 PM

ನಮ್ಮ ಸಾವಿನ ನಂತರ ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳು ಏನಾಗುತ್ತವೆ? ನಿಮ್ಮ ಆನ್‌ಲೈನ್ ಪ್ರಪಂಚದ ‘ಡಿಜಿಟಲ್ ವಾರಸುದಾರ’ ಯಾರು?

11/04/2026 6:13 PM

ಸಹೋದ್ಯೋಗಿ ಮಹಿಳೆಯ ಎದೆಯತ್ತ ದಿಟ್ಟಿಸುವುದು ‘ವೊಯರಿಜಂ’ ಅಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು !

11/04/2026 6:06 PM

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕಿದೆಯೇ? ಕಾನೂನು ಏನು ಹೇಳುತ್ತದೆ? ತಿಳಿಯಿರಿ

11/04/2026 4:55 PM
State News
KARNATAKA

ಪೋಷಕರೇ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

By kannadanewsnow5711/04/2026 4:37 PM KARNATAKA 2 Mins Read

ಬೆಂಗಳೂರು: ಹತ್ತನೇ ತರಗತಿ (SSLC) ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ “ಮುಂದಿನ ದಾರಿ…

ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ ಸಿಗುವ ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳೇನು? ಸಂಪೂರ್ಣ ವಿವರ ಇಲ್ಲಿದೆ

11/04/2026 4:24 PM

BIG NEWS : `ಗೋಲ್ಡ್ ಲೋನ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ.!

11/04/2026 4:18 PM

ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

11/04/2026 4:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.