ಬೆಂಗಳೂರು: ನಗರದಲ್ಲಿ ಗಣೇಶ ವಿಸರ್ಜನೆ ವೇಳೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಗಣೇಶೋತ್ಸವಕ್ಕೆ ಬಲವಂತವಾಗಿ ಚಂದಾ ವಸೂಲಿ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರಲ್ಲಿ ಗಣೇಶ ವಿಸರ್ಜನೆ ವೇಳೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ವಹಿಸಲು ಡಿಸಿಪಿ, ಎಸಿಪಿಗಳ ಜೊತೆ ಸಭೆ ನಡೆಸಿದರು. ಈ ಬಳಿಕ ಮಾತನಾಡಿದಂತ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರು, ಎಲ್ಲಾ ವಿಭಾಗದ ಡಿಸಿಪಿಗಳು, ಎಸಿಪಿಗಳ ಜೊತೆಗೆ ಸಭಎ ಮಾಡಿದ್ದೇನೆ. ನಿಯಮ ಉಲ್ಲಂಘನೆಯಾದರೇ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಲವಂತವಾಗಿ ಯಾರೂ ಸಹ ಚಂದಾ ವಸೂಲಿ ಮಾಡುವಂತಿಲ್ಲ. ಬಲವಂತವಾಗಿ ವಸೂಲಿ ಮಾಡಿದ್ರೆ ಪ್ರಕರಣ ದಾಖಲಿಸಲಾಗುತ್ತದೆ. ಇದುವರೆಗೂ ಆ ರೀತಿಯ ಯಾವುದೇ ದೂರುಗಳು ಬಂದಿಲ್ಲ. ಭದ್ರತೆ ವಿಚಾರದಲ್ಲಿ ಎಲ್ಲಾ ಸಿಬ್ಬಂದಿಗೂ ಕ್ರಮಕ್ಕೆ ಸೂಚಿಸಲಾಗಿದೆ ಎಂಬುದಾಗಿ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
BREAKING: ರಸ್ತೆ ಅಪಘಾತದಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಭಾವ ಶಿವಲಿಂಗಯ್ಯ ಸಾವು
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ