ಬೆಂಗಳೂರು: ಕನ್ನಡದ ಪ್ರಖ್ಯಾತ ವಾಗ್ಮಿ, ಹಾಸ್ಯ ಕಲಾವಿಧೆ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು (67) ಅವರು ಅನಾರೋಗ್ಯದಿಂದ ನಿಧನರಾಗಿರುವುದಾಗಿ ತಿಳಿದು ಬಂದಿದೆ.
ಕೆಲ ವರ್ಷಗಳಿಂದ ಅನಾರೋಗ್ಯದಿಂದ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಜಯಪ್ರಕಾಶ್ ಬರಗೂರು ನಿಧನರಾಗಿದ್ದಾರೆ.
ಅಂದಹಾಗೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಂತ ಜಯಪ್ರಕಾಶ್ ಬರಗೂರು ಜಯದೇವ ಆಸ್ಪತ್ರೆಗೆ ದಾಖಲಾಗಿ ಕೆಲ ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಬಗ್ಗೆ ಸುಧಾ ಬರಗೂರು ಅವರು ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಾವೇ ಮಾಹಿತಿ ಹಂಚಿಕೊಂಡಿದ್ದರು.
ಇಂದು ಅನಾರೋಗ್ಯದಿಂದ ಖ್ಯಾತ ಹಾಸ್ಯ ಕಲಾವಿಧೆ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. ಅವರು ಓರ್ವ ಪತ್ನಿ, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಪಾರ್ಥೀವ ಶರೀರವನ್ನು ಕತ್ರಿಗುಪ್ಪೆಯ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಳಿ ಇರುವ ಸುಧಾ ಬರಗೂರು ಅವರ ನಿವಾಸದಲ್ಲಿ ನಾಳೆ ಬೆಳಿಗ್ಗೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆ ಬಳಿಕ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
BREAKING: ಬೆಳಗಾವಿ ಅಧಿವೇಶನದ ವೇಳೆ ಬಂಧನದ ಹೈಡ್ರಾಮಾ ಕೇಸ್: ರಾಜ್ಯಪಾಲರಿಗೆ 8 ಪುಟಗಳ ದೂರು ನೀಡಿದ ಸಿ.ಟಿ ರವಿ
BIGG NEWS : 2025 ನೇ ಸಾಲಿನ ರಾಜ್ಯ `ಸಾರ್ವತ್ರಿಕ ರಜೆ’ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Holiday List 2025